ದೇಶ

ಆಪ್ ಗೆ ಐಟಿ ನೋಟಿಸ್; ಸೇಡಿನ ರಾಜಕೀಯದ ಪರಮಾವಧಿ: ಕೇಜ್ರಿವಾಲ್

Lingaraj Badiger
ನವದೆಹಲಿ: ಆದಾಯ ತೆರಿಗೆ ಇಲಾಖೆ ದೆಹಲಿ ಆಡಳಿತರೂಢ ಆಮ್ ಆದ್ಮಿ ಪಕ್ಷ(ಎಎಪಿ)ಕ್ಕೆ 30.67 ಕೋಟಿ ರುಪಾಯಿ ತೆರಿಗೆ ಕಟ್ಟುವಂತೆ ನೋಟಿಸ್ ಜಾರಿ ಮಾಡಿದ್ದು, ಇದು ಸೇಡಿನ ರಾಜಕೀಯದ ಪರಮಾವಧಿ ಎಂದು ದೆಹಲಿ ಮುಖ್ಯಮಂತ್ರಿ ಹಾಗೂ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಹೇಳಿದ್ದಾರೆ. 
ಭಾರತದ ಇತಿಹಾಸದಲ್ಲೇ, ರಾಜಕೀಯ ಪಕ್ಷಕ್ಕೆ ನೀಡುವ ಎಲ್ಲಾ ರೀತಿಯ ದೇಣಿಗೆ ಕಾನೂನು ಬಾಹಿರ ಎಂದು ಘೋಷಿಸಲಾಗಿದೆ. ಇದೇಲ್ಲವನ್ನೂ ಖಾತೆ ಪುಸ್ತಕಗಳಲ್ಲಿ ತೋರಿಸಲಾಗಿದೆ. ಆದರೂ ನೋಟಿಸ್ ನೀಡಿರುವುದು ಸೇಡಿನ ರಾಜಕೀಯದ ಪರಮಾವಧಿ ಎಂದು ದೆಹಲಿ ಸಿಎಂ ಟ್ವೀಟ್ ಮಾಡಿದ್ದಾರೆ.
ಸೆಕ್ಷೆನ್ 156ರಡಿ ಆಮ್ ಆದ್ಮಿ ಪಕ್ಷದ ಎಲ್ಲಾ ತೆರಿಗೆ ದಾಖಲೆಗಳನ್ನು ಪರಿಸಿಲಿದ ಬಳಿಕ 30.67 ಕೋಟಿ ರುಪಾಯಿ ತೆರಿಗೆ ನೋಟಿಸ್ ನೀಡಲಾಗಿದೆ ಎಂದು ಹೆಸರು ಹೇಳಲ್ಲಿಚ್ಚಿಸದ ಐಟಿ ಅಧಿಕಾರಿಯೊಬ್ಬರು ಹೇಳಿರುವುದಾಗಿ ಐಎಎನ್ಎಸ್ ವರದಿ ಮಾಡಿದೆ.
ಆಮ್ ಆದ್ಮಿ ಪಕ್ಷ 13.16 ಕೋಟಿ ರುಪಾಯಿ ಆದಾಯವನ್ನು ಘೋಷಿಸಿಕೊಂಡಿರಲಿಲ್ಲ ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ.
SCROLL FOR NEXT