ದೇಶ

ಬಿಎಸ್ಎಫ್ ಎಕ್ಸಾಂ ಟಾಪರ್'ಗೆ ಉಗ್ರರಿಂದ ಬೆದರಿಕೆ ಕರೆ!

Manjula VN
ಶ್ರೀನಗರ: ಗಡಿ ಭದ್ರತಾ ಪಡೆ (ಬಿಎಸ್ಎಫ್) ಪರೀಕ್ಷೆಯಲ್ಲಿ ಟಾಪರ್ ಆಗಿರುವ ಕಾಶ್ಮೀರ ಯುವಕನಿಗೆ ಉಗ್ರರು ಬೆದರಿಕೆ ಕರೆ ಮಾಡಿದ್ದು, ರಕ್ಷಣೆ ನೀಡುವಂತೆ ಯುವಕರ ಕೇಂದ್ರ ಮೊರೆ ಹೋಗಿದ್ದಾನೆಂದು ವರದಿಗಳು ತಿಳಿಸಿವೆ. 
ನಬೀಲ್ ಅಹ್ಮದ್ ವಾಹಿ ಬಿಎಸ್ಎಫ್ ನೇಮಕಾತಿ ಪರೀಕ್ಷೆಯಲ್ಲಿ ಟಾಪರ್ ಆಗಿದ್ದು, ಉಗ್ರರು ಜೀವ ಬೆದರಿಕೆ ಕರೆಗಳನ್ನು ನೀಡುತ್ತಿರುವ ಹಿನ್ನಲೆಯಲ್ಲಿ ರಕ್ಷಣೆ ನೀಡುವಂತೆ ನಬೀಲ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮನೇಕಾ ಗಾಂಧಿಯವರ ಬಳಿ ಮನವಿ ಮಾಡಿದ್ದಾರಂದು ತಿಳಿದುಬಂದಿದೆ. 
ನೇಮಕಾತಿ ಪರೀಕ್ಷೆ ಬಳಿಕ ನಬೀಲ್ ಹಾಗೂ ಆತನ ಸಹೋದರಿ ಇಬ್ಬರಿಗೂ ಉಗ್ರರು ಜೀವ ಬೆದರಿಕೆ ಕರೆ ನೀಡಿದ್ದಾರೆಂದು ಮೂಲಗಳು ತಿಳಿಸಿವೆ. 
ಕೆಲ ದಿನಗಳ ಹಿಂದಷ್ಟೇ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಭಯೋತ್ಪಾದಕರು ಯುವ ಸೇನಾಧಿಕಾರಿಯಾಗಿದ್ದ ಫಯಾಜ್ ಅವರನ್ನು ಅಪಹರಿಸಿ, ಗುಂಡಿಟ್ಟು ಹತ್ಯೆ ಮಾಡಿತ್ತು. ಇದೀಗ ಮತ್ತೊಬ್ಬ ಯುವಕನಿಗೆ ಉಗ್ರರು ಬೆದರಿಕೆ ಕರೆ ನೀಡಿರುವುದು ಆಘಾತಕಾರಿ ಬೆಳವಣಿಗೆಯಾಗಿದೆ. 
SCROLL FOR NEXT