ಬಿಜೆಪಿ ಸಂಸದ ಶತೃಘ್ನ ಸಿನ್ಹಾ 
ದೇಶ

ಮೀಮ್ ವಿವಾದದ ನಡುವೆಯೇ 'ಚಾಯ್ ವಾಲಾ' ಮೋದಿ ವಿರುದ್ಧ ಶತೃಘ್ನ ಸಿನ್ಹ ಟೀಕೆ

ಚಾಯ್ ವಾಲ ದೇಶದ ಪ್ರಧಾನಿಯಾಗಬಹುದಾದರೆ, ವಕೀಲ್ ಬಾಬು ಆರ್ಥಿಕತೆ ಬಗ್ಗೆ ಮಾತನಾಡಬಹುದಾದರೆ ನಾನೇಕೆ ಆರ್ಥಿಕತೆ ಬಗ್ಗೆ ಮಾತನಾಡಬಾರದು

ನವದೆಹಲಿ: ಚಾಯ್ ವಾಲ ದೇಶದ ಪ್ರಧಾನಿಯಾಗಬಹುದಾದರೆ, ವಕೀಲ್ ಬಾಬು ಆರ್ಥಿಕತೆ ಬಗ್ಗೆ ಮಾತನಾಡಬಹುದಾದರೆ ನಾನೇಕೆ ಆರ್ಥಿಕತೆ ಬಗ್ಗೆ ಮಾತನಾಡಬಾರದು ಎಂದು ಹಿರಿಯ ನಟ ಹಾಗೂ ಬಿಜೆಪಿ ಸಂಸದ ಶತೃಘ್ನ ಸಿನ್ಹಾ ಪ್ರಶ್ನಿಸಿದ್ದಾರೆ. ಈ ಮೂಲಕ ಶತೃಘ್ನ ಸಿನ್ಹಾ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮತ್ತೊಮ್ಮೆ ಟೀಕಾ ಪ್ರಹಾರ ನಡೆಸಿದ್ದಾರೆ. 
ತಮ್ಮದೇ ಪಕ್ಷದವರ ವಿರುದ್ಧ ವಾಗ್ದಾಳಿ ನಡೆಸುವುದರಿಂದ ಶತೃಘ್ನ ಸಿನ್ಹಾ ಹೆಚ್ಚು ಗುರುತಿಸಿಕೊಂಡಿದ್ದು, ಆರ್ಥಿಕ ತಜ್ಞರಲ್ಲದವರು ಆರ್ಥಿಕತೆ ಬಗ್ಗೆ ಮಾತನಾಡಬಹುದಾದರೆ ತಾವೂ ಸಹ ಆರ್ಥಿಕತೆ ಬಗ್ಗೆ ಮಾತನಾಡಬಹುದು ಎಂದು ಹೇಳಿದ್ದಾರೆ. 
"ವಕೀಲ್ ಬಾಬು ಆರ್ಥಿಕತೆ ಬಗ್ಗೆ ಮಾತನಾಡಬಹುದಾದರೆ, ಟಿವಿ ನಟಿ, ದೇಶದ ಮಾನವ ಸಂಪನ್ಮೂಲ ಸಚಿವೆಯಾಗಬಹುದಾದರೆ, ಚಾಯ್ ವಾಲ ದೇಶದ.... ನಾನು ಹೆಚ್ಚು ಹೇಳುವುದಿಲ್ಲ... " ಎಂದಿರುವ ಶತೃಘ್ನ ಸಿನ್ಹಾ ನಾನೇಕೆ ದೇಶದ ಆರ್ಥಿಕತೆ ಬಗ್ಗೆ ಮಾತನಾಡಬಾರದು ಎಂದು ಪ್ರಶ್ನಿಸಿದ್ದಾರೆ. 
ಆರ್ಥಿಕತೆ ಬಗ್ಗೆ ಮಾತನಾಡಲು ಸಿನಿಮಾ ಹಿನ್ನೆಲೆಯುಳ್ಳ ಶತೃಘ್ನ ಸಿನ್ಹಾ ಅವರಿಗೇನು ಅರ್ಹತೆ ಇದೆ ಎಂದು ಜನರು ಕೇಳಿದ್ದಾರೆ ಎಂದು ಬಿಜೆಪಿ ಸಂಸದ ಹೇಳಿದ್ದು, ಕಳೆದ ವರ್ಷ ನಡೆದ ನೋಟು ನಿಷೇಧದಿಂದಾಗಿ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

LOP ಅಂದ್ರೆ 'ರಬ್ಬರ್ ಸ್ಟ್ಯಾಂಪ್' ಅಲ್ಲ: CBI ನಿರ್ದೇಶಕರ ಆಯ್ಕೆ ಪ್ರಕ್ರಿಯೆ ವಿರುದ್ಧ ತಿರುಗಿಬಿದ್ದ ರಾಹುಲ್!

ಸಾರಿಗೆ ನೌಕರರಿಗೆ ಗುಡ್ ನ್ಯೂಸ್: ಕೊನೆಗೂ ವೇತನ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ; ಜುಲೈ 1 ರಿಂದ ಜಾರಿ

IPL 2026: 82 ರನ್‌ಗಳಿಂದ SRH ಮಣಿಸಿದ Gujarat Titans; RCB ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಗಿಲ್ ಪಡೆ!

ಬಂಗಾಳದಲ್ಲಿ ಶುದ್ಧೀಕರಣ ಶುರು ಮಾಡಿದ ಸಿಎಂ ಸುವೇಂದು: TMC ನೇಮಕ ಮಾಡಿದ್ದ ಗ್ರೂಪ್ ಎ ಶ್ರೇಣಿಯ 232 ಅಧಿಕಾರಿಗಳ ವಜಾ!

ಒಂದೇ ಒಂದು ದಾಳಿ ನಡೆದರೂ ಯುರೇನಿಯಂ ದಾಸ್ತಾನು ಶಸ್ತ್ರಾಸ್ತ್ರ ದರ್ಜೆಗೆ ಸಂವರ್ಧನೆ- ಅಮೆರಿಕಾಗೆ ಇರಾನ್ ಕಠಿಣ ಎಚ್ಚರಿಕೆ!

SCROLL FOR NEXT