ಹೈದರಾಬಾದ್: ಹೈದರಾಬಾದ್ ಬಿರಿಯಾನಿ, ತಿರುಪತಿ ಲಡ್ಡು, ಇಡ್ಲಿ,ದೋಸಾ ಸೇರಿ 24 ವಿಶೇಷ ಭಾರತೀಯ ಖಾದ್ಯಗಳ ಅಂಚೆಚೀಟಿಗಳನ್ನು ಭಾರತೀಯ ಅಂಚೆ ಇಲಾಖೆ ನಿನ್ನೆ ಬಿಡುಗಡೆ ಮಾಡಿದೆ.
ಹೈದರಾಬಾದ್ನ ವಿಶೇಷ ಖಾದ್ಯಗಳಾದ ಬಿರಿಯಾನಿ, ಬಘರೆ ಬೈಂಗನ್ ಮತ್ತು ಸೇವಿಯಾನ್ ಗಳು ಅಂಚೆ ಚೀಟಿಯಲ್ಲಿ ಸ್ಥಾನ ಪಡೆದಿವೆ. ಅಸಫ್ ಜಾಹಿ ಮತ್ತು ಕುತುಬ್ ಶಾಹಿ ವಂಶ ದಕ್ಷಿಣ ಭಾರತದಲ್ಲಿ ಸ್ಥಾಪನೆ ಮತ್ತು ಗೋಲ್ಕೊಂಡ ಕೋಟೆ ನಿರ್ಮಾಣವಾಗಿ ಮುಂದಿನ ಎರಡು ತಿಂಗಳಿಗೆ 500 ವರ್ಷ ಆಗಲಿದೆ. ಇದರ ಗೌರವಾರ್ಥವಾಗಿ ಹೈದರಾಬಾದ್ ನ ವಿಶೇಷ ಕಾದ್ಯಗಳ ಅಂಚೆ ಚೀಟಿಯನ್ನು ಬಿಡುಗಡೆ ಗೊಳಿಸಲಾಗಿದೆ. ದಕ್ಷಿಣ ಭಾರತಕ್ಕೆ ಬಿರಿಯಾನಿಯನ್ನು ಪರಿಚಯ ಮಾಡಿಕೊಟ್ಟದ್ದೂ ಸಹ ಇದೇ ಕುತುಬ್ ಶಾಹಿ ಅರಸರು ಎನ್ನುವುದು ವಿಶೇಷ.