ಸಿಬಿಎಸ್ ಇ 12ನೇ ತರಗತಿ ಫಲಿತಾಂಶ ಇಂದು ಪ್ರಕಟ
ಸಿಬಿಎಸ್ ಇ 12ನೇ ತರಗತಿ ಫಲಿತಾಂಶ ಇಂದು ಪ್ರಕಟಗೊಳ್ಳಲಿದೆ. ಇಂದು ಅಪರಾಹ್ನ...
ನವದೆಹಲಿ: ಸಿಬಿಎಸ್ ಇ 12ನೇ ತರಗತಿ ಫಲಿತಾಂಶ ಇಂದು ಪ್ರಕಟಗೊಳ್ಳಲಿದೆ. ಇಂದು ಅಪರಾಹ್ನ ಫಲಿತಾಂಶ ಪ್ರಕಟವಾಗಲಿದೆ ಎಂದು ಸಿಬಿಎಸ್ ಇ ಅಧಿಕೃತ ಮೂಲಗಳು ತಿಳಿಸಿವೆ.
ವಿದ್ಯಾರ್ಥಿಗಳು ತಮ್ಮ ಅಂಕ ಮತ್ತು ಶ್ರೇಣಿಗಳನ್ನು cbse.nic.in, cbseresults.nic.in, results.gov.in.ನಲ್ಲಿ ವೀಕ್ಷಿಸಬಹುದು.
ಸಿಬಿಎಸ್ ಇಯ 12ನೇ ತರಗತಿ ಪರೀಕ್ಷೆಯನ್ನು ಮಾರ್ಚ್ 9 ರಿಂದ ಏಪ್ರಿಲ್ 29ರವರೆಗೆ ನಡೆಸಲಾಗಿತ್ತು. ಸಿಬಿಎಸ್ಇಯ ಎಲ್ಲಾ 10 ಸ್ಥಳೀಯ ಕೇಂದ್ರಗಳಲ್ಲಿಯೂ ಏಕಕಾಲದಲ್ಲಿ ಫಲಿತಾಂಶ ಪ್ರಕಟಗೊಳ್ಳಲಿದೆ.
ದೆಹಲಿ ಪ್ರದೇಶದಲ್ಲಿ ಅತಿ ಹೆಚ್ಚು ಅಭ್ಯರ್ಥಿಗಳು(2,58,321), ಪಂಚುಕುಲಾದಲ್ಲಿ 1,84,557 ಮತ್ತು ಅಜ್ಮರ್ ನಲ್ಲಿ 1,31,449 ಅಭ್ಯರ್ಥಿಗಳಿದ್ದಾರೆ. ವಿಶೇಷಚೇತನರ ವಿಭಾಗದಲ್ಲಿ ಒಟ್ಟು 2,497 ಅಭ್ಯರ್ಥಿಗಳು ಈ ವರ್ಷದ ಪರೀಕ್ಷೆಗೆ ದಾಖಲಾತಿ ಮಾಡಿಕೊಂಡಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.