ದೇಶ

26 ವರ್ಷಗಳ ನಂತರ ಭಾರತದ ಪೌರತ್ವ ಸಿಕ್ಕ ಪಾಕ್ ಹಿಂದು ಮಹಿಳೆ ಬಿಜೆಪಿಗೆ ಸೇರ್ಪಡೆ

Vishwanath S
ಅಹಮದಾಬಾದ್: 1990ರಲ್ಲಿ ಪಾಕಿಸ್ತಾನದ ಸಿಂಧ್ ನಿಂದ ಗುಜರಾತ್ ಗೆ ವಲಸೆ ಬಂದಿದ್ದ ಡಿಂಪಲ್ ವೀರಂದನಿ(41) ಅವರಿಗೆ 26 ವರ್ಷಗಳ ನಂತರ ಭಾರತದ ಪೌರತ್ವ ಸಿಕ್ಕಿದ್ದು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. 
26 ವರ್ಷಗಳ ಸುದೀರ್ಘ ಹೋರಾಟ ನಂತರ ಡಿಂಪಲ್ ವೀರಂದನಿಗೆ ಭಾರತದ ಪೌರತ್ವ ಸಿಕ್ಕಿದ್ದು ನನಗೆ ಭಾರತ ಪೌರತ್ವ ಸಿಗಲು ಕಾರಣವಾಗಿದ್ದು ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ. ಈ ಹಿಂದೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಇದ್ದಾಗ ಸಹ ನಾನು ಭಾರತದ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದೆ ಆದರೆ ಅಂದು ನನಗೆ ಪೌರತ್ವ ಸಿಕ್ಕಿರಲಿಲ್ಲ. ಆದರೆ ಎನ್ಡಿಎಲ್ ಸರ್ಕಾರ ನನಗೆ ಭಾರತದ ಪೌರತ್ವ ನೀಡಿದ್ದರಿಂದ ತಾವು 2017 ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪರ ಕೆಲಸ ಮಾಡುವುದಾಗಿ ಹೇಳಿದ್ದಾರೆ. 
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎಲ್ ಸರ್ಕಾರ 2015ರಲ್ಲಿ ಭಾರತಕ್ಕೆ ವಲಸೆ ಬಂದ ಹಿಂದೂ ಅಲ್ಪಸಂಖ್ಯಾತರಿಗೆ ನೆರವಾಗಲು ಪ್ರಮುಖ ತಿದ್ದುಪಡಿಗಳನ್ನು ಮಾಡಿತ್ತು. ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಸೇರಿದಂತೆ ನೆರೆಯ ರಾಷ್ಟ್ರಗಳಿಂದ ಭಾರತಕ್ಕೆ ವಲಸೆ ಬಂದವರ ದಶಕಗಳ ದೀರ್ಘ ಹೋರಾಟವನ್ನು ಅಂಗೀಕರಿಸುವ ಮೂಲಕ ಭಾರತೀಯ ಪೌರತ್ವವನ್ನು ಸುಲಭವಾಗಿ ಪಡೆಯಲು ಅನುಕೂಲವಾಗುವಂತಾ ತಿದ್ದುಪಡಿಯನ್ನು ಜಾರಿಗೆ ತಂದಿದ್ದರು. ಈ ತಿದ್ದುಪಡಿಯಿಂದಾಗಿ ತನಗೆ ಸುಲಭವಾಗಿ ಭಾರತೀಯ ಪೌರತ್ವ ಸಿಕ್ಕಿದೆ ಎಂದು ಡಿಂಪಲ್ ವೀರಂದರಿ ಹೇಳಿದ್ದಾರೆ. 
13 ವರ್ಷದವಳಿದ್ದಾಗ ಡಿಂಪಲ್ ವೀರಂದನಿ 1990ರಲ್ಲಿ ಗುಜರಾತ್ ನ ಅಹಮದಾಬಾದ್ ಗೆ ವಲಸೆ ಬಂದಿದ್ದರು. ಅದೇ ವರ್ಷದಲ್ಲಿ ಡಿಂಪಲ್ ಓರ್ವ ಹಿಂದು ಯುವಕನ ಜತೆ ವಿವಾಹವಾಗಿತ್ತು. ಬಳಿಕ ದಂಪತಿಗಳು ದುಬೈಗೆ ತೆರಳಿದ್ದೆ ನಂತರ ನಾನು ಭಾರತದ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದೆ ಆದರೆ ಯುಪಿಎ ಸರ್ಕಾರ ನನ್ನ ಅರ್ಜಿಯನ್ನು ತಿರಸ್ಕರಿಸಿತ್ತು. ಆದರೆ 2016ರಲ್ಲಿ ನಾನು ಮತ್ತೆ ಅರ್ಜಿ ಸಲ್ಲಿಸಿದ್ದೆ ಆಗ ಎನ್ಡಿಎ ಸರ್ಕಾರ ನನ್ನ ಮನವಿಯನ್ನು ಸ್ವೀಕರಿಸಿ ನನಗೆ ಭಾರತದ ಪೌರತ್ವವನ್ನು ನೀಡಿದರು. ಈ ಹಿನ್ನೆಲೆಯಲ್ಲಿ ನಾನು ಬಿಜೆಪಿಗೆ ಸೇರ್ಪಡೆಗೊಂಡಿದ್ದು ಗುಜರಾತ್ ನಲ್ಲಿ ಪಕ್ಷ ಅಧಿಕಾರಕ್ಕೆ ತರಲು ಪ್ರಯತ್ನಿಸುವುದಾಗಿ ಹೇಳಿದ್ದಾರೆ.
SCROLL FOR NEXT