ದೇಶ

ಶಾಲಾ ಹಾಜರಾತಿ ವೇಳೆ 'ಜೈ ಹಿಂದ್' ಎಂದು ಉತ್ತರಿಸಿ: ವಿದ್ಯಾರ್ಥಿಗಳಿಗೆ ಮ.ಪ್ರದೇಶ ಸಚಿವರ ಸೂಚನೆ

Manjula VN
ಭೋಪಾಲ್: ಭಾರತದಲ್ಲಿರುವ ಜನರು ಮಮ್ಮಿ-ಡ್ಯಾಡಿಗೆ ಬದಲಾಗಿ ಮಾತಾ-ಪಿತಾ ಶಬ್ದವನ್ನು ಬಳಸಬೇಕೆಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಸಲಹೆ ನೀಡಿದ ಬೆನ್ನಲ್ಲೇ ಶಾಲಾ ಹಾಜರಾತಿ ಹೇಳುವಾಗ ವಿದ್ಯಾರ್ಥಿಗಳು ಜೈ ಹಿಂದ್ ಎಂದು ಉತ್ತರಿಸಬೇಕೆಂದು ಮಧ್ಯಪ್ರದೇಶ ಶಿಕ್ಷಣ ಸಚಿವ ಸೂಚನೆ ನೀಡಿದ್ದಾರೆ. 
ಎನ್'ಸಿಸಿ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿರುವ ಮಧ್ಯಪ್ರದೇಶ ಶಾಲಾ ಶಿಕ್ಷಣ ಸಚಿವ ವಿಜಯ್ ಶಾ ಅವರು, ಶಾಲೆಗಳಲ್ಲಿ ವಿದ್ಯಾರ್ಥಿಗಳು ಹಾಜರಾತಿ ಹೇಳುವಾಗ ಯಸ್ ಸಾರ್, ಪ್ರೆಜೆಂಟ್ ಮೇಡಂ ಬದಲಿಗೆ 'ಜೈಹಿಂದ್' ಎನ್ನಬೇಕು ಎಂದು ಆದೇಶಿಸಿದ್ದಾರೆ.
ಪ್ರಸ್ತುತ ಈ ಆದೇಶವನ್ನು 1.22 ಲಕ್ಷ ಸರ್ಕಾರಿ ಶಾಲೆಗಳಲ್ಲಿ ಜಾರಿಗೊಳಿಸಲಾಗುತ್ತದೆ. ಬಳಿಕ ಎಲ್ಲಾ ಖಾಸಗಿ ಶಾಲೆಗಳೂ ಕೂಡ ಇದನ್ನು ಪಾಲಿಸುವಂತೆ ಸಲಹೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. 
SCROLL FOR NEXT