ದೇಶ

'ಖಿಚಡಿ' ಕಾರ್ಯಕ್ರಮಗಳಿಂದ ದೇಶ ಮುಂದಕ್ಕೆ ಸಾಗದು: ಕೇಂದ್ರದ ವಿರುದ್ಧ ಕಾಂಗ್ರೆಸ್ ಕಿಡಿ

Manjula VN
ನವದೆಹಲಿ: 918 ಕೆ.ಜಿ ತೂಕದ ಖಿಚಡಿ ಕಾರ್ಯಕ್ರಮಗಳಿಂದ ದೇಶದ ಪ್ರಗತಿ ಮುಂದಕ್ಕೆ ಸಾಗಲು ಎಂದು ಕೇಂದ್ರ ಸರ್ಕಾರದ ವಿರುದ್ದ ಕಾಂಗ್ರೆಸ್ ಭಾನುವಾರ ಕಿಡಿಕಾರಿದೆ. 
ರಾಜಧಾನಿ ದೆಹಲಿಯಲ್ಲಿ ನಿನ್ನೆ ಆಯೋಜಿಸಲಾಗಿದ್ದ ವಿಶ್ವ ಆಹಾರ ಮೇಳದಲ್ಲಿ 918 ಕೆ.ಜಿ. ತೂಕದ ಖಚಡಿ ತಯಾರಿಸುವ ಮೂಲಕ ಗಿನ್ನಿಸ್ ದಾಖಲೆ ನಿರ್ಮಿಸಲಾಗಿತ್ತು. ಕಾರ್ಯಕ್ರಮದಲ್ಲಿ ಆಹಾರ ಸಂಸ್ಕರಣೆ ಖಾತೆ ಸಚಿವೆ ಹರ್ಸಿಮ್ರತ್ ಕೌರ್ ಬಾದಲ್ ಮತ್ತು ಆಹಾರ ಸಂಸ್ಕರಣೆ ಖಾತೆ ರಾಜ್ಯ ಸಚಿವೆ ಸಾದ್ವಿ ನಿರಂಜನ್ ಜ್ಯೋತಿ ಸೇರಿದಂತೆ ಹಲವರು ಹಾಜರಿದ್ದರು. 
ಖಿಚಡಿ ಕಾರ್ಯಕ್ರಮ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ವಕ್ತಾರ ದ್ವಿಜೇಂದ್ರ ತ್ರಿಪಾಠಿಯವರು, ಖಚಿಡಿ ಅಥವಾ ಬಾಬಾ ರಾಮ್ ದೇವ್ ಅವರ ಉತ್ಪನ್ನಗಳ ಕುರಿತಂತೆ ಕಾರ್ಯಕ್ರಮಗಳನ್ನು ಆಯೋಜಿಸುವ ಪ್ರಧಾನಿ ಮೋದಿ ನೇತೃತ್ವ ಸರ್ಕಾರಕ್ಕೆ ಬೇರಾವುದೇ ಕೆಲಸವಿಲ್ಲ. ಇಂತಹ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುವುದರಿಂದ ದೇಶ ಮುಂದಕ್ಕೆ ಸಾಗಲು. ಇಂತಹ ಕಾರ್ಯಕ್ರಮಗಳಿಗೆ ಆಸಕ್ತಿ ತೋರುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಮಯ ಹಾಗೂ ಹಣವನ್ನು ವ್ಯರ್ಥ ಮಾಡುತ್ತಿದ್ದಾರೆಂದು ತಿಳಿಸಿದ್ದಾರೆ. 
SCROLL FOR NEXT