ಪಿಯೂಷ್ ಸಹದೇವ್ 
ದೇಶ

ಮುಂಬೈ: ಅತ್ಯಾಚಾರ ಪ್ರಕರಣ, ಖ್ಯಾತ ಟಿವಿ ನಟ ಪಿಯೂಷ್ ಸಹದೇವ್‌ ಬಂಧನ

ಅತ್ಯಾಚಾರ ಆರೋಪದಡಿಯಲ್ಲಿ ಖ್ಯಾತ ಹಿಂದಿ ಟಿವಿ ನಟ ಪಿಯೂಷ್ ಸಹದೇವ್‌ ಬಂಧನವಾಗಿದೆ.

ಮುಂಬೈ: ಅತ್ಯಾಚಾರ ಆರೋಪದಡಿಯಲ್ಲಿ ಖ್ಯಾತ ಹಿಂದಿ ಟಿವಿ ನಟ ಪಿಯೂಷ್ ಸಹದೇವ್‌ ಬಂಧನವಾಗಿದೆ. ಯುವತಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಇವರನ್ನು ಬಂಧಿಸಲಾಗಿದ್ದು ಇದೀಗ ಪೋಲೀಸರ ವಶದಲ್ಲಿದ್ದಾರೆಂದು ಹಿರಿಯ ಪೊಲೀಸ್ ಇನ್ಸ್‌ ಪೆಕ್ಟರ್ ಕಿರಣ್ ಕಲೇ ತಿಳಿಸಿದ್ದಾರೆ.
ಮುಂಬೈ ವರ್ಸೋವಾ ಪೊಲೀಸರು ಹೇಳಿದಂತೆ ನ.20 ರಂದು ಪಿಯೂಷ್ ವಿರುದ್ಧ ಯುವತಿಯೊಬ್ಬರು ದೂರು ನೀಡಿದ್ದರು.
ಕೆಲ ತಿಂಗಳ ಹಿಂದಷ್ಟೇ ಪಿಯೂಷ್ ತನಗೆ ಕಾರ್ಯಕ್ರಮವೊಂದರಲ್ಲಿ ಪರಿಚಯವಾಗಿದ್ದರು. ಫ್ಯಾಷನ್ ಕ್ಷೇತ್ರದಲ್ಲಿ, ಟಿವಿ ಉದ್ಯಮದಲ್ಲಿ ಅವಕಾಶ ಕೊಡಿಸುತ್ತೇನೆಂದು ತನನ್ನು ನಂಬಿಸಿದ್ದರು ಎಂದಿರುವ ಯುವತಿ ದಿನದಿನಕ್ಕೆ ನಮ್ಮಿಬ್ಬರ ನಡುವೆ ಪರಿಚಯ ಹೆಚ್ಚಾಗಿ ಈ ಎರಡು ತಿಂಗಳಿನಿಂದ ಒತ್ಟಾಗಿದ್ದೆವು. ಆದರೆ ಅವರಿಗೆ ಬೇರೆಯವರೊಡನೆ ಸಂಬಂಧವಿತ್ತು. ಇದನ್ನು ನಾನು ಅವರಲ್ಲಿ ಪ್ರಶ್ನಿಸಿದಾಗ ಅವ್ರು ನನ್ನಿಂದ ದೂರ ಸರಿದರು ಎಂದು ಸಂತ್ರಸ್ತೆ ದೂರಿನಲ್ಲಿ ಹೇಳಿಕೊಂಡಿದ್ದಾರೆ.
ದೂರಿನ ಹಿನ್ನೆಲೆಯಲ್ಲಿ ನ.22 ರಂದು ನಟನನ್ನು ಬಂಧಿಸಿದ ಪೋಲೀಸರು ನ.27ರ ತನಕ ವಿಚಾರಣೆಗಾಗಿ ತಮ್ಮ ಕಸ್ಟಡಿಗೆ ಪಡೆದಿದ್ದಾರೆ.
ಹಿಂದಿ ಧಾರಾವಾಹಿಗಳಾದ ದೇವೋಂಕಿ ದೇವ ಮಹದೇವ್, ಸಪ್ನೆ ಸುಹಾನೆ ಲಡಕ್‌ಪಾನ್ ಕೆ, ಗೀತ್ ಹಾಗು ಹರ್ ಘರ್ ಕುಚ್ ಕೆಹ್ತಾ ಹೈಮೊದಲಾದ ಧಾರಾವಾಹಿಗಳಲ್ಲಿ ನಟಿಸಿರುವ ಪಿಯೂಷ್ ತಮ್ಮ ಪಾತ್ರಗಳಿಂದ ಮನೆ ಮನೆಯ ಜನರ ಮನ ಗೆದ್ದಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪುತ್ರಿಯರ ಅಕ್ರಮ ನೇಮಕಕ್ಕೆ ನೆರವು: 'KPSC' ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ ಅಮಾನತುಗೊಳಿಸಿ ರಾಜ್ಯಪಾಲರ ಆದೇಶ

US-Iran ಸಂಘರ್ಷ ತೀವ್ರ: Hormuz ಜಲಸಂಧಿ ಬಳಿ ಅಮೆರಿಕ ಭೀಕರ ವೈಮಾನಿಕ ದಾಳಿ, ಜಾಗತಿಕ ಮಾರುಕಟ್ಟೆಗಳಲ್ಲಿ ಹೆಚ್ಚಿದ ಆತಂಕ..!

ಬದಲಾದ ಸಂಸತ್ ಬಲಾಬಲದ ನಡುವೆ ಮುಂಗಾರು ಅಧಿವೇಶನ; ಜು.19 ರಂದು ಸರ್ವಪಕ್ಷಗಳ ಸಭೆ; ಜಿದ್ದಾಜಿದ್ದಿನ ರಾಜಕೀಯಕ್ಕೆ ವೇದಿಕೆ ಸಜ್ಜು..!

ನ್ಯಾಷನಲ್ ಕಾನ್ಫರೆನ್ಸ್ ಶಾಸಕರ ಖರೀದಿ ಆರೋಪ: CM ಒಮರ್ ಅಬ್ದುಲ್ಲಾಗೆ ಬಿಗ್ ಶಾಕ್, 100 ಕೋಟಿ ರೂ. ಮಾನನಷ್ಟ ನೋಟಿಸ್!

'Jurassic Park' ಖ್ಯಾತಿಯ ಹಿರಿಯ ನಟ ಸ್ಯಾಮ್ ನೀಲ್ ಹಠಾತ್ ನಿಧನ!