ಶ್ರೀನಗರದಲ್ಲಿ ನಡೆದ ಪಕ್ಷದ ಸಭೆಯಲ್ಲಿ ಫಾರೂಕ್ ಅಬ್ದುಲ್ಲಾ 
ದೇಶ

ಭಾರತವನ್ನು ಆಯ್ಕೆ ಮಾಡಿ ತಪ್ಪು ಮಾಡಿದೆವು: ಫರೂಕ್ ಅಬ್ದುಲ್ಲಾ ವಿವಾದಾತ್ಮಕ ಹೇಳಿಕೆ!

ವಿಭಜನೆ ಸಂದರ್ಭದಲ್ಲಿ ಭಾರತ ದೇಶದ ಒಕ್ಕೂಟ ಸೇರುವ ಕುರಿತು ನಿರ್ಧಾರ ಕೈಗೊಂಡು ತಪ್ಪು ಮಾಡಿದೆವು ಎಂದು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಮುಖ್ಯಸ್ಥ ಹಾಗೂ ಶ್ರೀನಗರ ಸಂಸದ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.

ಶ್ರೀನಗರ: ವಿಭಜನೆ ಸಂದರ್ಭದಲ್ಲಿ ಭಾರತ ದೇಶದ ಒಕ್ಕೂಟ ಸೇರುವ ಕುರಿತು ನಿರ್ಧಾರ ಕೈಗೊಂಡು ತಪ್ಪು ಮಾಡಿದೆವು ಎಂದು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಮುಖ್ಯಸ್ಥ ಹಾಗೂ ಶ್ರೀನಗರ ಸಂಸದ ಫಾರೂಕ್ ಅಬ್ದುಲ್ಲಾ  ಹೇಳಿದ್ದಾರೆ.
ಶನಿವಾರ ಶ್ರೀನಗರದಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ ಫಾರೂಕ್ ಅಬ್ದುಲ್ಲಾ, ಸ್ವತಂತ್ರ್ಯ ಕಾಶ್ಮೀರ ಕಲ್ಪನೆ ವಾಸ್ತವಿಕತೆ ಅಲ್ಲ. ನಾವು ಮೂರು ದೇಶಗಳಿಂದ ಸುತ್ತು ವರೆದಿದ್ದೇವೆ, ಇತ್ತ ಪಾಕಿಸ್ತಾನ ಅತ್ತ ಚೀನಾ ಹಾಗೂ  ಮೂರನೆಯದಾಗಿ ಭಾರತದಿಂದ ಸುತ್ತುವರೆಯಲ್ಪಟ್ಟಿದ್ದೇವೆ. ಮೂರೂ ದೇಶಗಳೂ ಅಣ್ವಸ್ತ್ರಗಳನ್ನು ಹೊಂದಿವೆ. ಆದರೆ ನಮ್ಮ ಬಳಿ ಅಲ್ಲಾ ಎಂಬ ಹೆಸರನ್ನು ಹೊರತು ಪಡಿಸಿ ಬೇರೇನೂ ಇಲ್ಲ. ಸ್ವತಂತ್ರ್ಯ ಕಾಶ್ಮೀರ ಕಲ್ಪನೆಯೇ ತಪ್ಪು  ಎಂದು ಹೇಳಿದ್ದಾರೆ.
ಕಾಶ್ಮೀರಿಗಳಿಗೆ ಭಾರತ ದ್ರೋಹ ಮಾಡಿತು. ವಿಭಜನೆ ಸಂದರ್ಭದಲ್ಲಿ ಭಾರತ ದೇಶದ ಒಕ್ಕೂಟ ಸೇರುವ ಕುರಿತು ನಿರ್ಧಾರ ಕೈಗೊಂಡು ನಾವು ತಪ್ಪು ಮಾಡಿದೆವು. ಭಾರತ ಎಂದಿಗೂ ಕಾಶ್ಮೀರಿಗಳನ್ನು ಒಕ್ಕೂಟದ ಅಂಗವಾಗಿ  ಗುರುತಿಸಿಲ್ಲ. ಅಂದು ನಾವು ಮಾಡಿದ ತಪ್ಪಿನಿಂದಾಗಿ ಇಂದು ಕಾಶ್ಮೀರ ಇಂತಹ ಪರಿಸ್ಥಿತಿಯಲ್ಲಿದೆ ಎಂದು ಫಾರೂಕ್ ಅಬ್ದುಲ್ಲಾ ಹೇಳಿದರು.
ಪಾಕಿಸ್ತಾನ-ಆಡಳಿತದ ಕಾಶ್ಮೀರ ಪಾಕಿಸ್ತಾನದ್ದೇ..!
ಇದೇ ವೇಳೆ ಪಿಎಕೆ ಭೂ ಪ್ರದೇಶ ಪಾಕಿಸ್ತಾನಕ್ಕೆ ಸೇರಿದ್ದು ಎಂದು ಹೇಳಿದ ಫಾರಕೂಕ್ ಅಬ್ದುಲ್ಲಾ, ಮಹಾರಾಜರೊಂದಿಗನ ಒಪ್ಪಂದವನ್ನು ಭಾರತ ಬಹುಶಃ ಮರೆತಂತಿದೆ. ಒಂದು ವೇಳೆ ಪಿಎಕೆ ನಿಮ್ಮದಾಗಿದ್ದರೆ ನಿಯಂತ್ರಣವನ್ನೇಕೆ  ಪಾಕಿಸ್ತಾನಕ್ಕೆ ನೀಡಿದ್ದೀರಿ. ಪಿಎಕೆ ಬಗ್ಗೆ ಮಾತನಾಡುವ ಭಾರತ, ತನ್ನ ನಿಯಂತ್ರಣದಲ್ಲಿರುವ ಕಾಶ್ಮೀರದ ಪರಿಸ್ಥಿತಿಯನ್ನೇ ಮರೆತುಬಿಟ್ಟಿದೆ. ಪಿಎಕೆ ಎಂದಿಗೂ ಪಾಕಿಸ್ತಾನದ್ದೇ..ಅದನ್ನು ಯಾರಿಂದಲೂ ಬದಲಿಸಲು ಸಾಧ್ಯವಿಲ್ಲ. ಆದರೆ  ಈ ವಿಚಾರ ತಿಳಿದಿದ್ದರೂ ಸುಖಾ ಸುಮ್ಮನೆ ಯುದ್ಧದ ಮಾತನಾಡುತ್ತಿದ್ದಾರೆ. ಮಾಡಲಿ ಅವರಿಗೆ ಎಷ್ಟು ಯುದ್ಧಗಳು ಬೇಕೋ ಅಷ್ಟು ಮಾಡಲಿ. ಆದರೆ ಪರಿಸ್ಥಿತಿ ಮಾತ್ರ ಎಂದಿಗೂ ಬದಲಾಗದು ಎಂದು ಫಾರೂಕ್ ಅಬ್ದುಲ್ಲಾ ಹೇಳಿದರು.
ಇದೀಗ ಫರೂಕ್ ಅಬ್ದುಲ್ಲಾ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ವ್ಯಾಪಕ ಟೀಕೆಗಳಿಗೆ ಕಾರಣವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!