ವಿಶ್ವ ಸುಂದರಿ ಮಾನುಷಿ ಛಿಲ್ಲರ್‌ 
ದೇಶ

ಸದ್ಯಕ್ಕೆ ಬಾಲಿವುಡ್ ನಲ್ಲಿ ನಟಿಸುವ ಇಚ್ಚೆ ಇಲ್ಲ: ವಿಶ್ವ ಸುಂದರಿ ಮಾನುಷಿ ಛಿಲ್ಲರ್‌

"ಭಾರತ್ದಲ್ಲಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ನೈರ್ಮಲ್ಯದ ಕುರಿತಂತೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ನಾನು ಭಾಗವಹಿಸುತ್ತೇನೆ..........

ಮುಂಬೈ: "ಭಾರತ್ದಲ್ಲಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ನೈರ್ಮಲ್ಯದ ಕುರಿತಂತೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ನಾನು ಭಾಗವಹಿಸುತ್ತೇನೆ. ಬಾಲಿವುಡ್ ಚಿತ್ರಗಳಲ್ಲಿ ನಟಿಸುವ ಬಯಕೆ ಸದ್ಯಕ್ಕೆ ನನ್ನಲ್ಲಿಲ್ಲ." ವಿಶ್ವ ಸುಂದರಿ ಮಾನುಷಿ ಛಿಲ್ಲರ್‌ ಇಂದು ಮುಂಬೈ ನಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಹೇಳಿದ್ದಾರೆ. ಈಕೆ 'ಬ್ಯೂಟಿ ವಿತ್ ಪರ್ಪಸ್' ಸ್ಪರ್ಧೆಯ ಸಹ ವಿಜೇತೆಯಾಗಿದ್ದು ಅಲ್ಲಿ ಅವರು ತಮ್ಮ ಯೋಜನೆಯಾದ 'ಶಕ್ತಿ' ಯನ್ನು ಮಂಡಿಸಿದ್ದಾರೆ. ಇದು ಗ್ರಾಮೀಣ ಭಾರತದ ಮಹಿಳೆಯರಿಗೆ ಸ್ಯಾನಿಟರಿ ನಾಪ್ ಕಿನ್  ಪೂರೈಕೆಗೆ ಸಂಬಂಧಿಸಿದೆ.
"ನಾನು ಈ ಯೋಜನೆಯನ್ನು ಪ್ರಾರಂಭಿಸಿದಾಗ, ಋತುಚಕ್ರದ ಸಮಯದಲ್ಲಿನ ಶುಚಿತ್ವದ ಬಗ್ಗೆ ಮತ್ತು ಸ್ಯಾನಿಟರಿ ನ್ಯಾಪ್ ಕಿನ್ ಉಪಯೋಗದ ಬಗ್ಗೆ ಬಹುತೇಕ ಜನರಿಗೆ ತಿಳಿದಿಲ್ಲ ಎನ್ನುವುದನ್ನು ಅರಿತುಕೊಂಡೆ. ನಾವು ಅದರ ಬಗೆಗೆ ಜನರಿಗೆ ತಿಳುವಳಿಕೆ ನಿಡಬೇಕು ಎನ್ನುವುದನ್ನು ಅರಿತೆನು. ಈ ವಿಶ್ವ ಸುಂದರಿ ಪಟ್ಟವು ಕೇವಲ ಬಾಹ್ಯ ಸೌಂದರ್ಯಕ್ಕಾಗಿ ಮಾತ್ರವೇ ಇಲ್ಲ. ನೀವು ಇದನ್ನು ಯಾವುದೇ ಒಳ್ಳೆಯ ಉದ್ದೇಶಕ್ಕೆ ಹೇಗೆ ಬಳಸಿಕೊಳ್ಳಬಲ್ಲಿರಿ ಎನ್ನುವುದು ಮುಖ್ಯ.
""ಮುಟ್ಟಿನ ಸಮಯದಲ್ಲಿ  ಶುಚಿತ್ವ ಕಾಪಾಡಿಕೊಳ್ಳುವುದು ಹೇಗೆ ಎನ್ನುವ ಬಗೆಗೆ ಜಾಗೃತಿಯನ್ನು ಮೂಡಿಸುವುದರಲ್ಲಿ ನನ್ನ ಪಾತ್ರ ಮಹತ್ವವಾಗಿರುವುದಕ್ಕೆ ನನಗೆ ಸಂತಸವಿದೆ. ಇದಕ್ಕಾಗಿ ನಾನು ಇತರೆ ವಿಶ್ವ ಸುಂದರಿ ಪ್ರಶಸ್ತಿ ವಿಜೇತರೊಡನೆ ಸೇರಿಕೊಳ್ಳುತ್ತೇನೆ. ಈ ಕೆಲಸದಲ್ಲಿ ತೊಡಗಿಕೊಳ್ಳಲು ನಾನು ಉತ್ಸುಕಳಾಗಿದ್ದೇನೆ." ಮಾನುಷಿ ಛಿಲ್ಲರ್‌ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ: ಷರತ್ತು ಒಪ್ಪದ ಹೊರತು ಹಾರ್ಮುಜ್ ಜಲಸಂಧಿ ತರೆಯಲ್ಲ ಎಂದ ಇರಾನ್; ದಿಗ್ಬಂಧನ ಮತ್ತಷ್ಟು ಬಿಗಿಗೊಳಿಸಿದ ಅಮೆರಿಕ..!

ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ: ‘ದೊಡ್ಡ ಘಟನೆ ನಡೆಯಲಿದೆ’ ಎಂದ ಟ್ರಂಪ್; ಇರಾನ್ ವಿರುದ್ಧ ಅಮೆರಿಕಾ ನಡೆಸಿರುವ ಗೇಮ್‌ಪ್ಲ್ಯಾನ್ ಏನು..?

ಇಂದಿನಿಂದ ವಿಧಾನಮಂಡಲ ವಿಶೇಷ ಅಧಿವೇಶನ: ಕಸ್ತೂರಿರಂಗನ್ ವರದಿ ತಿರಸ್ಕರಿಸಲು ಒಕ್ಕೊರಲ ತೀರ್ಮಾನ ಸಾಧ್ಯತೆ, ಕೇಂದ್ರಕ್ಕೆ ಶಾಕ್ ಕೊಡಲು ರಾಜ್ಯ ಸರ್ಕಾರ ಸಜ್ಜು..!

ಅಮೆರಿಕಾ ವಿರುದ್ಧ ಯುದ್ಧವಿಲ್ಲ, ಸೌದಿ ವಿರುದ್ಧ ಸಮರ ನಿಲ್ಲಲ್ಲ: ಟ್ರಂಪ್‌ಗೆ ಹೌತಿಗಳ ಖಡಕ್ ಸಂದೇಶ, ಮಧ್ಯಪ್ರಾಚ್ಯದಲ್ಲಿ ಮತ್ತೊಂದು ಯುದ್ಧದ ಆತಂಕ..!

ಕಸ್ತೂರಿರಂಗನ್ ವರದಿ ವಿರುದ್ಧ ರೈತರ ರಣಕಹಳೆ: 10 ಕಿ.ಮೀ. ನಡೆದು ಬಂದ ಸಾವಿರಾರು ಅನ್ನದಾತರು, ಸಿಎಂ ಭೇಟಿಗೆ ಪಟ್ಟು: ಬಿಸಿಲಲ್ಲೇ ಕುಳಿತು ಧರಣಿ..!