ಯಶ್ವಂತ್ ಸಿನ್ಹಾ, 
ದೇಶ

ಅರ್ಥವ್ಯವಸ್ಥೆ ಅವ್ಯವಸ್ಥೆಯಾಗಿರುವಾಗ ಸುಮ್ಮನಿರಲಾರೆ: ಪ್ರಧಾನಿಗೆ ಯಶ್ವಂತ್ ಸಿನ್ಹಾ ತಿರುಗೇಟು

ದೇಶದ ಆರ್ಥಿಕ ವ್ಯವಸ್ಥೆ ಅವ್ಯವಸ್ಥೆಯಾಗುತ್ತಿರುವಾಗ ಸುಮ್ಮನೆ ಕುಳಿತಿರಲಾರೆ ಎಂದು ಮಾಜಿ ಕೇಂದ್ರ ಸಚಿವ ಯಶ್ವಂತ್ ಸಿನ್ಹಾ ಹೇಳಿದ್ದಾರೆ.

ನವದೆಹಲಿ: ದೇಶದ ಆರ್ಥಿಕ ವ್ಯವಸ್ಥೆ ಅವ್ಯವಸ್ಥೆಯಾಗುತ್ತಿರುವಾಗ ಸುಮ್ಮನೆ ಕುಳಿತಿರಲಾರೆ ಎಂದು ಮಾಜಿ ಕೇಂದ್ರ ಸಚಿವ ಯಶ್ವಂತ್ ಸಿನ್ಹಾ ಹೇಳಿದ್ದಾರೆ. 
ಇತ್ತೀಚೆಗಷ್ಟೆ ದೇಶದ ಆರ್ಥಿಕ ಪರಿಸ್ಥಿತಿಯ ಕುರಿತು ಮಾತನಾಡಿದ್ದ ಯಶ್ವಂತ್ ಸಿನ್ಹಾ, ದೇಶದ ಅರ್ಥವ್ಯವಸ್ಥೆ ಹದಗೆಡಲು ಅರುಣ್ ಜೇಟ್ಲಿ ಕಾರಣ ಎಂದು ಆರೋಪಿಸಿದ್ದರು. ಇದಾದ ಕೆಲವೇ ದಿನಗಳ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಯಶ್ವಂತ್ ಸಿನ್ಹಾ, ಅರ್ಥವ್ಯವಸ್ಥೆ ಅವ್ಯವಸ್ಥೆಯಾಗಿರುವಾಗ ಸುಮ್ಮನೆ ಕುಳಿತಿರಲಾರೆ, ನಾನು ಶಲ್ಯನಲ್ಲ, ಆದರೆ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟರೆ ಅದನ್ನು ಸಹಿಸಲಾರೆ ಎಂದು ಹೇಳಿದ್ದಾರೆ.
ಐಸಿಎಸ್ಐ ನಲ್ಲಿ ಅ.04 ರಂದು ಮಾತನಾಡಿದ್ದ ನರೇಂದ್ರ ಮೋದಿ ವಿರೋಧಿಗಳು ಶಲ್ಯ ವೃತ್ತಿಯಿಂದ (ನಿರಾಶಾದಾಯಕ ಮನಸ್ಥಿತಿ)ಯಿಂದ ಬಳಲುತ್ತಿರುತ್ತಾರೆ. ಅಂತಹವರು ನಿರಾಶಾವಾದದ ಭಾವನೆಯನ್ನು ಹರಡಿದ ನಂತರವಷ್ಟೇ ನೆಮ್ಮದಿಯಿಂದ ಇರುತ್ತಾರೆ ಎಂದು ಮೋದಿ ಹೇಳಿದ್ದರು. ಮೋದಿಯವರ ಹೇಳಿಕೆಗೆ ಸಂದರ್ಶನವೊಂದರಲ್ಲಿ ಪ್ರತಿಕ್ರಿಯೆ ನೀಡಿರುವ ಯಶ್ವಂತ್ ಸಿನ್ಹಾ, ನಾನು ಶಲ್ಯನಲ್ಲ, ಆಶಾವಾದವೋ, ನಿರಾಶಾವಾದವೋ ಎಂಬ ಪ್ರಶ್ನೆ ಮುಖ್ಯವಾಗುವುದಿಲ್ಲ. ಟೀಕೆ ಮಾಡುವವರು ಪ್ರಸ್ತಾಪಿಸಿರುವ ವಿಷಯವನ್ನು ಶೀಘ್ರವೇ ಸರಿಪಡಿಸುವ ನಿಟ್ಟಿನಲ್ಲಿ ಸರ್ಕಾರ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ ಎಂದು ಯಶ್ವಂತ್ ಸಿನ್ಹಾ ಹೇಳಿದ್ದಾರೆ. 
ಮಹಾಭಾರತದ ಯುದ್ಧದಲ್ಲಿ ಕರ್ಣ ಅರ್ಜುನನ ವಿರುದ್ಧ ಹೋರಾಡಲು ಹೋದಾಗ ಕರ್ಣನ ಸಾರಥಿಯಾಗಿದ್ದ ಶಲ್ಯರಾಜ ಕರ್ಣನನ್ನು ಎದೆಗುಂದುವಂತೆ ಮಾತನಾಡುತ್ತಾನೆ. ಆದ್ದರಿಂದ ನಕಾರಾತ್ಮಕ ಮನಸ್ಥಿತಿ, ನಕಾರಾತ್ಮಕ ಚಿಂತನೆ, ನಿರಾಶಾವಾದಿತನಕ್ಕೆ ಶಲ್ಯವೃತ್ತಿ ಎಂಬ ಹೆಸರು ಬಂದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ.ಕೆ ಶಿವಕುಮಾರ್ ಸ್ಫೋಟಕ ಆರೋಪ; Video

ಶಾಸಕರ ಲೆಟರ್‌ಹೆಡ್'ನಲ್ಲೇ 'ಸತ್ತಿದ್ದಾರೆ' ಎಂದು ಅರ್ಜಿ: ಯತ್ನಾಳ್ ಸೇರಿ ಮೂವರ ವಿರುದ್ಧ FIR ದಾಖಲು

ಹೆದ್ದಾರಿ ದಾಟುತ್ತಿದ್ದ ಕುರಿ-ಮೇಕೆಗಳ ಮೇಲೆ ಹರಿದ ಟ್ರಕ್; 23 ಕುರಿ, 2 ಮೇಕೆ ಸಾವು, ಭೀಕರ ವಿಡಿಯೋ ಸಿಸಿಟಿವಿಯಲ್ಲಿ ಸೆರೆ!

ಚಿಂತಾಮಣಿಯ Dictator, ನಿನ್ನ ವಿರುದ್ಧ ಸಮರ ನಿರಂತರ: ಎಂಸಿ ಸುಧಾಕರ್ ವಿರುದ್ಧ ಪ್ರದೀಪ್ ಈಶ್ವರ್ ಮತ್ತೆ ಕಿಡಿ

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!