ಅಶೀಶ್ ದಾಹಿಯಾ 
ದೇಶ

ದೆಹಲಿ: ಮಹಿಳಾ ಅಧಿಕಾರಿಯನ್ನು ರಕ್ಷಿಸಲು ಹೋಗಿ ಪ್ರಾಣ ಕಳೆದು ಕೊಂಡ ಐಎಎಸ್ ಆಫೀಸರ್

ಹಿಳೆಯೋರ್ವರನ್ನು ರಕ್ಷಿಸಲು ಹೋಗಿ ಟ್ರೈನಿ ಐಎಎಸ್‌ ಅಧಿಕಾರಿಯೊಬ್ಬರು ಸಾವನ್ನಪ್ಪಿದ ದಾರುಣ ಘಟನೆ ದೆಹಲಿಯಲ್ಲಿ ...

ನವದೆಹಲಿ: ಮಹಿಳೆಯೋರ್ವರನ್ನು ರಕ್ಷಿಸಲು ಹೋಗಿ  ಟ್ರೈನಿ ಐಎಎಸ್‌ ಅಧಿಕಾರಿಯೊಬ್ಬರು ಸಾವನ್ನಪ್ಪಿದ ದಾರುಣ ಘಟನೆ ದೆಹಲಿಯಲ್ಲಿ ನಡೆದಿದೆ.
ಹರ್ಯಾಣದ ಸೋನ್ ಪೇಟೆಯ ಅಶೀಶ್ ದಾಹಿಯಾ ಮೃತಪಟ್ಟ ಐಎಎಸ್ ಅಧಿಕಾರಿ. 
ನವದೆಹಲಿಯ ಫಾರಿನ್ ಕ್ಲಬ್‌ ಇನ್ಸ್‌‌ಟಿಟ್ಯೂಟ್‌‌ನಲ್ಲಿ ಪಾರ್ಟಿಯೊಂದು ಆಯೋಜಿಸಲಾಗಿತ್ತು. ಈ ಪಾರ್ಟಿಗೆ ಅಶೀಶ್ ದಾಹಿಯಾ ಸೇರಿದಂತೆ ಭಾರತೀಯ ವಿದೇಶಿ ಮತ್ತು ಆದಾಯ ಸೇವೆಗಳ ಅಧಿಕಾರಿಗಳು ತೆರಳಿದ್ದರು. ಆಗ ಕೆಲವರು ಕ್ಲಬ್‌‌ನಲ್ಲಿರುವ ಸ್ವಿಮ್ಮಿಂಗ್‌ ಪೂಲ್‌ಗೆ ಈಜಾಡಲು ಹೋಗಿದ್ದಾರೆ. ಈ ವೇಳೆ ಅವರು ಮದ್ಯ ಸೇವಿಸಿದ್ದರು ಎನ್ನಲಾಗಿದೆ.
ಇವರಲ್ಲಿದ್ದ ಓರ್ವ ಮಹಿಳಾ ಅಧಿಕಾರಿ ಆಕಸ್ಮಿಕವಾಗಿ ಕಾಲು ಜಾರಿ ಸ್ವಿಮ್ಮಿಂಗ್‌ ಪೂಲ್‌ನಲ್ಲಿ ಬಿದ್ದಿದ್ದಾರೆ. ಇದನ್ನು ನೋಡಿ  ಅಶೀಶ್ ದಾಹಿಯಾ ಮತ್ತಿರರು ತಕ್ಷಣವೇ ಸ್ವಿಮ್ಮಿಂಗ್‌ ಪೂಲ್‌ಗೆ ಜಿಗಿದಿದ್ದಾರೆ. ಮಹಿಳಾ ಅಧಿಕಾರಿಯನ್ನು ರಕ್ಷಿಸಿ, ನೀರಿನಿಂದ ಹೊರಗೆ ಎಳೆದು ಅವರ ಪ್ರಾಣ ಉಳಿಸಿದ್ದಾರೆ.
ಆದರೆ, ಇದಾದ ಕೆಲ ಸಮಯದ ಬಳಿಕ ಅಶೀಶ್ ನೀರಿನಲ್ಲಿ ತೇಲುತ್ತಿರುವುದು ಕಂಡು ಬಂತು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಅಶೀಶ್‌‌ರನ್ನು ನೀರಿನಿಂದ ಹೊರಗೆಳೆದು, ಇಲ್ಲಿನ ಫೋರ್ಟಿಸ್‌ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ, ಅಷ್ಟರಲ್ಲೇ ಅಶೀಶ್‌ ಕೊನೆಯುಸಿರೆಳೆದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ನಂತರ ಮರಣೋತ್ತರ ಪರೀಕ್ಷೆಗಾಗಿ ಐಎಎಸ್‌ ಅಧಿಕಾರಿ ಅಶೀಶ್ ಅವರ ಮೃತದೇಹವನ್ನು ಫೋರ್ಟಿಸ್‌ ಆಸ್ಪತ್ರೆಯಿಂದ ಏಮ್ಸ್‌ಗೆ ಆಸ್ಪತ್ರೆಗೆ ಸಾಗಿಸಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ನಿಲ್ಲಿಸಲು ರಷ್ಯಾ-ಉಕ್ರೇನ್ ಒಪ್ಪಿಕೊಂಡಿವೆ: ಟ್ರಂಪ್ ಘೋಷಣೆ

ಕೊನೆಯ ಓವರ್‌ನಲ್ಲಿ ಭಾರತಕ್ಕೆ ವಿಂಡೀಸ್ ವಿರುದ್ಧ ರೋಚಕ ಜಯ: T20 ಸರಣಿಯಲ್ಲಿ 2-1 ಮುನ್ನಡೆ!

'We're Sorry': ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಬಗ್ಗೆ ತಿಳಿಸಿದ್ದ ಮಹಿಳಾ ಪೊಲೀಸ್; ಹೇಗಿತ್ತು CJP ನಾಯಕನ ಪ್ರತಿಕ್ರಿಯೆ...: ವಿಡಿಯೋ ವೈರಲ್!

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್