ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಹೃದಯ ಭಾಗದಲ್ಲಿ ಶಬ್ದ ಮಾಲಿನ್ಯಕ್ಕೆ ಕಾರಣವಾಗಿರುವ ಐತಿಹಾಸಿಕ ಜಂತರ್ ಮಂತರ್ ರಸ್ತೆಯಲ್ಲಿ ನಡೆಯುವ ಎಲ್ಲಾ ಬಗೆಯ ಧರಣಿ, ಪ್ರತಿಭಟನೆಗಳನ್ನು ತತ್ಕ್ಷಣದಿಂದ ನಿಲ್ಲಿಸಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್ ಜಿಟಿ) ಗುರುವಾರ ದೆಹಲಿ ಸರ್ಕಾರಕ್ಕೆ ಆದೇಶಿಸಿದೆ.
ಜಂತರ್ ಮಂತರ್ ರಸ್ತೆಯ ಉದ್ದಕ್ಕೂ ಕಂಡು ಬರುವ ಎಲ್ಲ ತಾತ್ಕಾಲಿಕ ರಚನೆಗಳನ್ನು, ಲೌಡ್ ಸ್ಪೀಕರ್ಗಳನ್ನು ಈ ಕೂಡಲೇ ತೆರವುಗೊಳಿಸಬೇಕು ಎಂದು ನ್ಯಾಯಮೂರ್ತಿ ಆರ್ ಎಸ್ ರಾಠೊಡ್ ನೇತೃತ್ವದ ಹಸಿರು ಹಸಿರು ಪೀಠ ದೆಹಲಿ ಮುನಿಸಿಪಲ್ ಕೌನ್ಸಿಲ್ (ಎನ್ಎಂಡಿಸಿ)ಗೆ ಸೂಚಿಸಿದೆ.
ಜಂತರ್ ಮಂತರ್ ಪ್ರದೇಶದಲ್ಲಿ ನಡೆಯುತ್ತಿರುವ ಎಲ್ಲ ಪ್ರತಿಭಟನೆಗಳಿಂದಾಗಿ ಶಬ್ದ ಮಾಲಿನ್ಯ ಮತ್ತು ವಾಯು ಮಾಲಿನ್ಯ ಸೇರಿದಂತೆ ಪರಿಸರ ಸಂರಕ್ಷಣೆಯ ಕಾನೂನುಗಳ ಸಾರಾ ಸಗಟು ಉಲ್ಲಂಘನೆಯಾಗಿವೆ ಎಂದು ಹಸಿರು ಪೀಠ ಹೇಳಿದೆ.