ದೇಶ

ದಕ್ಷಿಣ ಭಾರತದಲ್ಲಿ ಆತ್ಮಹತ್ಯೆಗಳ ಸಂಖ್ಯೆ ಹೆಚ್ಚು: ಯಾಕೆ ಗೊತ್ತಾ?

Srinivas Rao BV
ನವದೆಹಲಿ: ಹೆಚ್ ಐವಿ/ ಏಡ್ಸ್, ಹೆಪಿಟೈಟಿಸ್, ಕ್ಯಾನ್ಸರ್ ಗಳಿಗಿಂತಲೂ ಹೆಚ್ಚು ಆತ್ಮಹತ್ಯೆಗಳಿಂದ ಸಾವುಂಟಾಗುತ್ತಿದ್ದು,  ಸಾವಿನ ಸಂಖ್ಯೆ ದಕ್ಷಿಣ ಭಾರತದಲ್ಲೇ ಹೆಚ್ಚಿದೆ ಎಂದು ಹೆಲ್ತ್ ರಿಸರ್ಚ್ ಏಜೆನ್ಸಿಗಳು ನಡೆಸಿರುವ ಜಂಟಿ ಸಮೀಕ್ಷೆ ಮೂಲಕ ತಿಳಿದುಬಂದಿದೆ. 
ಭಾರತೀಯ ಮೆಡಿಕಲ್ ರಿಸರ್ಚ್ ಕೌನ್ಸಿಲ್ ವರದಿ ತಯಾರಿಸಿದ್ದು, ದಕ್ಷಿಣ ಭಾರತದ ರಾಜ್ಯಗಳು ಹಾಗೂ ಪಶ್ಚಿಮ ಬಂಗಾಳದಲ್ಲಿ 15-39 ವಯಸ್ಸಿನ ವ್ಯಕ್ತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದೆ. 
2016 ರಲ್ಲಿ ಭಾರತದ ಒಟ್ಟು ಅಕಾಲಿಕ ಮರಣಗಳ ಸಂಖ್ಯೆಯಲ್ಲಿ ಶೇ.3 ರಷ್ಟು ಜನರು ಆತ್ಮಹತ್ಯೆಯಿಂದ ಸಾವನ್ನಪ್ಪುತ್ತಿದ್ದು, ದಕ್ಷಿಣ ಭಾರತದ ರಾಜ್ಯಗಳು ಹಾಗೂ ಪಶ್ಚಿಮ ಬಂಗಾಳದಲ್ಲಿ ಶೇ.9 ಕ್ಕಿಂತ ಹೆಚ್ಚಿದೆ ಎಂದು ವರದಿ ಹೇಳಿದೆ. ತಮಿಳುನಾಡಿನಲ್ಲಿ 15-39 ವಯಸ್ಸಿನವರು ಶೇ.25 ರಷ್ಟು ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಶೇ.24.4 ಜನರು ಕೇರಳದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಶೇ.6.8 ರಷ್ಟು ಮಂದಿ ಬಿಹಾರದಲ್ಲಿ, ಶೇ.7.7 ರಷ್ಟು ಜನರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. 
ಆತ್ಮಹತ್ಯೆಗೆ ಹಲವು ಕಾರಣಗಳಿದ್ದು, ಕಠಿಣ ಸಾಮಾಜಿಕ ರೂಢಿಗಳು, ವಿದ್ಯಾವಂತ ಮತ್ತು ಪ್ರಗತಿಶೀಲ ಯುವಕರ ಆಕಾಂಕ್ಷೆಗಳು, ಹೆಚ್ಚಿನ ಒತ್ತಡಗಳು ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗಿದೆ. ಭಾರತೀಯ ಮನಃಶಾಸ್ತ್ರ ಸೊಸೈಟಿಯ ಹಿರಿಯ ಸದಸ್ಯ ಎನ್.ಎನ್ ರಾಜು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಉನ್ನತ ಶಿಕ್ಷಣದ ಮಟ್ಟ ಹಾಗೂ ಹೆಚ್ಚುತ್ತಿರುವ ಒತ್ತಡಗಳನ್ನು ನಿರ್ವಹಣೆ ಮಾಡಲು ಸಾಧ್ಯವಾಗದೇ ಇರುವುದರಿಂದ ಯುವಕರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ಹೇಳಿದ್ದಾರೆ.
SCROLL FOR NEXT