ದೇಶ

ಜಯಲಲಿತಾ ಸಾವಿನ ಕುರಿತು ಸಿಬಿಐ ತನಿಖೆಗೆ ದಿನಕರನ್ ಆಗ್ರಹ

Lingaraj Badiger
ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಸಾವಿನ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ಎಐಎಡಿಎಂಕೆ ಬಂಡಾಯ ನಾಯಕ ಟಿಟಿವಿ ದಿನಕರನ್ ಅವರು ಸೋಮವಾರ ಒತ್ತಾಯಿಸಿದ್ದಾರೆ.
ತಮಿಳುನಾಡು ಸರ್ಕಾರ ಜಯಲಲಿತಾ ಸಾವಿನ ಕುರಿತು ತನಿಖೆಗೆ ನ್ಯಾಯಮೂರ್ತಿ ಎ ಅರುಮುಗಸ್ವಾಮಿ ನೇತೃತ್ವದ ಆಯೋಗ ರಚಿಸಿದ್ದು, ಆಯೋಗದ ತನಿಖೆಗೆ ನೀವು ಸಹಕರಿಸುತ್ತೀರಾ? ಎಂಬ ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ದಿನಕರನ್, ನಮಗೆ ಸಿಬಿಐ ತನಿಖೆ ಬೇಕು ಎಂದಿದ್ದಾರೆ.
ಸಿಬಿಐ ತನಿಖೆ ನಡೆಸಿದರೆ ಮಾತ್ರ, ಜಯಲಲಿತಾ ಸಾವಿನ ಕುರಿತು ತದ್ವಿರುದ್ಧ ಹೇಳಿಕೆ ನೀಡುತ್ತಿರುವ ಸಚಿವರ ವಿಚಾರಣೆ ನಡೆಸಲು ಸಾಧ್ಯ ಎಂದು ದಿನಕರನ್ ಹೇಳಿದ್ದಾರೆ.
ಇತ್ತೀಚಿಗಷ್ಟೇ ತಮಿಳುನಾಡು ಅರಣ್ಯ ಸಚಿವ ದಿಂಡಿಗಲ್ ಸಿ ಶ್ರೀನಿವಾಸನ್ ಅವರು, ಜಯಲಲಿತಾ ಆಸ್ಪತ್ರೆಯಲ್ಲಿದ್ದಾಗ ನಾವು ಯಾರೂ ಅವರನ್ನು ನೋಡಿಲ್ಲ. ವಿಕೆ ಶಶಿಕಲಾ ಅವರ ಭಯದಿಂದಾಗಿ ಆ ವೇಳೆ ನೋಡಿದ್ದಾಗಿ ನಾವು ಸುಳ್ಳು ಹೇಳಿದ್ದೇವೆ ಎಂದಿದ್ದರು. ಆದರೆ ಮತ್ತೊಬ್ಬ ಸಚಿವ ಸೆಲ್ಲೂರ್ ರಾಜು, ಎಲ್ಲಾ ಸಚಿವರು ಜಯಲಲಿತಾ ಅವರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ್ದರು ಎಂದಿದ್ದಾರೆ.
SCROLL FOR NEXT