ದೇಶ

ಮೀಸಲಾತಿ ಹೋರಾಟಗಾರ ಹಾರ್ದಿಕ್ ಪಟೇಲ್'ಗೆ 'ವೈ' ಶ್ರೇಣಿ ಭದ್ರತೆ ಒದಗಿಸಿದ ಕೇಂದ್ರ

Manjula VN
ನವದೆಹಲಿ: ಪಾಟೀದಾರ್ ಮೀಸಾತಿ ಹೋರಾಟಗಾರ ಹಾರ್ದಿಕ್ ಪಟೇಲ್ ಅವರಿಗೆ ಕೇಂದ್ರ ಸರ್ಕಾರ 'ವೈ' ಶ್ರೇಣಿಯ ಭದ್ರತೆಯನ್ನು ನೀಡಿದೆ ಎಂದು ಮೂಲಗಳು ತಿಳಿಸಿವೆ. 
ಹಾರ್ದಿಕ್ ಪಟೇಲ್ ಅವರನ್ನು ಹೊಣೆ ಮಾಡುವ ಹೊಣೆಯನ್ನು ಕೇಂದ್ರ ಸರ್ಕಾರ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್)ಗೆ ನೀಡಿದೆ ಎಂದು ತಿಳಿದುಬಂದಿದೆ. 
ಶೀಘ್ರದಲ್ಲಿಯೇ ಶಸ್ತ್ರಸಜ್ಜಿತ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಹಾರ್ದಿಕ್ ಅವರಿಗೆ ಭದ್ರತೆಯನ್ನು ಒದಗಿಸಲಿದ್ದಾರೆ. ಗುಜರಾತ್ ರಾಜ್ಯಕ್ಕೆ ಹಾರ್ದಿಕ್ ಭೇಟಿ ನೀಡಿದೆ ಸಂದರ್ಭಗಳಲ್ಲಿ 8 ಕಮಾಂಡೋ ಪಡೆಗಳು ಅವರಿಗೆ ಭದ್ರತೆಯನ್ನು ನೀಡಿಲಿದ್ದಾರೆಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. 
ಕೇಂದ್ರ ಗುಪ್ತಚರ ಹಾಗೂ ಭದ್ರತಾ ಸಂಸ್ಥೆಗಳು ಸಂಗ್ರಹಿಸುವ ವರದಿಗಳ ಪ್ರಕಾರ ಹಾರ್ದಿಕ್'ಗೆ ಬೆದರಿಕೆಗಳಿದ್ದು, ಈ ಹಿನ್ನಲೆಯಲ್ಲಿ ಭದ್ರತೆಯನ್ನು ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ. 
ಸಿಐಎಸ್ಎಪ್ ವಿಶೇಷ ವಿಐಪಿ ಭದ್ರತಾ ವಿಭಾಗವನ್ನು ಹೊಂದಿದ್ದು, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ರಂತಹ 60 ಗಣ್ಯರಿಗೆ ಭದ್ರತೆಯನ್ನು ನೀಡುತ್ತಿದೆ. 
ಮುಂದಿನ ತಿಂಗಳು ಗುಜರಾತ್ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಆರಂಭಗೊಳ್ಳಲಿದೆ. ಮೀಸಲಾತಿ ಕುರಿತ ತಮ್ಮ ಸಮುದಾಯದ ಆಗ್ರಹಗಳಿಗೆ ಒಪ್ಪಿಗೆ ನೀಡಿದ್ದ ಕಾಂಗ್ರೆಸ್'ಗೆ ಕೆಲ ದಿನಗಳ ಹಿಂದಷ್ಟೇ ಹಾರ್ದಿಕ್ ಬೆಂಬಲ ಸೂಚಿಸಿದ್ದರು. 
SCROLL FOR NEXT