ಸಾಂದರ್ಭಿಕ ಚಿತ್ರ 
ದೇಶ

ನ್ಯಾಯಾಲಯದ ಆವರಣದಲ್ಲೇ ಗ್ಯಾಂಗ್ ವಾರ್: ಶೂಟೌಟ್ ನಲ್ಲಿ ವಿಚಾರಣಾಧೀನ ಕೈದಿ ಸಾವು

ರಾಜಧಾನಿ ನವದೆಹಲಿ ಮತ್ತೆ ಗ್ಯಾಂಗ್‍ವಾರ್‍ನಿಂದ ಬೆಚ್ಚಿ ಬಿದ್ದಿದೆ. ರೋಹಿಣಿ ಕೋರ್ಟ್ ಆವರಣದಲ್ಲೇ ಎರಡು ರೌಡಿಗಳ ಗುಂಪಿನ ನಡುವೆ ನಡೆದ ಭೀಕರ ಘರ್ಷಣೆ ..

ದೆಹಲಿ: ರಾಜಧಾನಿ ನವದೆಹಲಿ ಮತ್ತೆ ಗ್ಯಾಂಗ್‍ವಾರ್‍ನಿಂದ ಬೆಚ್ಚಿ ಬಿದ್ದಿದೆ. ರೋಹಿಣಿ ಕೋರ್ಟ್ ಆವರಣದಲ್ಲೇ ಎರಡು ರೌಡಿಗಳ ಗುಂಪಿನ ನಡುವೆ ನಡೆದ ಭೀಕರ ಘರ್ಷಣೆ ನಡೆದಿದೆ. 
ಕೋರ್ಟ್ ಆವರಣದಲ್ಲಿ ನಡೆಜ ಫೈರಿಂಗ್ ನಲ್ಲಿ  ಓರ್ವ ವಿಚಾರಣಾಧೀನ ಕೈದಿ ಸಾವನ್ನಪ್ಪಿದ್ದಾನೆ.  ಕೆಲವರು ಗಾಯಗೊಂಡಿದ್ದಾರೆ. ಈ ಘಟನೆಯಲ್ಲಿ ಗುಂಡು ಹಾರಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳಗ್ಗೆ 11.20 ವೇಳೆಗೆ ಅಪರಾಧ ಪ್ರಕರಣವೊಂದರ ವಿಚಾರಣೆಗಾಗಿ ಕೋರ್ಟ್‍ಗೆ ಆರೋಪಿಯೊಬ್ಬನನ್ನು ಕರೆತಂದ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ಗ್ಯಾಂಗ್‍ವಾರ್ ನಡೆಯಿತು. ಈ ಸಂದರ್ಭದಲ್ಲಿ ದುಷ್ಕರ್ಮಿಯೊಬ್ಬ ಹಾರಿಸಿದ ಗುಂಡಿನಿಂದ ವ್ಯಕ್ತಿಯೊಬ್ಬ ಮೃತಪಟ್ದಿದ್ದಾನೆ. 
ವಿನೋದ್ ಎಂಬಾತ ಮೃತ ವ್ಯಕ್ತಿ. ಗಾಯಾಳವನ್ನು ಸಮೀಪದ ಬಾಬಾ ಸಾಹೇಬ್ ಅಂಬೇಡ್ಕರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಪರಿಶೀಲಿಸಿದ ವೈದ್ಯರು ಆತ ಮೃತ ಪಟ್ಟಿರುವುದಾಗಿ ಘೋಷಿಸಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದು ಎರಡನೇ ಘಟನೆಯಾಗಿದ್ದು, ಕಳೆದ ಎಪ್ರಿಲ್ ನಲ್ಲಿ  38 ವರ್ಷದ ವಿಚಾರಾಧೀನ ಕೈದಿಯೊಬ್ಬನನ್ನು ಶೂಟ್ ಮಾಡಿ ಕೊಲ್ಲಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!

ಸರ್ಕಾರವನ್ನು ಅಸ್ಥಿರಗೊಳಿಸುವ ಪಿತೂರಿ: 'ಸ್ಟಿಂಗ್ ಆಪರೇಷನ್' ಕುರಿತು ಸಿಎಂ DKS ಎಚ್ಚರಿಕೆ ಕರೆಗೆ ಸಚಿವರಿಂದ ಬೆಂಬಲ

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ಚಿಕ್ಕಣ್ಣ, ಯಶಸ್ ಸೂರ್ಯಗೆ ಬಿಗ್ ಶಾಕ್‌; ಇಬ್ಬರಿಗೂ ಕೋರ್ಟ್ ಸಮನ್ಸ್