ದೇಶ

ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಶಿವಸೇನೆ ಸ್ವತಂತ್ರವಾಗಿ ಸ್ಪರ್ಧೆ

Lingaraj Badiger
ಮುಂಬೈ: ಮುಂದಿನ ತಿಂಗಳು ನಡೆಯಲಿರುವ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮಿತ್ರ ಪಕ್ಷ ಶಿವಸೇನೆ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ಗುರುವಾರ ಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಶಿವಸೇನೆ 50ರಿಂದ 60 ಕ್ಷೇತ್ರಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದು, ಸೂರತ್ ನಿಂದ ಅಹಮದಾಬಾದ್ ವರೆಗೆ ಸಾಕಷ್ಟು ಮರಾಠಿಗರು ಇದ್ದಾರೆ ಎಂದು ಶಿವಸೇನೆಯ ಗುಜರಾತ್ ಘಟಕದ ಸಂಯೋಜಕ ಹಾಗೂ ಒಶಿವಾರ ಕಾರ್ಪೋರೇಟರ್ ರಾಜುಲ್ ಪಟೇಲ್ ಅವರು ತಿಳಿಸಿದ್ದಾರೆ.
ರಾಜುಲ್ ಪಟೇಲ್ ಮತ್ತು ಮತ್ತೊಬ್ಬ ಶಿವಸೇನೆ ನಾಯಕ ಹೇಮರಾಜ್ ಶಾ ಅವರು ಈಗಾಗಲೇ ಗುಜರಾತ್ ನಲ್ಲಿ ಶಿವಸೇನೆ ಪರವಾಗಿ ಪ್ರಚಾರ ನಡೆಸಿದ್ದು, ಶೀಘ್ರದಲ್ಲೇ ಪಕ್ಷದ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಿದ್ದಾರೆ.
ಇದೇ ವೇಳೆ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಶಿವಸೇನೆ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ ಪಟೇಲ್, ನಮ್ಮ ಪಕ್ಷದ ಅಧ್ಯಕ್ಷ ಉದ್ಧವ್ ಠಾಕ್ರೆ ಅವರು ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಅವರು ಹೇಳಿದ್ದಾರೆ.
SCROLL FOR NEXT