ನವದೆಹಲಿ: ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಇಂದು ನಾಲ್ಕು ದಿನಗಳ ಬೇಟಿಗಾಗಿ, ಜಿಬೌಟಿ ಮತ್ತು ಇಥಿಯೋಪಿಯಾಗೆ ತೆರಳಲಿದ್ದಾರೆ. ರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಇದು ಅವರ ಪ್ರಥಮ ವಿದೇಶ ಪ್ರವಾಸವಾಗಿದೆ.
ಎರಡು ರಾಷ್ಟ್ರಗಳ ಭೇಟಿಯ ವೇಳೆ ರಾಷ್ಟ್ರಪತಿಗಳು ಆರ್ಥಿಕ ಸಹಕಾರ ಒಪ್ಪಂದ ಸೇರಿ ಹಲವು ಮಹತ್ವದ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆ ಇದೆ.ಇಥಿಯೋಪಿಯಾ ಪೂರ್ವ ಮತ್ತು ದಕ್ಷಿಣ ಆಫ್ರಿಕಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ನೀನಾ ಮಲ್ಹೋತ್ರಾ ಅವರೊಡನೆ ವಿದೇಶಾಂಗ ವ್ಯವಹಾರಗಳ ಕುರಿತು ಸಮಾಲೋಚನೆ ನಡೆಸಲಿದ್ದಾರೆ.
ರಾಷ್ಟ್ರಪತಿಗಳ ಮಾದ್ಯಮ ಕಾರ್ಯದರ್ಶಿ ಅಶೋಕ್ ಮಲಿಕ್ ಮಾತನಾಡಿ, "ಜಿಬೌಟಿ ಹಿಂದೂ ಮಹಾಸಾಗರದ ಮೇರೆಯಲ್ಲಿ ಬರುವ ಪ್ರಮುಖ ರಾಷ್ಟ್ರವಾಗಿದೆ. 2016-17ರಲ್ಲಿ ಜಿಬೌಟಿ ಭಾರತದೊಡನೆ 284 ಮಿಲಿಯನ್ ಅಮೆರಿಕನ್ ಡಾಲರ್ ಗಳಷ್ಟು ದ್ವಿಪಕ್ಷೀಯ ವಹಿವಾಟು ನಡೆಸಿದೆ" ಎಂದರು.
"ಆಫ್ರಿಕಾ ಮತ್ತು ಭಾರತೀಯ ಸಾಗರ ಪ್ರದೇಶವು ಭಾರತೀಯ ವಿದೇಶಾಂಗ ನೀತಿಯ ಕೇಂದ್ರವಾಗಿದೆ ಎಂದು ರಾಷ್ಟ್ರಪತಿಗಳು ಗುರುತಿಸುತ್ತಾರೆ, ಆದುದರಿಂದ ಈ ಪ್ರದೇಶವನ್ನು ತನ್ನ ಮೊದಲ ವಿದೇಶಿ ಭೇಟಿಯಾಗಿ ಆಯ್ಕೆ ಮಾಡಲಾಗಿದೆ" ಎಂದು ಮಲಿಕ್ ಹೇಳಿದರು.
ಜಿಬೌಟಿ ಅಡೆನ್ ಕೊಲ್ಲಿಯ ಆಯಕಟ್ಟಿನ ಪ್ರದೇಶದಲ್ಲಿರುವ ರಾಷ್ಟ್ರವಾಗಿದೆ. ಆ ದೇಶವು ಸಿಮೆಂಟ್ ತಯಾರಿಕಾ ಘಟಕ ಸ್ಥಾಪಿಸಲು ಭಾರತವು ಇದಾಗಲೇ ನೀಡುತ್ತಿರುವ ನೆರವನ್ನು 49 ಮಿಲಿಯನ್ ಅಮೆರಿಕನ್ ಡಾಲರ್ ಗೆ ವಿಸ್ತರಿಸಲಿದೆ.
1972 ರಲ್ಲಿ ಅಂದಿನ ರಾಷ್ಟ್ರಪತಿ ವಿ ವಿ ಗಿರಿಇಥಿಯೋಪಿಯಾಗೆ ಭೇಟಿ ನೀಡಿದ್ದರು. ಇದಾದ 45 ವರ್ಷಗಳ ನಂತರ ಭಾರತ ರಾಷ್ಟ್ರಪತಿಯೊಬ್ಬರು ಆಫ್ರಿಕಾ ರಾಷ್ಟ್ರಕ್ಕೆ ಭೇಟಿ ಕೊಡುತ್ತಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos