ಮದ್ರಾಸ್ ಮೇಲೆ ಬಾಂಬ್ ಹಾಕಿ 3 ದಿನಗಳಾಗಿತ್ತು, ಆದರೆ ಯಾರಿಗೂ ಗೊತ್ತೇ ಇರಲಿಲ್ಲ! 
ದೇಶ

ಮದ್ರಾಸ್ ಮೇಲೆ ಬಾಂಬ್ ಹಾಕಿ 3 ದಿನಗಳಾಗಿತ್ತು, ಆದರೆ ಯಾರಿಗೂ ಗೊತ್ತೇ ಇರಲಿಲ್ಲ!

ಮದ್ರಾಸ್ ಮೇಲೆ ಬಾಂಬ್ ದಾಳಿಯಾಗಿ 3 ಮೂರು ದಿನಗಳ ವರೆಗೆ ಅದು ಯಾರಿಗೂ ಗೊತ್ತೇ ಆಗಿರಲಿಲ್ಲ! ಹೌದು ಈ ಘಟನೆ ನಡೆದಿದ್ದು 2 ನೇ ವಿಶ್ವಯುದ್ಧದ ವೇಳೆಯಲ್ಲಿ.

ಚೆನ್ನೈ: ಮದ್ರಾಸ್ ಮೇಲೆ ಬಾಂಬ್ ದಾಳಿಯಾಗಿ 3 ಮೂರು ದಿನಗಳ ವರೆಗೆ ಅದು ಯಾರಿಗೂ ಗೊತ್ತೇ ಆಗಿರಲಿಲ್ಲ! ಹೌದು ಈ ಘಟನೆ ನಡೆದಿದ್ದು 2 ನೇ ವಿಶ್ವಯುದ್ಧದ ವೇಳೆಯಲ್ಲಿ. 
2 ನೆ ವಿಶ್ವಯುದ್ಧದ ವೇಳೆಯಲ್ಲಿ ಮದ್ರಾಸ್ ಮೇಲೆ ಜಪಾನ್ ಬಾಂಬ್ ದಾಳಿ ಮಾಡಲು ಯೋಜನೆ ರೂಪಿಸಿತ್ತು. ಅದಕ್ಕೆ ಪ್ರತಿಯಾಗಿ ಮದ್ರಾಸ್ ಸಹ ಬಾಂಬ್ ದಾಳಿಯನ್ನು ಸಮರ್ಥವಾಗಿ ಎದುರಿಸಲು ಸಿದ್ಧತೆ ನಡೆಸಿತ್ತು. ವಾಯುದಾಳಿಯನ್ನು ಎದುರಿಸಬಲ್ಲ ಶೆಲ್ಟರ್ ಗಳನ್ನು ನಿರ್ಮಾಣ ಮಾಡಿ, ಸೈರನ್ ಗಳನ್ನು ಅಳವಡಿಸಿ, ಸ್ಲಿಟ್ ಟ್ರೆಂಚಸ್ ಅಗೆದು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಅಷ್ಟೇ ಅಲ್ಲದೇ ಹೇಗೆ ಸುರಕ್ಷಿತವಾಗಿರಬೇಕೆಂಬುದನ್ನು ಜನರಿಗೆ ಕರಪತ್ರಗಳ ಮೂಲಕ ಸೂಚನೆ ನೀಡಲಾಗಿತ್ತು. ಅಂತಿಮವಾಗಿ 1943 ರ ಅ.11 ರಂದು ಜಪಾನ್ ನ ಯುದ್ಧ ವಿಮಾನ ಬಾಂಬ್ ದಾಳಿ ನಡೆದಾಗ ಮೂರು ದಿನಗಳ ವರೆಗೆ ಅದು ಯಾರಿಗೂ ಗೊತ್ತೇ ಆಗಿರಲಿಲ್ಲ. 
ಅದೇ ವೇಳೆ ಬೃಹತ್ ಪ್ರವಾಹಕ್ಕೆ ಸಿಲುಕಿ ತತ್ತರಿಸಿದ್ದ ಮದ್ರಾಸ್ ನಲ್ಲಿ ವಿದ್ಯುತ್ ಸಹ ಕೈಕೊಟ್ಟಿತ್ತು. ರೆಡಿಯೋಗಳು ಕಾರ್ಯನಿರ್ವಹಿಸುತ್ತಿರಲಿಲ್ಲ. ಪತ್ರಿಕೆಗಳು ಇರಲಿಲ್ಲ. ವಿದ್ಯುತ್ ಸಹ ಇರಲಿಲ್ಲ. ಹಾಗಾಗಿ ಬಾಂಬ್ ದಾಳಿಯ ಬಗ್ಗೆ ಜನರಿಗೆ ತಕ್ಷಣವೇ ಮಾಹಿತಿಯೂ ಸಿಗಲಿಲ್ಲ ಎಂದು ಬರಹಗಾರ, ಇತಿಹಾಸಕಾರ ವೆಂಕಟೇಶ್ ರಾಮಕೃಷ್ಣನ್ ಅವರು ಹೇಳಿರುವುದನ್ನು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. 
ಸಿಪಿಆರ್ ಎಫ್ ನಲ್ಲಿ ನ.25 ರಂದು ಆಯೋಜಿಸಲಾಗಿದ್ದ ಎರಡನೇ ವಿಶ್ವಯುದ್ಧ ಹಾಗೂ ಮದ್ರಾಸ್ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ರಾಮಕೃಷ್ಣನ್, ಬಾಂಬಿಂಗ್ ನ್ನು ಎದುರಿಸಲು ಮದ್ರಾಸ್ 5 ವರ್ಷಗಳಿಂದಲೂ ಎಚ್ಚರವಾಗಿತ್ತು. ಅಂತಿಮವಾಗಿ ಘಟನೆ ನಡೆದಾಗ ವಾಯುದಾಳಿ ಸೈರನ್ ಮೌನವಾಗಿತ್ತು. ಜಪಾನ್ ಹಾಕಿದ ಬಾಂಬ್ ಗಳು ಸೇಂಟ್ ಜಾರ್ಜ್ ಪ್ರದೇಶದ ಉತ್ತರ ಭಾಗದಲ್ಲಿ ಬಿದ್ದವು, ಇಷ್ಟೆಲ್ಲಾ ಆದರೂ ರೆಡಿಯೋಗಳು ಮೌನವಾಗಿರುವುದನ್ನು, ನಗರದಲ್ಲಿ ಬೆಳಕೇ ಇಲ್ಲದಿರುವುದನ್ನು ಗಮನಿಸಿ ಜಪಾನ್ ಅಚ್ಚರಿಗೊಂಡಿತ್ತು. ಬಾಂಬಿಂಗ್ ನಲ್ಲಿ ಹಲವಾರು ಜನರು ಮೃತಪಟ್ಟಿದ್ದಾರೆ ಎಂಬ ವದಂತಿಗಳು ಹಬ್ಬಿದವು. ಆದರೆ ಘಟನೆಯಲ್ಲಿ ಇಬ್ಬರು ಮಾತ್ರ ಮೃತಪಟ್ಟಿದ್ದರು ಎಂದು ಸರ್ಕಾರವೇ ಸ್ಪಷ್ಟಪಡಿಸಿತು. ಇದಕ್ಕೂ ಮುನ್ನ ವದಂತಿ ಹಬ್ಬಿದ ಹಿನ್ನೆಲೆಯಲ್ಲಿ ಗಾಬರಿಯಾಗಿದ್ದ ಜನರು ಸಾಮೂಹಿಕ ವಲಸೆ ಹೋಗಲು ಪ್ರಾರಂಭಿಸಿದರು. ಸರ್ಕಾರ ಬ್ಯಾಂಕ್ ಹಾಗೂ ಸಂಸ್ಥೆಗಳಿಗೆ ಬೇರೆಡೆಗೆ ಸ್ಥಳಾಂತರಗೊಳ್ಳಲು ಹೇಳಿದಾಗ ಜನರೂ ವಲಸೆ ಹೋದರು, ಕೇವಲ ಒಂದು ವಾರದಲ್ಲಿ ಲಕ್ಷಾಂತರ ಜನರು ಮದ್ರಾಸ್ ತೊರೆದು ಕುಂಭಕೋಣಂ ನಂತಹ ಸಣ್ಣ ಪಟ್ಟಣಗಳಿಗೆ ತೆರಳಿದರು ಎಂದು ರಾಮಕೃಷ್ಣನ್ ಇತಿಹಾಸದ ಘಟನೆಗಳನ್ನು ಸ್ಮರಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT