ನವದೆಹಲಿ: ಮಹಾತ್ಮಾ ಗಾಂಧಿಯವರ ಐದನೇ ಮಗನ ಅವಳಿ ಮರಿ ಮೊಮ್ಮಕ್ಕಳು ಮೋಟಾರು ಸೈಕಲ್ ವ್ಯವಹಾರದ ಮೂಲಕ ಈಗ ಶತಕೋಟ್ಯಾಧಿಪತಿಗಳಾಗಿದ್ದಾರೆ.
ಜಮ್ನಾಲಾಲ್ ಬಜಾಜ್ ಅವರ ಮೊಮ್ಮಕ್ಕಳಾದ ಅನುರಂಗ್ ಜೈನ್ ಹಾಗೂ ತಾರಂಗ್ ವಾಹನ ಉದ್ಯಮದಲ್ಲಿ ಈ ಸಾಧನೆ ಮಾಡಿದ್ದಾರೆ. ಬ್ಲೂಮ್ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ ಅನುರಂಗ್ ಜೈನ್ ಅವರ ಆಟೋ ಕಂಪೆನಿಗಳ ತಯಾರಕ ಎಂಡ್ಯೂರೆನ್ಸ್ ಟೆಕ್ನಾಲಜೀಸ್ ಕಂಪೆನಿಯ ನಿವ್ವಳ ಮೌಲ್ಯ 1.1 ಶತಕೋಟಿ ಡಾಲರ್ಗೆ ಏರಿದೆ.
ಅವರ ಸಹೋದರ ತಾರಂಗ್ ಅವರ ವರೋಕ್ ಗ್ರೂಪ್ 1.1 ಶತಕೋಟಿಯಷ್ಟು ಸಂಪತ್ತನ್ನು ಹೊಂದಿದೆ. ಈ ಎರಡೂ ಕಂಪನಿಗಳು ತಮ್ಮ ಚಿಕ್ಕಪ್ಪನ ಬಜಾಜ್ ಆಟೋ ಕಂಪೆನಿಯ ಸಾಧನೆಯ ಮಾರ್ಗದಲ್ಲಿ ನಾಗಲೋಟದ ಯಶಸ್ಸು ಸಾಧಿಸಿದೆ.