ದೇಶ

ಗುಜರಾತ್ ಬಿಜೆಪಿ ಚುನಾವಣಾ ಜಾಹೀರಾತಿನಲ್ಲಿ ರಾಹುಲ್ ಗಾಂಧಿ ಈಗ 'ಯುವರಾಜ'!

Raghavendra Adiga
ಗಾಂಧಿನಗರ: ಗುಜರಾತ್ ವಿಧಾನಸಭಾ ಚುನಾವಣೆ ಪ್ರಚಾರದ ಜಾಹೀರಾತಿನಲ್ಲಿ `ಪಪ್ಪು’ ಎಂಬ ಪದವನ್ನು ಬಳಸದಂತೆ ಚುನಾವಣಾ ಆಯೋಗ ನಿರ್ಬಂಧಿಸಿದ ಹಿನ್ನೆಲೆಯಲ್ಲಿ ಇದೀಗ ಬಿಜೆಪಿ 'ಯುವರಾಜ' ಪದವನ್ನು ಬಳಸಲು ನಿರ್ಧರಿಸಿದೆ.
'ಯುವರಾಜ' ಎಂಬ ಪದ ಬಳಕೆ ಮಾಡಲು ಚುನಾವಣಾ ಆಯೋಗ ಅನುಮತಿ ನೀಡಿದೆ.  ಈ ಕುರಿತಂತೆ ಗುಜರಾತ್ ಬಿಜೆಪಿ ತನ್ನ ಅಧಿಕೃತ ಟ್ವಿಟರ್ ಮತ್ತು ಫೇಸ್ ಬುಕ್ ಪೇಜ್ ನಲ್ಲಿ ವಿಡಿಯೋವನ್ನು ಅಪ್ ಮಾಡಿದೆ. 
ಈ ಮೊದಲು ಗುಜರಾತ್ ಬಿಜೆಪಿ ತನ್ನ ಸಾಮಾಜಿಕ ಜಾಲತಾಣದ ಜಾಹೀರಾತುಗಳಲ್ಲಿ ಪಪ್ಪು ಎಂದು ಬಳಸಿತ್ತು  ಚುನಾವಣಾ ಆಯೋಗ, ಪಪ್ಪು ಪದ ಅಗೌರವವನ್ನು ತೋರಿಸುತ್ತದೆ ಇದನ್ನು ಬಳಸಬಾರದೆಂದು ಆದೇಶಿಸಿತ್ತು.
ಯಾವುದೇ ಚುನಾವಣಾ ಜಾಹೀರಾತಿನ ಸ್ಕ್ರಿಪ್ಟ್ ನ್ನು ಚುಒಂದು ತಿಂಗಳ ಮುಂಚಿತವಾಗಿ ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು. ಆಯೋಗ ಅದನ್ನು ಪರಿಶೀಲಿಸಿ ಅನುಮತಿ ನೀಡಿದ ಬಳಿಕವಷ್ಟೇ ಅದನ್ನು ಸಾರ್ವಜನಿಕವಾಗಿ ಬಳಸಬಹುದು ಎನ್ನುವ ನಿಯಮ ಜಾರಿಯಲ್ಲಿದೆ.
SCROLL FOR NEXT