ದೇಶ

3ನೇ ದಿನಕ್ಕೆ ಕಾಲಿಟ್ಟ ಐಟಿ ದಾಳಿ: ಜಯಾ ಟಿವಿ ಕಚೇರಿಯಲ್ಲಿ ಆಘೋಷಿತ ಆಸ್ತಿ ಪತ್ರ ಪತ್ತೆ!

Srinivasamurthy VN
ಚೆನ್ನೈ: ತಮಿಳುನಾಡು ಮಾಜಿ ಸಿಎಂ ದಿವಂಗತ ಜಯಲಲಿತಾ ಅವರ ಆಪ್ತೆ ವಿಕೆ ಶಶಿಕಲಾಗೆ ಸೇರಿದ ಜಯಾ ಟಿವಿ ಕಚೇರಿಯಲ್ಲಿ ನಡೆದ ಐಟಿ ದಾಳಿ ಮತ್ತು ಶೋಧ ಕಾರ್ಯಾಚರಣೆ ಸತತ ಮೂರನೇ ದಿನಕ್ಕೆ ಕಾಲಿಟ್ಟಿದ್ದು,  ಶನಿವಾರವೂ ಐಟಿ ಅಧಿಕಾಗಳು ಶೋಧ ಕಾರ್ಯ ಮುಂದುವರೆಸಿದ್ದಾರೆ.
ಐಟಿ ಇಲಾಖೆ ಮೂಲಗಳ ಪ್ರಕಾರ ಚೆನ್ನೈನಲ್ಲಿರುವ ಜಯಾ ಟಿವಿ ಕಚೇರಿಯಲ್ಲಿ ಮಹತ್ವದ ದಾಖಲೆ ಪತ್ರಗಳು ಪತ್ತೆಯಾಗಿದ್ದು, ಈ ಪೈಕಿ ಅಘೋಷಿತ ಆಸ್ತಿ ಪತ್ರಗಳು, ಷೇರು ಮಾರುಕಟ್ಟೆ ಹೂಡಿಕೆ ಪತ್ರಗಳು ಸೇರಿದಂತೆ ಇತರೆ  ಮಹತ್ವದ ದಾಖಲೆಗಳು ಪತ್ತೆಯಾಗಿವೆ ಎಂದು ಹೇಳಲಾಗಿದೆ. ಕೇವಲ ಇಷ್ಟು ಮಾತ್ರವಲ್ಲದೇ ಷೇರು ಮಾರುಕಟ್ಟೆಯಲ್ಲಿ ಹಲವು ಶೆಸ್ ಕಂಪನಿಗಳ ಹೆಸರಲ್ಲಿ ಬಂಡಪಾಳ ಹೂಡಲಾಗಿತ್ತು ಎಂಬ ಸ್ಫೋಟಕ ವಿಚಾರವನ್ನು ಐಟಿ ಇಲಾಖೆ  ಮೂಲಗಳು ತಿಳಿಸಿವೆ. ಇದು ಮಾತ್ರವಲ್ಲದೇ ಜಯಾ ಟಿವಿ ಎಂಡಿ ವಿವೇಕ್ ಜಯರಾಮನ್ ಅವರ ಸಹೋದರಿ ಮತ್ತು ಅಕೆಯ ಗಂಡನ ಹೆಸರಲ್ಲಿ ಶೆಲ್ ಸಂಸ್ಛೆಗಳ ಹೆಸರು ನೊಂದಾಯಿಸಿ ಷೇರು ಮಾರುಕಟ್ಟೆಯಲ್ಲಿ ಭಾರಿ ಪ್ರಮಾಣದ  ಹೂಡಿಕೆ ಮಾಡಲಾಗಿದೆ ಎಂಬ ವಿಚಾರವೂ ಬಹಿರಂಗವಾಗಿದೆ.
ಇದಲ್ಲದೆ 2 ಸ್ಯೂಟ್ ಕೇಸ್ ನಲ್ಲಿ ಸುಮಾರು 25 ಲಕ್ಷ ಹಣ ಹಾಗೂ ಚಿನ್ನಾಭರಣಗಳು ಪತ್ತೆಯಾಗಿದ್ದು. ಚಿನ್ನಾಭರಣದಶ ಮೌಲ್ಯಮಾಪನ ನಡೆಯುತ್ತಿದೆ. ದೆಹಲಿ, ಗುರುಗ್ರಾಮ, ಇಟಾ ಮತ್ತು ಘಾಜಿಯಾ ಬಾದ್ ಸೇರಿದಂತೆ ಒಟ್ಟು 7  ನಗರಗಳ ಒಟ್ಟು 22 ಪ್ರದೇಶಗಳಲ್ಲಿ ಏಕಕಾಲದಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಜಯಾ ಟಿವಿ, ವಿಕೆ ಶಶಿಕಲಾ ಅವರ ಸಂಬಂಧಿಕರು ಮತ್ತು ಆಪ್ತರ ಮನೆ ಮತ್ತು ಕಚೇರಿಗಳ ಮನೆ ಮೇಲೆ ದಾಳಿ ಮಾಡಲಾಗಿತ್ತು. ಈ ವೇಳೆ  ಜಯಾ ಟಿವಿ ಎಂಡಿ ವಿವೇಕ್ ಜಯರಾಮನ್ ಹಾಗೂ ಅವರ ಸಹೋದರಿ ಕೃಷ್ಣ ಪ್ರಿಯಾ ಅವರ ಸಂಬಂಧಿಕರ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಶೋಧ ನಡೆಸಿದ್ದರು.
SCROLL FOR NEXT