ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ 
ದೇಶ

ಪತ್ನಿ ಭೇಟಿಯಿಂದ ಜಾಧವ್ ನೈತಿಕ ಸ್ಥೈರ್ಯ ಹೆಚ್ಚಲಿದೆ: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್

ಪತ್ನಿಯನ್ನು ಭೇಟಿ ಮಾಡುವುದರಿಂದ ಪಾಕಿಸ್ತಾನದ ಜೈಲಿನಲ್ಲಿರುವ ಭಾರತೀಯ ಪ್ರಜೆ ಕುಲಭೂಷಣ್ ಜಾಧವ್ ಅವರ ನೈತಿಕ ಸ್ಥೈರ್ಯ ಹೆಚ್ಚಲಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ...

ಗಾಂಧಿನಗರ: ಪತ್ನಿಯನ್ನು ಭೇಟಿ ಮಾಡುವುದರಿಂದ ಪಾಕಿಸ್ತಾನದ ಜೈಲಿನಲ್ಲಿರುವ ಭಾರತೀಯ ಪ್ರಜೆ ಕುಲಭೂಷಣ್ ಜಾಧವ್ ಅವರ ನೈತಿಕ ಸ್ಥೈರ್ಯ ಹೆಚ್ಚಲಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಹೇಳಿದ್ದಾರೆ. 
ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆ ಎದುರಿಸುತ್ತಿರುವ ಭಾರತೀಯ ಪ್ರಜೆ ಕುಲಭೂಷಣ್ ಜಾಧವ್ ಅವರನ್ನು ಭೇಟಿ ಮಾಡಲು ಅವರ ಪತ್ನಿಗೆ ಅವಕಾಶ ನೀಡುವುದಾಗಿ ನಿನ್ನೆಯಷ್ಟೇ ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಹೇಳಿತ್ತು. 
ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ನಿರ್ಮಲಾ ಸೀತಾರಾಮನ್ ಅವರು, ಪ್ರತೀಯೊಂದಕ್ಕೂ ನಿಯಮ ಹಾಗೂ ಪ್ರಕ್ರಿಯೆಗಳಿರುತ್ತವೆ. ಕುಲಭೂಷಣ್ ಜಾಧವ್ ಅವರು ತಮ್ಮ ಪತ್ನಿಯನ್ನು ಭೇಟಿ ಮಾಡುವುದರಿಂದ ಅವರ ನೈತಿಕ ಸ್ಥೈರ್ಯ ಹೆಚ್ಚಾಗಿದೆ. ಜಾಧವ್ ಅವರನ್ನು ಭಾರತಕ್ಕೆ ಕರೆತರಲು ನಮ್ಮಿಂದ ಸಾಧ್ಯವಾದಷ್ಟು ಪರಿಶ್ರಮಗಳನ್ನು ಪಡುತ್ತಿದ್ದೇವೆಂದು ತಿಳಿಸಿದ್ದಾರೆ. 
ಗೂಢಚರ್ಯೆ ನಡೆಸಿದ ಆರೋಪದಲ್ಲಿ ಭಾರತೀಯ ನೌಕಾಪಡೆಯ ನಿವೃತ್ತ ಕಮಾಂಡರ್ ಕುಲಭೂಷಣ್ ಜಾಧವ್ ಅವರನ್ನು ಪಾಕಿಸ್ತಾನ ಸೇನೆ ಬಂಧನಕ್ಕೊಳಪಡಿಸಿತ್ತು. ಜಾಧವ್ ಅವರಿಗೆ ಅಲ್ಲಿನ ಸೇನಾ ನ್ಯಾಯಾಲಯ ಕಳೆದಏಪ್ರಿಲ್ ತಿಂಗಳಿನಲ್ಲಿ ಮರಣ ದಂಡನೆ ಪ್ರಕಟಿಸಿತ್ತು. ಅಂತರಾಷ್ಟ್ರೀಯ ನ್ಯಾಯಾಲಯವು ಶಿಕ್ಷೆ ಜಾರಿ ಮಾಡದಂತ ಪಾಕಿಸ್ತಾನಕ್ಕೆ ತಾಕೀತು ಮಾಡಿತ್ತು. 
ಜಿಎಸ್'ಟಿ ಕುರಿತ ಚಿದಂಬರಂ ಹೇಳಿಕೆ ವಿರುದ್ಧ ಕಿಡಿ
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸರಕು ಮತ್ತು ಸೇವಾ ತೆರಿಗೆ ಕುರಿತಂತೆ ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ ಅವರ ಹೇಳಿಕೆಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಿಡಿಕಾರಿದ್ದಾರೆ. 

ಎಲ್ಲಾ ರಾಜಕೀಯ ಪಕ್ಷಗಳ ಅಭಿಪ್ರಾಯಗಳು ಹಾಗೂ ಅನುಮತಿ ಪಡೆದುಕೊಂಡ ಬಳಿಕವಷ್ಟೇ ಅಗತ್ಯ ಬದಲಾವಣೆಗಳನ್ನು ಮಾಡುವ ಮೂಲಕ ಕೇಂದ್ರ ಸರ್ಕಾರ ಸರಕು ಮತ್ತು ಸೇವಾ ತೆರಿಗೆಯನ್ನು ಜಾರಿಗೆ ತಂದಿತ್ತು ಎಂದು ಹೇಳಿದ್ದಾರೆ. 

ಸಾರ್ವಜನಿಕರು ಏನು ಹೇಳುತ್ತಾರೋ ಎಲ್ಲವನ್ನೂ ಮೋದಿ ಸರ್ಕಾರ ಕೇಳುತ್ತಿದೆ. ಅವುಗಳಿಗೆ ಪ್ರತಿಕ್ರಿಯೆಯನ್ನೂ ನೀಡುತ್ತಿದೆ. ಎಲ್ಲಾ ರಾಜಕೀಯ ಪಕ್ಷಗಳ ಅನುಮತಿ ಪಡೆದುಕೊಂಡ ಬಳಿಕವೇ ಜಿಎಸ್'ಟಿಯನ್ನು ಜಾರಿಗೆ ತರಲಾಗಿತ್ತು. ಜಿಎಸ್ ಟಿ ಮಂಡಳಿ ಸಭೆಯಲ್ಲಿ ನಿನ್ನೆ ಕೇಂದ್ರ ಸರ್ಕಾರ ತೆಗೆದುಕೊಂಡ ನಿರ್ಧಾರದಂತೆಯೇ  ಜಿಎಸ್ ಟಿ ಕುರಿತಂತೆ ಯಾವುದೇ ಬದಲಾವಣೆ ತರಬೇಕಿದ್ದರೂ ಆ ಬದಲಾವಣೆಯನ್ನು ಮಾಡಲು ನಾವು ಸಿದ್ಧರಿದ್ದೇವೆಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪೆಟ್ರೋಲಿಯಂ ಉತ್ಪನ್ನಗಳ ಮಿತಬಳಕೆ "ಈಗಿನ ಅಗತ್ಯ"-ಪ್ರಧಾನಿ ಮೋದಿ: ಮುಂದೆ ಕಾದಿದೆಯಾ ಸಂಕಷ್ಟದ ದಿನಗಳು?

IPL 2026: ಕೊನೆಯ ಎಸೆತದಲ್ಲಿ RCBಗೆ ರೋಚಕ ಜಯ; MI ವಿರುದ್ಧದ ಪಂದ್ಯ ಗೆಲ್ಲಿಸಿದ ಕೃನಾಲ್, ಭುವಿ; ಅಗ್ರಸ್ಥಾನಕ್ಕೇರಿದ ಆರ್‌ಸಿಬಿ!

1 ಮತದಿಂದ DMK ಅಭ್ಯರ್ಥಿ ಪೆರಿಯಕರುಪ್ಪನ್ ಸೋಲು; ಅಂಚೆ ಮತ ಗೊಂದಲದ ಬಗ್ಗೆ ECI ವಿರುದ್ಧ ಮದ್ರಾಸ್ ಹೈಕೋರ್ಟ್ ಕಿಡಿ!

S Keerthana: ವಿಜಯ್ ಕ್ಯಾಬಿನೆಟ್ ನಲ್ಲಿ ಪಂಚಭಾಷಾ ಪಾರಂಗತೆ; ಅತಿ ಕಿರಿಯ ಶಾಸಕಿ!

Pak ನಲ್ಲಿ ರಕ್ತದೋಕುಳಿ: ಹೊಸ ಉಗ್ರ ಸಂಘಟನೆ ನಡೆಸಿದ ದಾಳಿಯಲ್ಲಿ 21 ಸೈನಿಕರು ಬಲಿ; ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿ!

SCROLL FOR NEXT