ನವದೆಹಲಿ: ಪ್ರಜಾಪ್ರಭುತ್ವದಲ್ಲಿ ಹಿಂಸಾತ್ಮಕ ಬೆದರಿಕೆಗಳನ್ನು ನೀಡುವುದು, ದೈಹಿಕ ಹಿಂಸೆ ನೀಡಿದರೆ ಅದಕ್ಕೆ ಬಹುಮಾನ ಘೋಷಿಸುವುದು ಸರಿಯಲ್ಲ ಎಂದು ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಹೇಳಿದ್ದಾರೆ.
ಪದ್ಮಾವತಿ ಚಿತ್ರಕ್ಕೆ ಸಂಬಂಧಪಟ್ಟಂತೆ ದೇಶಾದ್ಯಂತ ನಡೆಯುವ ವಿವಾದ ನಡೆಯುತ್ತಿದ್ದು ಅದನ್ನು ನೇರವಾಗಿ ಪ್ರಸ್ತಾಪಿಸದ ಅವರು, ಚಲನಚಿತ್ರ ಅಥವಾ ಕಲೆ ಹೆಸರಿನಲ್ಲಿ ದೇಶದ ಕಾನೂನನ್ನು ಕಡೆಗಣಿಸುವುದರ ವಿರುದ್ಧ ಅವರು ಎಚ್ಚರಿಕೆ ನೀಡಿದರು.
ದೆಹಲಿಯಲ್ಲಿ ಸಾಹಿತ್ಯ ಉತ್ಸವದಲ್ಲಿ ಮಾತನಾಡಿದ ಉಪ ರಾಷ್ಟ್ರಪತಿ ನಾಯ್ಡು, ಚಿತ್ರವೊಂದು ಜನರ ಭಾವನೆಗಳಿಗೆ, ಕೆಲವು ಧರ್ಮಗಳಿಗೆ ಮತ್ತು ಸಮುದಾಯಗಳಿಗೆ ಧಕ್ಕೆಯನ್ನುಂಟುಮಾಡಿದೆ ಎಂದು ಜನರು ಆಪಾದಿಸುತ್ತಿದ್ದು ಇದರಿಂದ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನೆ ಮಾಡುತ್ತಾ ಜನರು ಅದಕ್ಕಿಂತ ಮುಂದೆ ಹೋಗಿ ಬಹುಮಾನ, ಹಣಗಳನ್ನು ಘೋಷಿಸುತ್ತಾರೆ. ಇಂತವರಲ್ಲಿ ಬೇಕಾದಷ್ಟು ಹಣವಿದೆಯೋ, ಇಲ್ಲವೋ ನನಗೆ ಸಂಶಯವಿದೆ. ಪ್ರತಿಯೊಬ್ಬರು ಒಂದು ಕೋಟಿ ಹಣ ನೀಡುವುದಾಗಿ ಘೋಷಣೆ ಮಾಡುತ್ತಾರೆ. ಹಾಗಾದರೆ ಆ ಒಂದು ಕೋಟಿ ಹಣ ನೀಡುವುದೆಂದರೆ ಅಷ್ಟು ಸುಲಭವೇ, ಇಂತಹ ವರ್ತನೆ ಪ್ರಜಾಪ್ರಭುತ್ವದಲ್ಲಿ ಸ್ವೀಕಾರಾರ್ಹವಲ್ಲ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರತಿಭಟನೆಗೆ ಅವಕಾಶವಿದೆ, ಹಾಗೆಂದು ಶಾರೀರಿಕವಾಗಿ ಹಿಂಸೆ ನೀಡುವುದು, ಬೆದರಿಕೆಯೊಡ್ಡುವುದು, ಕಾನೂನನ್ನು ನಮ್ಮ ಇಷ್ಟದಂತೆ ಕೈಗೆತ್ತಿಕೊಂಡು ಕಾನೂನನ್ನು ಕಡೆಗಣಿಸುವುದು ಬೇಡ ಎಂದು ಸಲಹೆ ನೀಡಿದರು.
ತಾವು ಒಂದು ಚಿತ್ರವನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾತನಾಡುತ್ತಿಲ್ಲ ಎಂದ ಅವರು ಈ ಹಿಂದೆ ಹರಮ್ ಹವಾ, ಕಿಸ್ಸಾ ಕುರ್ಸಿ ಮತ್ತು ಆನಂದಿ ಚಿತ್ರಗಳನ್ನು ನಿಷೇಧಿಸಿರುವುದನ್ನು ಪ್ರಸ್ತಾಪಿಸಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos