ಡ್ಯಾನ್ಸ್ ಮಾಡಲು ನಿರಾಕರಿಸಿದ ಪತ್ನಿಯನ್ನು ಮನೆಮೇಲಿಂದ ನೂಕಿದ ಪತಿ
ಮದುವೆ ಸಮಾರಂಭದಲ್ಲಿ ತನ್ನೊಂದಿಗೆ ಡ್ಯಾನ್ಸ್ ಮಾಡಲು ನಿರಾಕರಿಸಿದ ಪತ್ನಿಯನ್ನು ಮನೆಯ ಮೇಲ್ಚಾವಣಿ ಮೇಲಿಂದ ತಳ್ಳಿರುವ ಘಟನೆ ...
ಕಾನ್ಪುರ: ಮದುವೆ ಸಮಾರಂಭದಲ್ಲಿ ತನ್ನೊಂದಿಗೆ ಡ್ಯಾನ್ಸ್ ಮಾಡಲು ನಿರಾಕರಿಸಿದ ಪತ್ನಿಯನ್ನು ಮನೆಯ ಮೇಲ್ಚಾವಣಿ ಮೇಲಿಂದ ತಳ್ಳಿರುವ ಘಟನೆ ಬಾಂದಾ ಜಿಲ್ಲೆಯ ಚಿಲ್ಲಾಘಟ್ ನ ದಿಗ್ವಾಟ್ ಎಂಬ ಹಳ್ಳಿಯಲ್ಲಿ ನಡೆದಿದೆ.
ವಿಶಾಖ ತಿವಾರಿ ಎಂಬ ಮಹಿಳೆಯ ಎಂರಡು ಕಾಲುಗಳು ಮುರಿದಿವೆ, ಜೊತೆಗೆ ಆಕೆಯ ಕೈ ಮತ್ತು ಹೊಟ್ಟೆಗೆ ತೀವ್ರವಾದ ಪೆಟ್ಟು ಬಿದ್ದಿದೆ.
ಶನಿವಾರ ಸಂಜೆ ದಿಗ್ವಾತ್ ಗ್ರಾಮದಲ್ಲಿ ನಡೆಯುತ್ತಿದ್ದ ವಿವಾಹ ಸಮಾರಂಭದಲ್ಲಿ ವಿಶಾಖ ಭಾಗವಹಿಸಿದ್ದರು. ಈ ವೇಳೆ ಕುಡಿದ ಮತ್ತಿನಲ್ಲಿದ್ದ ವಿಶಾಖ ಪತಿ ಅಜಯ್ ಅಲ್ಲಿ ನೆರೆದಿದ್ದ ಇತರ ಅತಿಥಿಗಳ ಜೊತೆ ಮತ್ತು ತನ್ನ ಜೊತೆ ಡ್ಯಾನ್ಸ್ ಮಾಡುವಂತೆ ಒತ್ತಾಯಿಸಿದ್ದಾನೆ. ಆದರೆ ಅದಕ್ಕೆ ಆಕೆ ನಿರಾಕರಿಸಿದ್ದಾಳೆ.
ಇದರಿಂದ ಕುಪಿತಗೊಂಡ ಅಜಯ್ ಆಕೆಯನ್ನು ಮೇಲ್ಚಾವಣಿ ಮೇಲಿಂದ ಎಸೆದಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು ಅಜಯ್ ನನ್ನು ಪೊಲೀಸರು ಬಂಧಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.