ಮುಂಬೈ: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಜಹೀರ್ ಖಾನ್ ಮತ್ತು ನಟಿ ಸಾಗರಿಕಾ ಘಾಟ್ಗೆ ನಿನ್ನೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಹಲವು ತಿಂಗಳುಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಜಹೀರ್ ಖಾನ್ ಮತ್ತು ನಟಿ ಸಾಗರಿಕಾ ಕಳೆದ ತಿಂಗಳು ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ಟ್ವೀಟ್ ಮಾಡಿದ್ದರು. ಇದೀಗ ಅಧಿಕೃತವಾಗಿ ನಿಶ್ಛಿತಾರ್ಥ ಮಾಡಿಕೊಂಡಿದ್ದಾರೆ.
ನಿಶ್ಚಿತಾರ್ಥ ಸಮಾರಂಭಕ್ಕೆ ಹಲವು ಕ್ರಿಕೆಟ್ ತಾರೆಗಳು ಆಗಮಿಸಿ ನವ ಜೋಡಿಗೆ ಶುಭಾಶಯ ಕೋರಿದರು. ಸಮಾರಂಭಕ್ಕೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ಜತೆಯಾಗಿ ಬಂದು ಎಲ್ಲರ ಗಮನ ಸೆಳೆದರು. ಇನ್ನು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್, ರೋಹಿತ್ ಶರ್ಮಾ, ಮಂದಿರಾ ಬೇಡಿ, ರವೀನಾ ಠಂಡನ್, ಬಾಬ್ಬಿ ಡಿಯೋ ಮುಂತಾದ ಗಣ್ಯರು ಆಗಮಿಸಿ ಶುಭಾಶಯ ತಿಳಿಸಿದರು.