ದೇಶ

ದಕ್ಷಿಣ ಚೀನಾ ಸಮುದ್ರ ವಿವಾದ: ನಿಯಮ ಆಧಾರಿತ ಭದ್ರತಾ ವ್ಯವಸ್ಥೆಗೆ ಭಾರತದ ಬೆಂಬಲ: ಮೋದಿ

Srinivas Rao BV
ಮನಿಲಾ: ಭಯೋತ್ಪಾದನೆಯ ವಿರುದ್ಧ ಪರಿಣಾಮಕಾರಿ ಹೋರಾಟಕ್ಕಾಗಿ ಪ್ರಾದೇಶಿಕ ಸಹಕಾರವನ್ನು ತೀವ್ರಗೊಳಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟ (ಆಸಿಯಾನ್‌) ಸಭೆಯಲ್ಲಿ ಕರೆ ನೀಡಿದ್ದಾರೆ. 
ಭಯೋತ್ಪಾದನೆ, ತೀವ್ರವಾದಿತ್ವ ಪ್ರಾದೇಶಿಕವಾಗಿ ಅತ್ಯಂತ ತುರ್ತಾಗಿ ನಿರ್ವಹಣೆ ಮಾಡಬೇಕಾದ ಸವಾಲುಗಳಾಗಿದ್ದು, ಎಲ್ಲಾ ರಾಷ್ಟ್ರಗಳೂ ಭಯೋತ್ಪಾದನೆಯ ವಿರುದ್ಧದ ಸಹಕಾರವನ್ನು ತೀವ್ರಗೊಳಿಸಬೇಕೆಂದು ಮೋದಿ ಹೇಳಿದ್ದಾರೆ. ಅಮೆರಿಕ, ಚೀನಾ, ಜಪಾನ್, ಆಸ್ಟ್ರೇಲಿಯಾ ರಾಷ್ಟ್ರಗಳು ಭಾಗಿಯಾಗಿದ್ದ ಇದೇ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ದಕ್ಷಿಣ ಚೀನಾ ಸಮುದ್ರದ ವಿವಾದದ ಬಗ್ಗೆಯೂ ಮಾತನಾಡಿದ್ದು, ನಿಯಮ ಆಧಾರಿತ ಭದ್ರತಾ ವ್ಯವಸ್ಥೆಯನ್ನು ಭಾರತ ಬೆಂಬಲಿಸುತ್ತದೆ ಎಂದು ಆಸಿಯಾನ್ ರಾಷ್ಟ್ರಗಳ ಒಕ್ಕೂಟಕ್ಕೆ ಭರವಸೆ ನೀಡುವುದಾಗಿ ತಿಳಿಸಿದ್ದಾರೆ. 
ಆಸಿಯಾನ್ ಸಭೆಯಲ್ಲಿ ಚರ್ಚೆಗೆ ಬರುವ ವಿಷಯಗಳ ಪೈಕಿ ಚೀನಾದ ದಕ್ಷಿಣ ಸಮುದ್ರ ವಿವಾದದ ವಿಷಯ ಪ್ರಾಮುಖ್ಯತೆ ಪಡೆದಿತ್ತು. ದಕ್ಷಿಣ ಚೀನಾ ಸಮುದ್ರದ ಪ್ರದೇಶ ತಮಗೂ ಸೇರಿದೆ ಎಂದು ವಿಯೆಟ್ನಾಂ, ಫಿಲಿಪೇನ್ಸ್ ರಾಷ್ಟ್ರಗಳು ಹೇಳುತ್ತಿದ್ದು, ಚೀನಾ ದಕ್ಷಿಣ ಚೀನಾ ಸಮುದ್ರದಲ್ಲಿ ನಿಯಮ ಉಲ್ಲಂಘಿಸಿ ಚಟುವಟಿಕೆಗಳಲ್ಲಿ ತೊಡಗಿದೆ ಎಂದು ಆರೋಪಿಸಿವೆ. 
SCROLL FOR NEXT