ನವದೆಹಲಿ: ದೆಹಲಿ ವಿಧಾನಸಭೆ ಸರಕು ಮತ್ತು ಸೇವಾ ತೆರಿಗೆಗ್ ರಾಜ್ಯ ಮಸೂದೆಯನ್ನು ಮೇ.31 ರಂದು ಅಂಗೀಕರಿಸಿದೆ.
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ತೆರಿಗೆ ದರವನ್ನು ಗರಿಷ್ಠ ಶೇ.10 ರಷ್ಟಕ್ಕೆ ಸೀಮಿತಗೊಳಿಸಬೇಕೆಂದು ಕರೆ ನೀಡಿದ್ದರು. ಜಿಎಸ್ ಟಿ ಮಸೂದೆ ಅಂಗೀಕಾರಗೊಂಡ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅರವಿಂದ್ ಕೇಜ್ರಿವಾಲ್, ಜಿಎಸ್ ಟಿ ಅತಿ ದೊಡ್ಡ ತೆರಿಗೆ ಸುಧಾರಣೆ. ತಾತ್ವಿಕವಾಗಿ ನಾವೆಲ್ಲರೂ ಜಿಎಸ್ ಟಿಯನ್ನು ಬೆಂಬಲಿಸುತ್ತೇವೆ ಎಂದು ಜಿಎಸ್ ಟಿ ವ್ಯವಸ್ಥೆಯಲ್ಲಿ ತೆರಿಗೆ ಶೇ.10 ರಿಂದ ಶೇ.5 ರಷ್ಟು ಇರಬೇಕೆಂದಿದೆ ಆದರೆ ಹೆಚ್ಚಿನ ತೆರಿಗೆ ಸ್ಲ್ಯಾಬ್ ಹಣದುಬ್ಬರವನ್ನು ಹೆಚ್ಚಿಸಲಿದೆ ಎಂದು ಹೇಳಿದ್ದಾರೆ.
ಏ.6 ರಂದು ಸಂಸತ್ ಜಿಎಸ್ ಟಿ ಮಸೂದೆಯನ್ನು ಅಂಗೀಕರಿಸಿದ್ದು ಜು.1 ರಿಂದ ದೇಶಾದ್ಯಂತ ಜಾರಿಗೆ ಬರಲಿದೆ.