ನವದೆಹಲಿ: ಬಿಹಾರ ಮಧ್ಯ ನಿಷೇಧ ಜಾರಿ ಸಂಬಂಧ ಸುಪ್ರೀಂಕೋರ್ಟ್ ವಿಚಾರಣೆಯನ್ನು ಮೇ 29ಕ್ಕೆ ನಡೆಸಲು ತೀರ್ಮಾನಿಸಿದೆ.
ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಮಧ್ಯ ನಿಷೇಧವನ್ನು ಘೋಷಿಸಿತ್ತು. ಅಲ್ಲದೆ ರಾಜ್ಯದಲ್ಲಿನ ಉತ್ಪಾದಕ ಸಂಸ್ಥೆಗಳು ಮಧ್ಯವನ್ನು ರಾಜ್ಯದಿಂದ ರವಾನಿಸಲು ಮೇ 31ಕ್ಕೆ ಅಂತಿಮ ಗಡುವು ನೀಡಿತ್ತು. ಈ ಸಂಬಂಧ ಮಧ್ಯ ಉತ್ಪಾದಕ ಸಂಸ್ಥೆಗಳು ಗಡುವನ್ನು ವಿಸ್ತರಿಸುವಂತೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
ಈ ಸಂಬಂಧ ಸುಪ್ರೀಂಕೋರ್ಟ್ ವಿಚಾರಣೆಯನ್ನು ಮೇ 29ಕ್ಕೆ ನಡೆಸಲು ತೀರ್ಮಾನಿಸಿದೆ. ಇನ್ನು ಮಧ್ಯ ಉತ್ಪಾದನೆ ಮಾಡುತ್ತಿರುವ ನಾಲ್ಕು ಸಂಸ್ಥೆಗಳ ಲೈಸನ್ಸ್ ಅನ್ನು ವಿಸ್ತರಣೆಗೆ ಸುಪ್ರೀಂಕೋರ್ಟ್ ನಿರಾಕರಿಸಿದೆ.