ದೇಶ

ಇನ್ಸ್ಟಾಗ್ರಾಮ್ ನಲ್ಲಿ ಮೈಸೂರು ಮಹಾರಾಣಿಯ ನಕಲಿ ಖಾತೆ: ದೂರು ದಾಖಲು

Srinivas Rao BV
ಬೆಂಗಳೂರು: ಇನ್ಸ್ಟಾಗ್ರಾಮ್ ನಲ್ಲಿ ಮೈಸೂರು ಮಹಾರಾಣಿ ತ್ರಿಷಿಕಾ ಕುಮಾರಿ ಒಡೆಯರ್ ಅವರ ನಕಲಿ ಖಾತೆ ಕಂಡುಬಂದಿದ್ದು, ಸೈಬರ್ ಕ್ರೈಮ್ ಪೊಲೀಸರಿಗೆ ದೂರು ದಾಖಲಿಸಿದ್ದಾರೆ. 
ತ್ರಿಷಿಕಾ ಒಡೆಯರ್ ಅವರ ಕಾರ್ಯದರ್ಶಿ ದೂರು ನೀಡಿದ್ದು, ನಕಲಿ ಖಾತೆಯಿಂದ ಹಲವರಿಗೆ ಅನುಯಾಯಿಗಳಾಗುವಂತೆ ರಿಕ್ವೆಸ್ಟ್ ಹೋಗಿದೆ. ಅಷ್ಟೇ ಅಲ್ಲದೇ ತಮಗೆ ಹಾಗೂ ಅರಮನೆಗೆ ಸಂಬಂಧಿಸಿದ ಫೋಟೊಗಳನ್ನು ಅಪ್ ಲೋಡ್ ಮಾಡಲಾಗಿದೆ ಎಂದು ದೂರು ನೀಡಲಾಗಿದೆ. 
ಹೆಚ್ಚಿನ ವಿಚಾರಣೆಗಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವೊಂದು ಇ-ಡಾಕ್ಯುಮೆಂಟ್ ಗಳನ್ನು ನೀಡುವಂತೆ ಸೂಚಿಸಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ನಕಲಿ ಖಾತೆ ಸೃಷ್ಟಿಸಿದ ವ್ಯಕ್ತಿ ಹಾಗೂ ಆತನ ಐಪಿ ಅಡ್ರೆಸ್ ನ್ನು ಹುಡುಕಲು ಒಂದು ತಂಡ ಕಾರ್ಯನಿರ್ವಹಿಸುತ್ತಿದ್ದು ಹೆಚ್ಚಿನ ಸಾಕ್ಷ್ಯಗಳನ್ನು ಕಲೆಹಾಕುತ್ತಿದ್ದೇವೆ ಎಂದು ಅಧಿಕಾರಿ ತಿಳಿಸಿದ್ದಾರೆ.
ತ್ರಿಷಿಕಾ ಒಡೆಯರ್ ಅವರು ಸಾಮಾಜಿಕ ಜಾಲತಾಣ ಖಾತೆಗಳನ್ನು ಹೊಂದಿಲ್ಲ ಅವರ ಹೆಸರಿನಲ್ಲಿರುವ ಖಾತೆಗಳಿಗೆ ರಿಕ್ವೆಸ್ಟ್ ಕಳಿಸುವುದಾಗಲಿ ಫಾಲೋ ಮಾಡುವುದಾಗಿ ಮಾಡಬೇಡಿ ಎಂದು ಅಭಿಮಾನಿಗಳಿಗೆ ಮೈಸೂರಿನ ರಾಜವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ್ದರು. 
SCROLL FOR NEXT