ಅಹ್ಮದ್ ಪಟೇಲ್ 
ದೇಶ

ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಆಪ್ತನ ಮನೆ ಮೇಲೆ ಇಡಿ ದಾಳಿ

ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಅವರ....

ನವದೆಹಲಿ: ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಅವರ ಆಪ್ತ ಸಂಜೀವ್ ಮಹಾಜನ್ ಮತ್ತು ಇತರೆ ಉದ್ಯಮಿಗಳ ಮನೆ ಹಾಗೂ ಇತರೆ ಆಸ್ತಿಗಳ ಮೇಲೆ ಜಾರಿ ನಿರ್ದೇಶನಾಲಯ(ಇಡಿ)ದ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಸ್ಯಾಂಡೆಸರಾ ಗ್ರೂಪ್ ಆಫ್ ಕಂಪನಿಗಳ ಅಕ್ರಮ ಹಣ ವಹಿವಾಟು ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಮಯೂರ ವಿಹಾರ್ ಮೊದಲ ಹಂತದಲ್ಲಿರುವ ಹಾಗೂ ಬಾಬರ್ ರಸ್ತೆಯಲ್ಲಿರುವ ಮಹಾಜನ್ ಮನೆಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಇಡಿ ವಕ್ತಾರರು ತಿಳಿಸಿದ್ದಾರೆ.
ದ್ವಾರಕಾದಲ್ಲಿರುವ ಉದ್ಯಮಿ ಘನಶ್ಯಾಮ್ ಪಾಂಡೆ ನಿವಾಸ, ಲಕ್ಷ್ಮಿನಗರದಲ್ಲಿರುವ ಲಕ್ಷ್ಮಿಚಂದ್ ಗುಪ್ತಾ ಮತ್ತು ಘಾಜಿಯಾಬಾದ್ ನಲ್ಲಿರುವ ಅರವಿಂದ್ ಗುಪ್ತಾ ಅವರ ನಿವಾಸಗಳ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದು, ಈ ಮೂವರು  ಸ್ಯಾಂಡೆಸರಾ ಗ್ರೂಪ್ ಆಫ್ ಕಂಪನಿಗಳೊಂದಿಗೆ ಸಂಪರ್ಕ ಗೊಂದಿದ್ದರು ಎನ್ನಲಾಗಿದೆ.
ಸ್ಯಾಂಡೆಸರಾ ಗ್ರೂಪ್ ಆಫ್ ಕಂಪನಿಯ 5,383 ಕೋಟಿ ರುಪಾಯಿ ಅಕ್ರಮ ವಹಿವಾಟು ಪ್ರಕರಣದ ತನಿಖೆಯ ಭಾಗವಾಗಿ ಇಂದು ದಾಳಿ ನಡೆಸಲಾಗಿದೆ ಎಂದು ಇಡಿ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಹಲವು ಕುಟುಂಬಗಳ ಹೆಣ್ಮಕ್ಕಳ ಮರ್ಯಾದೆ ಕಳೆದ ಪುಣ್ಯಾತ್ಮ ಡಿಕೆಶಿ; ಪ್ರಜ್ವಲ್​​ ಕೇಸ್​ ಹಿಂದಿದ್ದವರಿಂದ ಮಾಜಿ ಸಿಎಂ ಸ್ಟಿಂಗ್​​ ಆಪರೇಷನ್: HDK ಹೊಸ ಬಾಂಬ್

ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಶನ್: ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪೆನ್ ಡ್ರೈವ್ ಸಲ್ಲಿಕೆ; ನ್ಯಾಯಾಂಗ ತನಿಖೆಗೆ ಆಗ್ರಹ!

ಎಲ್ಲಾ ಪ್ರತಿಭಟನೆಗಳೂ ಒಂದೇ: 'ಚಾಯ್ ಪೆ ಚರ್ಚೆ' ಗೂ ಮುನ್ನ ರಾಹುಲ್ ಹೇಳಿಕೆ!

ಬೆಂಗಳೂರಿನಲ್ಲಿ SIR ಪ್ರತಿಭಟನೆ ವೇಳೆ ಪೊಲೀಸ್ ಕ್ರಮ: ಮರು ಪರಿಶೀಲನೆಗೆ ಪ್ರಿಯಾಂಕ್ ಖರ್ಗೆ ಆದೇಶ!

ಪುಣೆ ಟೆಕ್ಕಿ ಆತ್ಮಹತ್ಯೆ: ಡೆತ್‌ನೋಟ್‌ ಪತ್ತೆ; ಸಂಬಳ, ತವರು ಮನೆಯ ಫ್ಲಾಟ್ ವರ್ಗಾಯಿಸುವಂತೆ ಅತ್ತೆ-ಮಾವ ಒತ್ತಡ!