ಅಸ್ಸಾಂ ರಾಜ್ಯದ ಆರೋಗ್ಯ ಸಚಿವ ಹಿಮಾಂತ ಬಿಸ್ವ ಶರ್ಮಾ
ಇಂಫಾಲ: ಕ್ಯಾನ್ಸರ್'ನಂತಹ ಮಾರಕ ರೋಗಗಳಿಂದ ಬಳುತ್ತಿರುವ ಜನರು ಈ ಹಿಂದೆ ಮಾಡಿದ ಪಾಪಕ್ಕೆ ಪ್ರತಿಫಲದ ರೂಪದಲ್ಲಿ ರೋಗವನ್ನು ಅನುಭವಿಸುತ್ತಾರೆ. ಇದು ದೈವಿಯ ನ್ಯಾಯಾಲಯದ ನೀಡುವ ನ್ಯಾಯ ಎಂದು ಅಸ್ಸಾಂ ರಾಜ್ಯದ ಆರೋಗ್ಯ ಸಚಿವ ಹಿಮಾಂತ ಬಿಸ್ವ ಶರ್ಮಾ ಅವರು ಬುಧವಾರ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.
ಹೊಸದಾಗಿ ನೇಮಕಗೊಂಡ ಶಾಲಾ ಶಿಕ್ಷಕರಿಗೆ ನೇಮತ ಪತ್ರವನ್ನು ವಿತರಿಸಿದ ಬಳಿಕ ಮಾತಾಡಿರುವ ಅವರು, ಸಾಕಷ್ಟು ಮಂದಿ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದಾರೆ. ಕೆಲವರು ಅಪಘಾತದಿಂದ ಸಾವನ್ನಪ್ಪುತ್ತಾರೆ. ಇವೆಲ್ಲವೂ ನಮ್ಮ ಪಾಪದ ಪ್ರತಿಫಲಗಳಿಗೆ ದೈವಿಕ ನ್ಯಾಯಾಲಯ ನೀಡುವ ಶಿಕ್ಷೆ ಎಂದು ಹೇಳಿದ್ದಾರೆ.
ನಾವು ಪಾಪ ಮಾಡಿದರೆ ದೇವರು ನಮಗೆ ಶಿಕ್ಷೆಯನ್ನು ನೀಡುತ್ತಾರೆ. ಕೆಲವರು ಪ್ರಾಯದಲ್ಲಿದ್ದಾಗಲೇ ಕ್ಯಾನ್ಸರ್ ರೋಗದಿಂದ ಬಳಲುತ್ತಿರುತ್ತಾರೆ. ಇನ್ನು ಕೆಲವರು ಅತೀ ಸಣ್ಣ ವಯಸ್ಸಿನಲ್ಲಿಯೇ ಅಪಘಾತದಲ್ಲಿ ಸಾವನ್ನಪ್ಪುತ್ತಾರೆ. ಇಂತಹ ವ್ಯಕ್ತಿಗಳ ಹಿನ್ನಲೆಯನ್ನು ನೋಡಿದರೆ ಇವೆಲ್ಲಾ ದೈವಿಕ ನ್ಯಾಯಲಯದ ನೀಡಿರುವ ನ್ಯಾಯ ಎಂಬುದು ನಮಗೆ ತಿಳಿಯುತ್ತದೆ. ದೈವಿಕ ನ್ಯಾಯಾಲಯ ನೀಡುವ ನ್ಯಾಯವನ್ನು ನಾವು ಸ್ವೀಕರಿಸಲೇಬೇಕು ಎಂದು ತಿಳಿಸಿದ್ದಾರೆ.
ಪ್ರಸ್ತುತ ಜೀವನದಲ್ಲಿ ಅಥವಾ ಹಿಂದಿನ ಜನ್ಮದಲ್ಲಿ, ಅಥವಾ ತಂದೆ-ತಾಯಿ ಮಾಡಿದ ಪಾಪದ ಪ್ರತಿಫಲಗಳಿಂದ ನಾವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದನ್ನು ಭಗವದ್ಗೀತೆಯಲ್ಲಿಯೇ ಬರದಿದೆ. ಬೈಬಲ್ ನಲ್ಲಿಯೂ ಬರೆಯಲಾಗಿದೆ. ಇದರಲ್ಲಿ ಬೇಸರ ಪಡುವ ಅಗತ್ಯವಿಲ್ಲ. ಎಲ್ಲವನ್ನೂ ನಾವು ನಮ್ಮ ಜೀವನದಲ್ಲಿಯೇ ಅನುಭವಿಸಬೇಕು. ಇದು ದೈವಿಕ ನ್ಯಾಯಾಲಯದ ನ್ಯಾಯ. ಇದರಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.