ದೇಶ

ಗೋಹತ್ಯೆ ನಿಷೇಧ: ಎಲ್ಲಾ ಮುಖ್ಯಮಂತ್ರಿಗಳ ಸಭೆ ಕರೆಯಲು ಕೇರಳ ನಿರ್ಧಾರ

Lingaraj Badiger
ತಿರುವನಂತಪುರಂ: ಜಾನುವಾರು ಮಾರುಕಟ್ಟೆಯಲ್ಲಿ ಹತ್ಯೆಗಾಗಿ ಗೋವುಗಳ ಮಾರಾಟ ನಿಷೇಧಿಸಿರುವ ಕೇಂದ್ರ ಸರ್ಕಾರದ ಆದೇಶದ ಬಗ್ಗೆ ಚರ್ಚಿಸಲು ಎಲ್ಲಾ ಮುಖ್ಯಮಂತ್ರಿಗಳ ಸಭೆ ಕರೆಯಲು ಬುಧವಾರ ಕೇರಳ ಸರ್ಕಾರ ನಿರ್ಧರಿಸಿದೆ. 
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ನಿನ್ನೆಯಷ್ಟೇ ಕೇಂದ್ರದ ಒಕ್ಕೂಟ ವ್ಯವಸ್ಥೆಯ ವಿರುದ್ಧದ ಕ್ರಮದ ವಿರುದ್ಧ ಎಲ್ಲರೂ ಒಂದಾಗಿ ಎಂದು ಇತರೆ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕರೆ ನೀಡಿದ್ದರು. ಇದರ ಬೆನ್ನಲ್ಲೇ ಈಗ ಎಲ್ಲಾ ಮುಖ್ಯಮಂತ್ರಿಗಳ ಸಭೆ ಕರೆಯಲು ನಿರ್ಧರಿಸಿದ್ದಾರೆ.
ಇಂದು ವರದಿಗಾರರೊಂದಿಗೆ ಮಾತನಾಡಿದ ಕೇರಳ ಸಿಎಂ, ಗೋಹತ್ಯೆ ನಿಷೇಧದ ಕುರಿತು ಚರ್ಚಿಸಲು ನಾವು ಶೀಘ್ರದಲ್ಲೇ ಎಲ್ಲಾ ಮುಖ್ಯಮಂತ್ರಿಗಳ ಸಭೆ ಕರೆಯಲು ಬಯಸಿದ್ದೇವೆ ಎಂದರು.
ಹತ್ಯೆಗಾಗಿ ಗೋವು ಮಾರಾಟ ಮತ್ತು ಖರೀದಿ ನಿಷೇಧ ಅಧಿಸೂಚನೆಯನ್ನು ನಾವು ಕಾನೂನಾತ್ಮಕವಾಗಿ ಪ್ರಶ್ಮಿಸುತ್ತೇವೆ ಎಂದರು. ಅಲ್ಲದೆ ಈ ಕುರಿತು ಚರ್ಚಿಸಲು ರಾಜ್ಯ ಸರ್ಕಾರ ವಿಶೇಷ ಅಧಿವೇಶನ ಸಹ ಕರೆಯಲಿದೆ ಎಂದು ಪಿಣರಾಯಿ ವಿಜಯನ್ ಅವರು ತಿಳಿಸಿದ್ದಾರೆ.
SCROLL FOR NEXT