ದೇಶ

ಸಾರ್ವಭೌಮ, ಸ್ವತಂತ್ರ ಪ್ಯಾಲೆಸ್ತೀನ್ ಗೆ ಭಾರತರ ನಿರಂತರ ಬೆಂಬಲವಿದೆ: ಪ್ರಧಾನಿ ಮೋದಿ

Sumana Upadhyaya
ನವದೆಹಲಿ: ದೀರ್ಘಾವಧಿಯ ಸಂಘರ್ಷಕ್ಕೆ ವಿಸ್ತಾರವಾದ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ಯಾಲೆಸ್ತೀನ್ ಮತ್ತು ಇಸ್ರೇಲ್ ದೇಶಗಳು ಮುಂದಾಗಲಿವೆ ಎಂದು ಭಾರತ ಆಶಾವಾದ ವ್ಯಕ್ತಪಡಿಸಿದೆ.
ಪ್ಯಾಲೆಸ್ತೀನ್ ಭಾರತದ ಹಳೆ ಸ್ನೇಹಿತನಾಗಿದ್ದು, ಸಾರ್ವಭೌಮ, ಸ್ವತಂತ್ರ, ಏಕೈಕ ಮತ್ತು ಕಾರ್ಯಸಾಧ್ಯವಾದ ಪ್ಯಾಲೆಸ್ಟೈನ್, ಇಸ್ರೇಲ್ನೊಂದಿಗೆ ಶಾಂತಿಯುತವಾಗಿ ಸಹ-ಅಸ್ಥಿತ್ವವನ್ನು ನೋಡಸು ನಾವು ಬಯಸುತ್ತೇವೆ. ಇಂದು ಮಾತುಕತೆ ನಡೆಸಿದ ವೇಳೆ ಅಧ್ಯಕ್ಷ ಅಬ್ಬಾಸ್ ಅವರಿಗೆ ನಾನು ಈ ವಿಷಯವನ್ನು ತಿಳಿಸಿದ್ದೇನೆ ಎಂದರು. 
ದೀರ್ಘಾವಧಿಯ ಒಕ್ಕೂಟ ಮತ್ತು ಸ್ನೇಹದ ಆಧಾರದ ಮೇಲೆ ನಮ್ಮ ಸಂಬಂಧವನ್ನು ನಿರ್ಮಿಸಲಾಗಿದೆ. ಪ್ಯಾಲೆಸ್ತೀನ್ ವಿಷಯದಲ್ಲಿ ಭಾರತ ನಿರಂತರವಾಗಿ ಬೆಂಬಲ ನೀಡುತ್ತಾ ಬಂದಿದ್ದು ಅದು ಗಟ್ಟಿಯಾಗಿ ಉಳಿದಿದೆ ಎಂದರು.
ಪ್ರಧಾನಿ ಮೋದಿ ಮತ್ತು ಪ್ಯಾಲೆಸ್ತೀನ್ ಅಧ್ಯಕ್ಷ ಮೊಹಮ್ಮದ್ ಅಬ್ಬಾಸ್ ಪಶ್ಚಿಮ ಏಷ್ಯಾ ಮತ್ತು ಮಧ್ಯ ಪೂರ್ವದ ಕುರಿತ ಪರಿಸ್ಥಿತಿಗಳ ಬಗ್ಗೆ ಕೂಡ ಚರ್ಚೆ ನಡೆಸಿದರು.
ನಿರಂತರವಾದ ರಾಜಕೀಯ ಮಾತುಕತೆ ಮತ್ತು ಶಾಂತಿಯುತ ಮಾರ್ಗಗಳ ಮೂಲಕ ಪಶ್ಚಿಮ ಏಷ್ಯಾದ ಸವಾಲುಗಳನ್ನು ಎದುರಿಸುವುದಕ್ಕೆ ನಾವು ಒಪ್ಪಿಕೊಂಡಿದ್ದೇವೆ. ಪ್ಯಾಲೆಸ್ತೀನ್ ನ ಆರ್ಥಿಕತೆ ಮತ್ತು  ಅಲ್ಲಿನ ಜನರ ಪರಿಸ್ಥಿತಿಯನ್ನು ಸುಧಾರಿಸಲು ಒಟ್ಟಾಗಿ ಸಹಕಾರ ನೀಡಲು ಎರಡೂ ದೇಶಗಳು ಒಪ್ಪಿಕೊಂಡಿವೆ. ಪಾಕಿಸ್ತಾನದ ಅಭಿವೃದ್ಧಿ ಮತ್ತು ಸಾಮರ್ಥ್ಯ-ನಿರ್ಮಾಣ ಪ್ರಯತ್ನಗಳಿಗೆ ಭಾರತದ ನಿರಂತರ ಬೆಂಬಲವಿದೆ ಎಂದು ಪ್ರಧಾನಿ ಇದೇ ಸಂದರ್ಭದಲ್ಲಿ ಹೇಳಿದರು.
ಎರಡೂ ದೇಶಗಳು ಇಂದು ವಿದೇಶಾಂಗ ಸಚಿವರ ಸಮ್ಮುಖದಲ್ಲಿ 5 ತಿಳುವಳಿಕೆ ಒಪ್ಪಂದಗಳಿಗೆ ಸಹಿ ಹಾಕಿದವು. ರಾಯಭಾರಿ ಮತ್ತು ಅಧಿಕಾರಿಗಳ ಪಾಸ್ ಪೋರ್ಟ್ ನಲ್ಲಿ ವೀಸಾ ವಿನಾಯ್ತಿ, ಯುವ ವ್ಯವಹಾರ ಮತ್ತು ಕ್ರೀಡೆಯಲ್ಲಿ ಪರಸ್ಪರ ಸಹಕಾರ, ಕೃಷಿ ಸಹಕಾರ, ಆರೋಗ್ಯ ವಲಯದಲ್ಲಿ ಸಹಕಾರ, ಮಾಹಿತಿ ತಂತ್ರಜ್ಞಾನ ಮತ್ತು ವಿದ್ಯುನ್ಮಾನ ವಲಯಗಳಲ್ಲಿ ಸಹಕಾರಗಳು ಸೇರಿವೆ.
SCROLL FOR NEXT