ಜನವರಿಯಿಂದ ರೈಲ್ವೆ ಕಚೇರಿಯಲ್ಲಿ ಬಯೋಮೆಟ್ರಿಕ್ ಹಾಜರಿ ವ್ಯವಸ್ಥೆ
ರೈಲ್ವೆ ಕಚೇರಿಯಲ್ಲಿ ಸಿಬ್ಬಂದಿಗಳ ಹಾಜರಾತಿಯನ್ನು ದಾಖಲಿಸುವುದಕ್ಕೆ ಆಧಾರ್ ಆಧಾರಿತ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೆ ತರಲು ರೈಲ್ವೆ ಸಚಿವಾಲಯ ಯೋಜನೆ ರೂಪಿಸಿದೆ.
ನವದೆಹಲಿ: ರೈಲ್ವೆ ಕಚೇರಿಯಲ್ಲಿ ಸಿಬ್ಬಂದಿಗಳ ಹಾಜರಾತಿಯನ್ನು ದಾಖಲಿಸುವುದಕ್ಕೆ ಆಧಾರ್ ಆಧಾರಿತ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೆ ತರಲು ರೈಲ್ವೆ ಸಚಿವಾಲಯ ಯೋಜನೆ ರೂಪಿಸಿದೆ.
ಎಲ್ಲಾ ವಿಭಾಗಗಳಲ್ಲಿ ಜ.31 ರಿಂದ ವ್ಯವಸ್ಥೆಯನ್ನು ಜಾರಿಗೊಳಿಸಲು ಉದ್ದೇಶಿಸಲಾಗಿದ್ದು, ಸಿಬ್ಬಂದಿಗಳು ಕೆಲಸಕ್ಕೆ ತಡವಾಗಿ ಆಗಮಿಸುವುದು ಹಾಗೂ ಆಗಮಿಸದೇ ಇರುವುದನ್ನು ಪರಿಶೀಲಿಸಲು ಈ ಹೊಸ ವ್ಯವಸ್ಥೆಯಿಂದ ಸಾಧ್ಯವಾಗಲಿದೆ ಎಂದು ಹೇಳಿದ್ದಾರೆ.
ಎಲ್ಲಾ ಜೋನ್ ಗಳಿಗೂ ಸಹ ಈ ಕುರಿತಂತೆ ಪತ್ರವನ್ನು ಬರೆಯಲಾಗಿದ್ದು, ಮೊದಲಿಗೆ ಎಲ್ಲಾ ವಿಭಾಗೀಯ, ಜೋನ್, ಆರ್ ಡಿಎಸ್ಒ, ಕೋಲ್ಕತ್ತಾ ಮೆಟ್ರೋ ರೈಲು, ರೈಲ್ವೆ ವರ್ಕ್ ಶಾಪ್, ಫ್ಯಾಕ್ಟರಿ, ಉತ್ಪಾದನಾ ಯುನಿಟ್ ಗಳಲ್ಲಿ ನ.30 ರಿಂದ ಜಾರಿಗೊಳಿಸಲಾಗುತ್ತದೆ. 2 ನೇ ಹಂತದಲ್ಲಿ ಎಲ್ಲಾ ರೈಲ್ವೆ ಕಚೇರಿಗಳಿಗೂ ಈ ವ್ಯವಸ್ಥೆಯನ್ನು ಪರಿಚಯಿಸಲಾಗುತ್ತದೆ ಎಂದು ರೈಲ್ವೆ ಇಲಾಖೆ ಅಧಿಕಾರಿಯೊಬ್ಬರಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.