ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್ಸಿ) ಬುಧವಾರ 2016ನೇ ಸಾಲಿನ ಅಂತಿಮ ಪರೀಕ್ಷೆಯ ಫಲಿತಾಂಶ ಪ್ರಕಟಿಸಿದ್ದು, ಕರ್ನಾಟಕದ ಯುವತಿ ಕೆ.ಆರ್. ನಂದಿನಿ ಅವರು ಮೊದಲ ರ್ಯಾಂಕ್ ಪಡೆದಿದ್ದು, ಅನ್ ಮೋಲ್ ಶೆರ್ ಸಿಂಗ್ ಬೇಡಿ ಎರಡನೇ ಸ್ಥಾನ ಹಾಗೂ ಜಿ ರೋನಂಕಿ ಅವರು ಮೂರನೇ ಸ್ಥಾನ ಪಡೆದಿದ್ದಾರೆ.
ಕೋಲಾರ ಮೂಲಕ ನಂದಿನಿ ಅವರು ಕಳೆದ ಬಾರಿ ನಡೆದ ಯುಪಿಎಸ್ ಪರೀಕ್ಷೆ 625ನೇ ರ್ಯಾಂಕ್ ಪಡೆಯುವ ಮೂಲಕ ಐಆರ್ ಎಸ್ ಸೇವೆ ಆಯ್ಕೆ ಮಾಡಿಕೊಂಡಿದ್ದು, ಪ್ರಸ್ತೂತ ಫರಿದಾಬಾದ್ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈಗ ಎರಡನೇ ಪ್ರಯತ್ನದಲ್ಲಿ ಪ್ರಥಮ ರ್ಯಾಂಕ್ ಪಡೆದಿದ್ದಾರೆ.
ಸೌಮ್ಯ ಪಾಂಡೆ ನಾಲ್ಕನೆ ಸ್ಥಾನ, ಅಭಿಲಾಶ್ ಮಿಶ್ರಾ ಐದನೇ ಸ್ಥಾನ ಪಡೆದಿದ್ದಾರೆ.
ದೇಶದ ಅತ್ಯುನ್ನತ ನಾಗರಿಕ ಸೇವೆಗಳಾದ ಐಎಎಸ್, ಐಎಫ್ಎಸ್ ಮತ್ತು ಐಪಿಎಸ್ ಸೇರಿದಂತೆ ಒಟ್ಟು 1099 ಹುದ್ದೆಗಳಿಗೆ ಯುಪಿಎಸ್ ಸಿ ಮೂರು ಹಂತಗಳ ಪರೀಕ್ಷೆ ನಡೆಸಿತ್ತು.