ದೇಶ

ಇಸ್ರೊಗೆ 2014ನೇ ಸಾಲಿನ ಇಂದಿರಾ ಗಾಂಧಿ ಶಾಂತಿ ಪ್ರಶಸ್ತಿ

Sumana Upadhyaya
ನವದೆಹಲಿ: ನಿರಸ್ತ್ರೀಕರಣ ಮತ್ತು ಅಭಿವೃದ್ಧಿ 2014 ಇಂದಿರಾ ಗಾಂಧಿ ಶಾಂತಿ ಪ್ರಶಸ್ತಿಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ ನೀಡಲಾಗಿದೆ.
ಮಾಜಿ ಪ್ರಧಾನ ಮಂತ್ರಿ ಡಾ. ಮನಮೋಹನ್ ಸಿಂಗ್ ಅವರು ಪ್ರಶಸ್ತಿಯನ್ನು ಇಸ್ರೊ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್ ಅವರಿಗೆ ಇಂದಿರಾ ಗಾಂಧಿ ಸ್ಮಾರಕ ಟ್ರಸ್ಟ್ ಅಧ್ಯಕ್ಷೆ ಸೋನಿಯಾ ಗಾಂಧಿ ಸಮ್ಮುಖದಲ್ಲಿ ನೀಡಿದರು.
ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಅವರ ನೇತೃತ್ವದ ತಂಡ 2014ರಲ್ಲಿ ಬಹುಮಾನವನ್ನು ಘೋಷಿಸಿತ್ತು. ಪ್ರಶಸ್ತಿ ಒಂದು ಕೋಟಿ ರೂಪಾಯಿ ನಗದು ಮತ್ತು ಸನ್ಮಾನವನ್ನು ಒಳಗೊಂಡಿದೆ.  
ಇಸ್ರೋ ಸಂಸ್ಥೆಯ ಮಹತ್ವಪೂರ್ಣ ಸಾಧನೆಗಳು, ಅಂತಾರಾಷ್ಟ್ರೀಯ ಸಂಬಂಧಗಳ ವರ್ಧನೆಯಲ್ಲಿ ಶಾಂತಿಯುತ ಮಾರ್ಗದ ಮೂಲಕ ಇಸ್ರೋ ಸಂಸ್ಥೆ ಇಟ್ಟ ಹೆಜ್ಜೆ, ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಗೆ ಇಸ್ರೋ ಸಂಸ್ಥೆಯ ಪ್ರಮುಖ ಪಾತ್ರ, ಗ್ರಾಮೀಣ ಮತ್ತು ದೂರದ ಪ್ರದೇಶಗಳ ಜನರಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ ಇಸ್ರೋದ ಪಾತ್ರ ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ.
SCROLL FOR NEXT