ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ದೇಶಭ್ರಷ್ಟ ವಿಜಯ್ ಮಲ್ಯಗೆ ಮುಂಬೈಯ ಆರ್ಥರ್ ರಸ್ತೆ ಜೈಲು ವಾಸ: ಇಂಗ್ಲೆಂಡ್ ಗೆ ಭಾರತ ಹೇಳಿಕೆ

ಬ್ಯಾಂಕಿಗೆ 9,000 ಕೋಟಿ ರೂಪಾಯಿ ಸಾಲ ಮರುಪಾವತಿ ಮಾಡುವಲ್ಲಿ ವಿಫಲರಾದ ....

ವಿಜಯ್ ಮಲ್ಯ
Sumana Upadhyaya
Updated On : 26 Nov 2017, 2:19 am
ನವದೆಹಲಿ: ಬ್ಯಾಂಕಿಗೆ 9,000 ಕೋಟಿ ರೂಪಾಯಿ ಸಾಲ ಮರುಪಾವತಿ ಮಾಡುವಲ್ಲಿ ವಿಫಲರಾದ ಮದ್ಯ ದೊರೆ ವಿಜಯ್ ಮಲ್ಯ ಅವರನ್ನು ಇಂಗ್ಲೆಂಡ್ ನಿಂದ ಗಡಿಪಾರು ಮಾಡಿದರೆ ಮುಂಬೈಯ ಆರ್ಥರ್ ರಸ್ತೆಯಲ್ಲಿರುವ ಜೈಲು ಅವರ ಮನೆಯಾಗಲಿದೆ.
ಇದನ್ನು ಭಾರತ ಸರ್ಕಾರ ಮುಂದಿನ ವಾರ ಬ್ರಿಟಿಷ್ ಕೋರ್ಟ್ ಗೆ ಕ್ರೌನ್ ಪ್ರಾಸಿಕ್ಯೂಷನ್ ಸೇವೆ ಮೂಲಕ ಮನದಟ್ಟು ಮಾಡಲಿದೆ. ಕ್ರೌನ್ ಪ್ರಾಸಿಕ್ಯೂಷನ್ ಭಾರತ ಸರ್ಕಾರದ ಪರವಾಗಿ ಮಲ್ಯ ವಿರುದ್ಧ ಗಡಿಪಾರು ಕೇಸಿನ ವಿಚಾರಣೆ ನಡೆಸುತ್ತಿದೆ. 
ಮಲ್ಯ ಅವರ ಬಂಧನಕ್ಕೆ ಯಾವ ರೀತಿ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂಬ ಬಗ್ಗೆ ಹೇಳಿಕೆ ನೀಡಿರುವ ಗೃಹ ಸಚಿವಾಲಯ, ಬೇರೆ ದೇಶಗಳಲ್ಲಿರುವಂತೆ ಭಾರತದಲ್ಲಿ ಕೂಡ ಜೈಲುಗಳಲ್ಲಿ ಬಂಧಿಯಾಗಿರುವ ವ್ಯಕ್ತಿಯ ಹಕ್ಕುಗಳನ್ನು ರಕ್ಷಿಸಿ ಅವರನ್ನು ಕಾಪಾಡಲಾಗುತ್ತದೆ ಎಂದು ಹೇಳಿದೆ. ಮಲ್ಯ ಅವರನ್ನು ಭಾರತಕ್ಕೆ ಗಡಿಪಾರು ಮಾಡಿದರೆ ಅವರ ಜೀವಕ್ಕೆ ಅಪಾಯವಿದೆ ಮತ್ತು ಭಾರತದ ಜೈಲುಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಮಲ್ಯ ಪರ ವಕೀಲರು ಹೇಳಿರುವ ಹಿನ್ನೆಲೆಯಲ್ಲಿ, ಇದು ಕೇಸನ್ನು ತಪ್ಪು ದಾರಿಗೆಳೆಯುವ ಪ್ರಯತ್ನವಷ್ಟೆ ಎಂದು ಭಾರತ ಸರ್ಕಾರ ಲಂಡನ್ ನ ವೆಸ್ಟ್ ಮಿನ್ಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಹೇಳಿದೆ.

Advertisement

Advertisement

ವಿಜಯ್ ಮಲ್ಯ ಗಡಿಪಾರಿನ ಕುರಿತ ವಿಚಾರಣೆಯನ್ನು ವೆಸ್ಟ್ ಮಿನ್ಸ್ಟ್ರರ್ ಮ್ಯಾಜಿಸ್ಟ್ರೇಟ್ ಕೋರ್ಟ್ ಡಿಸೆಂಬರ್ 4ರಿಂದ ಆರಂಭಿಸಲಿದೆ.
ಮುಂಬೈಯ ಅರ್ಥರ್ ರಸ್ತೆಯ ಜೈಲಿನಲ್ಲಿ ಮಲ್ಯ ಅವರನ್ನು ಬಂಧಿಸಿದರೆ ಯಾವುದೇ ಬೆದರಿಕೆಯಿರುವುದಿಲ್ಲ. ಅಂತಾರಾಷ್ಟ್ರೀಯ ಮಟ್ಟದಂತೆ ಭಾರತದ ಜೈಲುಗಳಲ್ಲಿ ಅತ್ಯಂತ ತೀವ್ರ ಭದ್ರತೆಯಿದೆ ಎಂದು ಭಾರತ ಹೇಳಿದೆ.
ಇಂತಹ ಆರೋಪ ಮಾಡುವ ಮೂಲಕ ಮಲ್ಯ ಅವರು ಭಾರತಕ್ಕೆ ಗಡಿಪಾರು ಆಗುವುದನ್ನು ತಪ್ಪಿಸಿ ವಿಚಾರಣೆಯಿಂದ ವಿಮುಖವಾಗುವ ಮೂಲಕ ಬ್ಯಾಂಕುಗಳ ಒಕ್ಕೂಟಕ್ಕೆ ಮೋಸ ಮಾಡಲು ಹೊರಟಿದ್ದಾರೆ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement