ದೇಶ

ಗಲ್ಫ್ ಆಫ್ ಏಡೆನ್: ಕಡಲ್ಗಳ್ಳರಿಂದ ಹಡಗು ರಕ್ಷಿಸಿದ ಭಾರತೀಯ ನೌಕಾಪಡೆ

Srinivas Rao BV
ನವದೆಹಲಿ: ಗಲ್ಫ್ ಆಫ್ ಏಡೆನ್ ನಲ್ಲಿ ಕಡಲ್ಗಳ್ಳರು ಭಾರತೀಯ ಹಡಗಿನ ಮೇಲೆ ದಾಳಿ ನಡೆಸಲು ಯತ್ನಿಸಿದ್ದು, ತಕ್ಷಣವೇ ಎಚ್ಚೆತ್ತ ಭಾರತೀಯ ನೌಕಾಪಡೆ ಕಡಲ್ಗಳ್ಳರಿಂದ ಹಡಗನ್ನು ರಕ್ಷಿಸಿದೆ. 
ತ್ರಿಶೂಲ್ ನೌಕಾ ಹಡಗಿನ ಮೂಲಕ ರಕ್ಷಣೆ ಮಾಡಲಾಗಿದ್ದು, ಭಾರತೀಯ ಧ್ವಜವನ್ನು ಹೊಂದಿದ್ದ ಹಡಗನ್ನು ರಕ್ಷಿಸಲಾಗಿದೆ ಎಂದು ಪಿಟಿಐ ವರದಿ ತಿಳಿಸಿದೆ. ನೌಕಾಪಡೆಯ ಮಾಹಿತಿ ಪ್ರಕಾರ ನೌಕಾಪಡೆಯ ವಿಶೇಷ ತಂಡ 12 ಜನರನ್ನು ವಶಕ್ಕೆ ಪಡೆದಿದೆ.
ಇಂದು ಮಧ್ಯಾಹ್ನ 12.30ರ ಸುಮಾರಿಗೆ ಕಡಲ್ಗಳ್ಳರು ಎಂವಿ ಜಾಗ್ ಅಮರ್ ಭಾರತೀಯ ಹಡಗಿನ ಮೇಲೆ ದಾಳಿ ನಡೆಸಲು ಮುಂದಾದಾಗ ಐಎನ್ಎಸ್ ತ್ರಿಶೂಲ್ ನಲ್ಲಿದ್ದ ನೌಕಾಪಡೆ ಸಿಬ್ಬಂದಿ ಕಡಲ್ಗಳ್ಳರನ್ನು ಹಿಮ್ಮೆಟ್ಟಿಸಿದರು ಎಂದು ನೌಕಾದಳ ವಕ್ತಾರ ಕ್ಯಾಪ್ಟನ್ ಡಿಕೆ ಶರ್ಮಾ ಅವರು ಟ್ವೀಟ್ ಮಾಡಿದ್ದಾರೆ. 
ಈ ಹಿಂದೆ ಮೇ ನಲ್ಲಿ ಇದೇ ರೀತಿ ಕಡಲ್ಗಳ್ಳರು ಲಿಬೇರಿಯನ್ ವ್ಯಾಪಾರಿ ಹಡಗು ಲಾರ್ಡ್ ಮೌಂಟ್ಬ್ಯಾಟನ್ ಮೇಲೆ ದಾಳಿಗೆ ಮುಂದಾದಾಗ ಎಚ್ಚೆತ್ತ ಐಎನ್ಎಸ್ ಶರ್ದಾ ಕಡಲ್ಗಳ್ಳರನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿತ್ತು.
SCROLL FOR NEXT