ಭಾರತೀಯ ಮೂಲದ ಯುವತಿ ಗೀತಾ 
ದೇಶ

ಗೀತಾ ಪೋಷಕರಿಗಾಗಿ ಮುಂದುವರೆದ ಹುಡುಕಾಟ; ರೂ.1 ಲಕ್ಷ ಬಹುಮಾನ ಘೋಷಿಸಿದ ಸುಷ್ಮಾ ಸ್ವರಾಜ್

ದಶಕಗಳಿಂದ ಪಾಕಿಸ್ತಾನದಲ್ಲಿದ್ದು 2015ರಲ್ಲಿ ತಾಯ್ನಾಡು ಭಾರತಕ್ಕೆ ಮರಳಿದ್ದ ಮೂಕ ಹಾಗೂ ಕಿವುಡ ಯುವತಿ ಗೀತಾಳ ಪೋಷಕರಿಗಾಗಿ ಭಾರತೀಯ ಅಧಿಕಾರಿಗಳು ನಡೆಸುತ್ತಿರುವ ಹುಡುಕಾಟ ಮುಂದುವರೆದಿದ್ದು, ಗೀತಾ ತನ್ನ ಕುಟುಂಬದೊಂದಿಗೆ ಸೇರಿಸಲು ಸಹಾಯ ಮಾಡಿದವರಿಗೆ...

ನವದೆಹಲಿ: ದಶಕಗಳಿಂದ ಪಾಕಿಸ್ತಾನದಲ್ಲಿದ್ದು 2015ರಲ್ಲಿ ತಾಯ್ನಾಡು ಭಾರತಕ್ಕೆ ಮರಳಿದ್ದ ಮೂಕ ಹಾಗೂ ಕಿವುಡ ಯುವತಿ ಗೀತಾಳ ಪೋಷಕರಿಗಾಗಿ ಭಾರತೀಯ ಅಧಿಕಾರಿಗಳು ನಡೆಸುತ್ತಿರುವ ಹುಡುಕಾಟ ಮುಂದುವರೆದಿದ್ದು, ಗೀತಾ ತನ್ನ ಕುಟುಂಬದೊಂದಿಗೆ ಸೇರಿಸಲು ಸಹಾಯ ಮಾಡಿದವರಿಗೆ ರೂ. 1 ಲಕ್ಷ ಬಹುಮಾನ ನೀಡುವುದಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಸೋಮವಾರ ಘೋಷಿಸಿದ್ದಾರೆ. 

ಗೀತಾ ಪೋಷಕರ ಹುಡುಕಿಕೊಡುವಂತೆ ಸುಷ್ಮಾ ಸ್ವರಾಜ್ ಅವರು ಮನವಿ ಮಾಡಿಕೊಂಡಿದ್ದು, ಹೆಣ್ಣುಮಗಳೊಬ್ಬಳಿಗೆ ಆಕೆಯ ಹೆತ್ತವರನ್ನು ಹುಡುಕಿಕೊಡುವುದಕ್ಕಿಂತ ಉತ್ತಮವಾದ ಕಾರ್ಯ ಮತ್ತೊಂದಿಲ್ಲ. ಗೀತಾಳ ಕುಟುಂಬದ ಬಗ್ಗೆ ಯಾರಿಗಾದರೂ ಮಾಹಿತಿಯಿದ್ದರೆ ದಯವಿಟ್ಟು ತಿಳಿಸಿ ಎಂದು ಹೇಳಿದ್ದಾರೆ. 

ಕಳೆದ 2 ವರ್ಷಗಳಲ್ಲಿ ಗೀತಾ ತಮ್ಮ ಮಗಳೆಂದು ಹೇಳಿಕೊಂಡು ಸಾಕಷ್ಟು ಮಂದಿ ಬಂದಿದ್ದರು. ಆದರೆ, ಅವರಾರು ತನ್ನ ಪೋಷಕರೆಲ್ಲ ಎಂದು ಗೀತಾ ಹೇಳಿದ್ದಾಳೆ. ಇದೀಗ ಆಕೆಗೆ ಸಂಜ್ಞಾ ಭಾಷೆಯನ್ನು ಕಲಿತಿದ್ದಾಳೆ. ಕಂಪ್ಯೂಟರ್ ಹಾಗೂ ಕಸೂತಿ ಕಲೆಯನ್ನು ಕಲಿತುಕೊಂಡಿದ್ದಾಳೆ. ಕೆಲವೊಮ್ಮೆ ಆಕೆ ತನ್ನ ಕುಟುಂಬಸ್ಥರನ್ನು ನೆನೆದು ಅಳುವುದಕ್ಕೆ ಆರಂಭಿಸುತ್ತಾಳೆ. 

ಆಕೆಯ ಪೋಷಕರು ಎಲ್ಲಿಯೇ ಇದ್ದರೂ, ಅಕೆಯನ್ನು ಸ್ವೀಕರಿಸಿ ಮನೆಗೆ ಕರೆದುಕೊಂಡು ಹೋಗುವಂತೆ ಈ ಮೂಲಕ ಮನವಿ ಮಾಡಿಕೊಳ್ಳುತ್ತೇನೆ. ಗೀತಾಳ ವಿದ್ಯಾಭ್ಯಾಸ ಹಾಗೂ ವಿವಾಹಕ್ಕೆ ಅಗತ್ಯವಿರುವ ಎಲ್ಲದನ್ನೂ ಸರ್ಕಾರವೇ ನೋಡಿಕೊಳ್ಳುತ್ತದೆ ಎಂಬುದನ್ನು ಭರವಸೆ ನೀಡುತ್ತೇನೆಂದು ತಿಳಿಸಿದ್ದಾರೆ. 

2015ರ ಅಕ್ಟೋಬರ್ ನಲ್ಲಿ ಪಾಕಿಸ್ತಾನದಿಂದ ಭಾರತಕ್ಕೆ ಮರಳಿರುವ ಗೀತಾ ಪ್ರಸ್ತುತ ಇಂದೋರ್ ನಲ್ಲಿ ಮೂಕ ಹಾಗೂ ಕಿವುಡರಿಗಾಗಿರುವ ಸಂಸ್ಥೆಯಲ್ಲಿದ್ದಾಳೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!