ಪ್ರಧಾನ ಮಂತ್ರಿ ನರೇಂದ್ರ ಮೋದಿ
ನವದೆಹಲಿ: ಮುಂದಿನ ಲೋಕಸಭೆ ಚುನಾವಣೆಗೆ ಅಭಿವೃದ್ಧಿ ಮುಖ್ಯ ವಿಷಯವಾಗಿರುತ್ತದೆ ಎಂದು ಸ್ಪಷ್ಪಪಡಿಸಿರುವ ಎನ್ ಡಿಎ ಸರ್ಕಾರ, ಸಾಮಾನ್ಯ ಹಾಗೂ ಬಡಜನತೆ ಮೇಲೆ ಪರಿಣಾಮ ಬೀರಿದ ಕನಿಷ್ಠ 15 ಯೋಜನೆಗಳನ್ನು ಗುರುತಿಸುವಂತೆ ಸಚಿವಾಲಯಗಳಿಗೆ ಸೂಚಿಸಿದೆ. ಚುನಾವಣೆಗೆ ಮುನ್ನ ಈ ಯೋಜನೆಗಳು ಜನರಿಗೆ ತಲುಪಿಸುವುದು ಸರ್ಕಾರದ ಕಾರ್ಯತಂತ್ರವಾಗಿದೆ.
ಈ ಯೋಜನೆಗಳು ಮತ್ತು ಸಾಧನೆಗಳನ್ನು ಈ ಹಿಂದೆ 60 ವರ್ಷ ದೇಶವನ್ನಾಳಿದ ಪಕ್ಷದೊಂದಿಗೆ ಹೋಲಿಸಿ ಈಗಿನ ಸರ್ಕಾರ 60 ತಿಂಗಳಿನಲ್ಲಿ ಮಾಡಿರುವ ಕೆಲಸವನ್ನು ಜನತೆಗೆ ತೋರಿಸಲಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಇದು ಚರ್ಚೆಗೆ ಬಂತು.ಸರ್ಕಾರದ ಯಾವ ಯೋಜನೆಯನ್ನು ಒತ್ತಿ ಹೇಳಬೇಕು ಎಂಬುದನ್ನು ಕಾರ್ಯತಂತ್ರದಲ್ಲಿ ನಿರ್ಧರಿಸಲಾಗುತ್ತದೆ. ಮೋದಿ ಸರ್ಕಾರದ ಸಾಧನೆಗಳನ್ನು ತೋರಿಸುವುದು ಇದರ ಉದ್ದೇಶವಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಧಾನ ಮಂತ್ರಿ ಉಜ್ವಲ ಯೋಜನೆ ಮತ್ತು ಎಲ್ಲರಿಗೂ ವಸತಿಯಂತಹ ಯೋಜನೆಗಳನ್ನು ಈಗಾಗಲೇ ಕೆಲವು ಸಚಿವಾಲಯಗಳು ತಮ್ಮ ಇಲಾಖೆಯ ಸಾಧನೆಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ತೋರಿಸುತ್ತಿವೆ.
ಪ್ರಧಾನ ಮಂತ್ರಿ ಉಜ್ವಲ ಯೋಜನೆ, ನೇರ ನಗದು ವರ್ಗಾವಣೆ, ಜನಧನ ಯೋಜನೆ ಮತ್ತು ಇತರ ಯೋಜನೆಗಳಲ್ಲಿ ಮಾಡಿರುವ ಸಾಧನೆಗಳನ್ನು ಸಭೆಯಲ್ಲಿ ವಿವರಿಸಲಾಯಿತು. ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಬಡವರಿಗೆ ಉಚಿತ ಅಡುಗೆ ಅನಿಲ ಸಂಪರ್ಕ ನೀಡುವುದಾಗಿದೆ. ಈ ಯೋಜನೆ ಎನ್ ಡಿಎ ಸರ್ಕಾರಕ್ಕೆ ಮಹತ್ವದ್ದಾಗಿದ್ದು ದೇಶದ 3 ಕೋಟಿ ರೂಪಾಯಿಗೂ ಅಧಿಕ ಜನರು ಇದರಿಂದ ಲಾಭ ಪಡೆದುಕೊಂಡಿದ್ದಾರೆ. ಜನಧನ ಯೋಜನೆಯಡಿ ಬಡವರಿಗೆ 30 ಕೋಟಿ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ.
ಮುಂದಿನ ದಿನಗಳಲ್ಲಿ ಕೂಡ ಬಡ ಜನತೆಗೆ ಕೇಂದ್ರ ಸರ್ಕಾರ ಇನ್ನಷ್ಟು ಯೋಜನೆಗಳನ್ನು ಜಾರಿಗೆ ತರುವ ನಿರೀಕ್ಷೆಯಿದೆ.
ಇತ್ತೀಚಿನ ಸೌಭಾಗ್ಯ ಯೋಜನೆಯಡಿ, ಕೇಂದ್ರ ಇಂಧನ ಸಚಿವಾಲಯ ದೇಶದ ಪ್ರತಿಯೊಬ್ಬರಿಗೂ ವಿದ್ಯುತ್ ಸಂಪರ್ಕ ಕಲ್ಪಿಸುವ ಗುರಿ ಹೊಂದಿದೆ. ಮಾರ್ಗಸೂಚಿ ಪ್ರಕಾರ, 2019, ಮಾರ್ಚ್ 31ರ ವೇಳೆಗೆ 3 ಕೋಟಿಗೂ ಅಧಿಕ ಮನೆಗಳಿಗೆ ವಿದ್ಯುತ್ ಸಂಪರ್ಕ ಒದಗಿಸುವ ಕೆಲಸಗಳು ರಾಜ್ಯ ಸರ್ಕಾರಗಳು ಮಾಡಬೇಕಿವೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos