ಅಲಹಾಬಾದ್: ವಿಶ್ವದ ಅತಿ ಅಗ್ಗದ ಬೆಳೆಯ ಸ್ಮಾರ್ಟ್ ಫೋನ್ 'ಫ್ರೀಡಂ ೨೫೧' ಬಿಡುಗಡೆ ಮಾಡಿ ಬೆಳಕಿಗೆ ಬಂದಿದ್ದ ನೋಯ್ಡಾ ಮೂಲದ ಸಂಸ್ಥೆ ರಿಂಗಿಂಗ್ ಬೆಲ್ಸ್ ನ ವ್ಯವಸ್ಥಾಪಕ ನಿರ್ದೇಶಕ ಮೋಹಿತ್ ಗೋಯಲ್ ಅವರಿಗೆ ಅಲಹಾಬಾದ್ ಹೈಕೋರ್ಟ್ ಜಾಮೀನು ನೀಡಿದೆ.
ಗೋಯಲ್ ತಮ್ಮ ಸಂಸ್ಥೆಗೆ ೧೬ ಲಕ್ಷ ರೂಪಾಯಿಯಷ್ಟು ಮೋಸ ಮಾಡಿದ್ದಾರೆ ಎಂದು ಗಾಜಿಯಾಬಾದ್ ಮೂಲದ ಆಯಮ್ ಎಂಟರ್ ಪ್ರೈಸಸ್ ದೂರು ನೀಡಿದ ನಂತರ ಗೋಯಲ್ ಮತ್ತು ರಿಂಗಿಂಗ್ ಬೆಲ್ಸ್ ನಿರ್ದೇಶಕ ಸುಮಿತ್ ಕುಮಾರ್ ಅವರನ್ನು ಫೆಬ್ರವರಿಯಲ್ಲಿ ಬಂಧಿಸಲಾಗಿತ್ತು.
"ಈ ಪ್ರಕರಣದಲ್ಲಿ ನ್ಯಾಯಾಧೀಶರಿಗೆ ತಪ್ಪೆಸಗಿದ ಯಾವುದೇ ಸಾಕ್ಷ್ಯಗಳು ಸಿಗಲಿಲ್ಲ. ಇದರಿಂದ ಅವರು ಜಾಮೀನು ನೀಡಿದ್ದಾರೆ" ಎಂದು ರಿಂಗಿಂಗ್ ಬೆಲ್ ಪರ ವಕೀಲ ಪ್ರಶಾಂತ್ ವ್ಯಾಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕುಮಾರ್ ಅವರಿಗೆ ಕೂಡ ಜಾಮೀನು ದೊರೆತಿದೆ.
ಈ ಪ್ರಕರಣದಲ್ಲಿ ಎರಡು ಪಕ್ಷಗಳ ನಡುವೆ ರಾಜಿ ಒಳಪಟ್ಟಿರುವುದನ್ನು ಕೋರ್ಟ್ ಗಮನಿಸಿದೆ. ಆರೋಪಪಟ್ಟಿಯಲ್ಲಿ ತಿಳಿಸಿದ್ದಂತೆ 'ಫ್ರೀಡಂ ೨೫೧' ಸ್ಮಾರ್ಟ್ ಫೋನ್ ಗಳನ್ನು ವಿತರಿಸಲು ಗೋಯಲ್ ಮತ್ತು ರಿಂಗಿಂಗ್ ಬೆಲ್ಸ್ ಸಂಸ್ಥೆಯ ಇತರ ಅಧಿಕಾರಿಗಳು ಆಯಮ್ ಸಂಸ್ಥೆಗೆ ನವೆಂಬರ್ ೨೦೧೫ ರಲ್ಲಿ ಒಪ್ಪಿಸಿದ್ದರಂತೆ. "ಇದಕ್ಕಾಗಿ ರಿಂಗಿಂಗ್ ಬೆಲ್ಸ್ ಸಂಸ್ಥೆಗೆ ಆರ್ ಟಿ ಜಿ ಎಸ್ ಮೂಲಕ ವಿವಿಧ ಸಮಯಗಳಲ್ಲಿ ನಾವು ೩೦ ಲಕ್ಷ ರೂ ಹಣ ಕಳುಹಿಸಿದ್ದೆವು. ಆದರೆ ಅವರು ೧೩ ಲಕ್ಷ ಮೊತ್ತದ ಉತ್ಪನ್ನಗಳನ್ನಷ್ಟೇ ನಮಗೆ ಕಳುಹಿಸಿದರು. ನಂತರ ಎಷ್ಟು ಬಾರಿ ಕೇಳಿದರು ಉತ್ಪನ್ನವು ಸಿಗಲಿಲ್ಲ ೧೪ ಲಕ್ಷ ರೂ ಹಿಂದಿರುಗಿಸಲು ಇಲ್ಲ" ಎಂದು ಹೇಳಿತ್ತು.
ಕಳೆದ ವರ್ಷ ಜುಲೈ ನ ಅಂತ್ಯಕ್ಕೆ ಗ್ರಾಹಕರಿಗೆ ೫೦೦೦ ಸಂಖ್ಯೆಯ 'ಫ್ರೀಡಂ ೨೫೧' ಸ್ಮಾರ್ಟ್ ಫೋನ್ ಗಳನ್ನು ತಲುಪಿಸಿರುವುದಾಗಿಯೂ, ಇನ್ನುಳಿದ ೬೫,೦೦೦ ಗ್ರಾಹಕರಿಗೆ ತಲುಪಿಸಿದ ನಂತರ ನಗದು ತೆಗೆದುಕೊಳ್ಳುವ ಮಾದರಿಯಲ್ಲಿ ಇವುಗಳನ್ನು ಕಳುಹಿಸುವ ಭರವಸೆ ನೀಡಿತ್ತು ಸಂಸ್ಥೆ. ಅದರ ನಂತರ ಸಂಸ್ಥೆ ಯಾವುದೇ ಹೊಸ ಅಂಕಿಅಂಶಗಳನ್ನು ಬಿಡುಗಡೆ ಮಾಡಿಲ್ಲ.