ರಾಷ್ಟ್ರಪತಿ ರಾಮ ನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ
ನವದೆಹಲಿ: ಭಾರತದ ದ್ವಿತೀಯ ಪ್ರಧಾನಿ ಲೆಫ್ಟಿನೆಂಟ್ ಲಾಲ ಬಹಾದುರ್ ಶಾಸ್ತ್ರಿ ಅವರ 113ನೇ ಜನ್ಮ ದಿನಾಚರಣೆ ಸಂದರ್ಭದಲ್ಲಿ ರಾಷ್ಟ್ರಪತಿ ರಾಮ ನಾಥ್ ಕೋವಿಂದ್, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನ ಮಂತ್ರಿ ನರೇಂದ್ರ ಮೋದಿ ದೆಹಲಿಯ ವಿಜಯಾಘಾಟ್ ನಲ್ಲಿರುವ ಅವರ ಸಮಾಧಿ ಬಳಿ ತೆರಳಿ ಪುಷ್ಜ ನಮನ ಸಲ್ಲಿಸಿದರು.
ದೇಶದ ರೈತರು ಮತ್ತು ಯೋಧರಿಗೆ ಲಾಲ ಬಹಾದುರ್ ಶಾಸ್ತ್ರಿಯವರು ಸ್ಪೂರ್ತಿಯಾಗಿದ್ದರು ಎಂದು ಪ್ರಧಾನಿ ಇದಕ್ಕೂ ಮುನ್ನ ಟ್ವಿಟ್ಟರ್ ನಲ್ಲಿ ವಿಡಿಯೊವೊಂದನ್ನು ಬಿಡುಗಡೆ ಮಾಡಿದ್ದರು.
ಲಾಲ ಬಹಾದುರ್ ಶಾಸ್ತ್ರಿ 1904, ಅಕ್ಟೋಬರ್ 2ರಂದು ಉತ್ತರ ಪ್ರದೇಶದ ಮುಗಲ್ ಸರಾಯಿ ಜಿಲ್ಲೆಯಲ್ಲಿ ಜನಿಸಿದ್ದರು. ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸತ್ಯಾಗ್ರಹಿಯಾಗಿ ಸಣ್ಣ ವಯಸ್ಸಿನಲ್ಲಿಯೇ ಅವರು ರಾಜಕೀಯಕ್ಕೆ ಸೇರಿದರು.
ಭಾರತದಲ್ಲಿ ಆಹಾರ ಉತ್ಪಾದನೆಯನ್ನು ಹೆಚ್ಚಿಸಲು ಹಸಿರು ಕ್ರಾಂತಿಗೆ ಮತ್ತು ಹಾಲಿನ ಪೂರೈಕೆಯನ್ನು ಹೆಚ್ಚಿಸಲು ಶ್ವೇತ ಕ್ರಾಂತಿಯನ್ನು ಪ್ರಚುರಪಡಿಸಲು ಲಾಲ ಬಹಾದುರ್ ಶಾಸ್ತ್ರಿ ಕೊಡುಗೆ ಸಲ್ಲಿಸಿದ್ದಾರೆ.
1964ರಲ್ಲಿ ಭಾರತದ ಪ್ರಧಾನಿಯಾದ ಲಾಲ ಬಹಾದುರ್ ಶಾಸ್ತ್ರಿ 1965ರ ಭಾರತ-ಪಾಕಿಸ್ತಾನ ಯುದ್ಧವನ್ನು ಮುನ್ನಡೆಸಿದ್ದರು. 1966, ಜನವರಿ 11ರಂದು ತಾಷ್ಕೆಂಟ್ ನಲ್ಲಿ ಕೊನೆಯುಸಿರೆಳೆದರು.