ದೇಶ

ಆ್ಯಂಬುಲೆನ್ಸ್'ಗಾಗಿ ಬೆಂಗಾವಲು ವಾಹನ ನಿಲ್ಲಿಸಿ ದಾರಿ ಬಿಟ್ಟ ಪ್ರಧಾನಿ ಮೋದಿ

Manjula VN
ಗಾಂಧಿನಗರ: ತಾವು ಸಾಗುತ್ತಿದ್ದ ದಾರಿಯಲ್ಲಿ ಬಂದ ಆ್ಯಂಬುಲೆನ್ಸ್'ಗೆ ದಾರಿ ಮಾಡಿಕೊಡುವ ಸಲುವಾಗಿ ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ತಮ್ಮ ಬೆಂಗಾವಲು ವಾಹನಗಳನ್ನು ನಿಲ್ಲಿಸಿ ಮಾನವೀಯತೆಯನ್ನು ಮರೆದಿದ್ದಾರೆ. 
ಆಫ್ರಿಕನ್ ಡೆವಲಪ್'ಮೆಂಟ್ ಬ್ಯಾಂಕ್'ನ 52ನೇ ವಾರ್ಷಿಕ ಸಭೆಯ ಉದ್ಘಾಟನೆಗೆಂದು ಆಗಮಿಸಿದ್ದ ಪ್ರಧಾನಿ ಮೋದಿಯವರು ಗಾಂಧಿನಗರದಲ್ಲಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ. 
ಗಾಂಧಿನಗರ-ಅಹಮದಾಬಾದ್ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದಾಗ, ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಸಮೀಪಿಸುತ್ತಿದ್ದ ವೇಳೆ ಆ್ಯಂಬುನೆಲ್ಸ್ ಬರುವುದನ್ನು ಪ್ರಧಾನಿ ಮೋದಿಯರು ಗಮನಿಸಿದ್ದಾರೆ. ಕೂಡಲೇ ಭದ್ರತಾ ನಿಯಮಗಳನ್ನು ಮುರಿದು, ತಮ್ಮ ಬೆಂಗಾವಲು ವಾಹನಗಳನ್ನು ಬದಿಗೆ ಸರಿದು ನಿಲ್ಲುವಂತೆ ಮೋದಿ ಸೂಚಿಸಿದ್ದಾರೆ. ಆ್ಯಂಬುಲೆನ್ಸ್ ಸಾಗಲು ಅವಕಾಶ ಮಾಡಿಕೊಟ್ಟಿದ್ದಾರೆ. ಈ ಮೂಲಕ ಪ್ರಧಾನಿ ಮೋದಿಯವರು ಇತರರಿಗೆ ಮಾದರಿಯಾಗಿದ್ದಾರೆ. 
ಕಳೆದ ತಿಂಗಳಷ್ಟೇ ವಿಐಪಿ ವಾಹನಗಳ ಮೇಲಿನ ಕೆಂಪು ದೀಪಗಳನ್ನು ತೆಗೆಯುವ ನಿರ್ಧಾರ ಕೈಗೊಂಡಿದ್ದ ಪ್ರಧಾನಿ ಮೋದಿಯವರು, ಪ್ರತೀಯೊಬ್ಬ ಭಾರತೀಯನೂ ವಿಐಪಿ ಎಂದು ಪ್ರತಿಪಾದಿಸಿದ್ದರು. 
SCROLL FOR NEXT