ದೇಶ

ನ್ಯಾಯ ಕೊಡಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ: ಸುಪ್ರೀಂ, ಮೋದಿಗೆ ತ್ರಿವಳಿ ತಲಾಖ್ ಸಂತ್ರಸ್ತೆ

Manjula VN
ಡೆಹರಾಡೂನ್: ನ್ಯಾಯಾಂಗ ವ್ಯವಸ್ಥೆಯಿಂದ ತನಗೆ ನ್ಯಾಯ ದೊರಕದಿದ್ದರೆ, ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ತ್ರಿವಳಿ ತಲಾಖ್ ಸಂತ್ರಸ್ಥೆಯೊಬ್ಬಳು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಸುಪ್ರೀಂಕೋರ್ಟ್'ಗೆ ತಿಳಿಸಿದ್ದಾಳೆ. 
ಪತಿಯಿಂದ ತ್ರಿವಳಿ ತಲಾಖ್ ಪಡೆದಿರುವ ಸಂತ್ರಸ್ತ ಮಹಿಳೆ ಪ್ರಧಾನಂತ್ರಿ ನರೇಂದ್ರ ಮೋದಿ ಹಾಗೂ ಸುಪ್ರೀಂಕೋರ್ಟ್ ಬಳಿ ನ್ಯಾಯಕ್ಕಾಗಿ ಮೊರೆ ಇಟ್ಟಿದ್ದಾರೆ. ನ್ಯಾಯಾಂಗ ವ್ಯವಸ್ಥೆಯಿಂದ ನನಗೆ ನ್ಯಾಯ ಸಿಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮಹಿಳೆ ಬೆದರಿಕೆ ಹಾಕಿದ್ದಾಳೆ. 
ನ್ಯಾಯಮೂರ್ತಿ ಜಸ್ಟಿಸ್ ಜೆ.ಎಸ್.ಖೇಹರ್ ನೇತೃತ್ವದ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠವು ತ್ರಿವಳಿ ತಲಾಖ್'ನ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಲಾದ ಅರ್ಜಿಗಳ ಮೇಲಿನ 6 ದಿನಗಳ ಸುದೀರ್ಘ ವಿಚಾರಣೆಯನ್ನು ನಿನ್ನೆ ಮುಗಿಸಿದ್ದು, ತೀರ್ಪನ್ನು ಕಾಯ್ದಿರಿಸಿದೆ. 
ಮುಸ್ಲಿಂ ಸಮುದಾಯದಲ್ಲಿನ ವಿವಾಹವು ಒಂದು ಒಪ್ಪಂದವಾಗಿದ್ದು, ಮಹಿಳೆ ತನ್ನ ಘನತೆ ಹಾಗೂ ಗೌರವಗಳನ್ನು ರಕ್ಷಿಸಿಕೊಳ್ಳಲು ನಿಕಾಹ್ ನಾಮಾದಲ್ಲಿ ಕೆಲವು ಷರತ್ತುಗಳಿಗೆ ಹೆಚ್ಚಿನ ಮಹತ್ವ ಕೊಡಬಹುದು. ಆಕೆ ಕೂಡ ತನ್ನ ಪತಿ ವಿರುದ್ಧ ತ್ರಿವಳಇ ತಲಾಖ್ ಘೋಷಿಸಬಹುದು ಮತ್ತು ವಿಚ್ಛೇದನ ಪ್ರಕರಣಗಳಲ್ಲಿ ಅತ್ಯಧಿಕ ಮೆಹರ್ ಆಗ್ರಹಿಸಬಹುದು ಎಂದು ಕೆಲ ದಿನಗಳ ಹಿಂದಷ್ಟೇ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳು ಸುಪ್ರೀಂಕೋರ್ಟ್'ಗೆ ತಿಳಿಸಿತ್ತು. 
SCROLL FOR NEXT