ನವದೆಹಲಿ: ಬಿಜೆಪಿಯ ಅಧ್ಯಕ್ಷ ಅಮಿತ್ ಷಾ ಭಾನುವಾರ ಕೇರಳದಲ್ಲಿ ಬಿಜೆಪ, ಆರ್ ಎಸ್ ಎಸ್ ಕಾರ್ಯಕರ್ತರ "ರಾಜಕೀಯ ಹತ್ಯೆಗಳ" ಬಗ್ಗೆ ಮಾತನಾಡಿ ಸಿಪಿಐ-ಎಂ ಸರ್ಕಾರವನ್ನು ಜಾಡಿಸಿದ್ದಾರೆ. ಜನರಲ್ಲಿ "ಭಯ ಹುಟ್ಟಿಸುವ" ಮೂಲಕ ರಾಜ್ಯದಲ್ಲಿ ಬಿಜೆಪಿಯನ್ನು ವಿಸ್ತರಿಸಲು ಅಡ್ಡಿಯುಂಟುಮಾಡುವ ಉದ್ದೇಶದೊಂದಿಗೆ ಈ ಹತ್ಯೆಗಳು ನಡೆಯುತ್ತಿದೆ ಎಂದರು.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಜನ ರಕ್ಷಾ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇರಳದ ರಾಜಕೀಯ ಹತ್ಯೆಗಳು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಆದೇಶದ ಮೇರೆಗೆ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
"ಸಿಪಿಐ-ಎಂ (ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ-ಮಾವೋವಾದಿ) ಸರ್ಕಾರ ಕೇರಳದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ, 120 ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರ ಕೊಲೆಗಳಾಗಿವೆ, ಅಲ್ಲಿ ಅವರನ್ನು ಕ್ರೂರವಾಗಿ ಕೊಂದಿದ್ದಾರೆ" ಎಂದು ಷಾ ಹೇಳಿದರು, ಕೊನ್ನಾಟ್ ಪ್ಲೇಸ್ ನ ಸೆಂಟ್ರಲ್ ಪಾರ್ಕ್ ನ ಗೋಲ್ ಮಾರ್ಕೆಟ್ ನ ಸಿಪಿಐ-ಎಂ ಕೇಂದ್ರ ಕಚೇರಿವರೆಗೆ ನಡೆದ ಜನ ರಕ್ಷಾ ಯಾತ್ರೆಯಲ್ಲಿ ಷಾ ಭಾಗವಹಿಸಿದ್ದರು.
"ಭಾರತೀಯ ಜನತಾ ಪಕ್ಷ (ಬಿಜೆಪಿ) ಕಾರ್ಯಕರ್ತರನ್ನೇಕೆ ಹೊಡೆದು ಹಾಕಲಾಗುತ್ತದೆ? ಬಿಜೆಪಿಯನ್ನು ಬೆಂಬಲಿಸಿದರೆ ಅಥವಾ ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿದ್ದರೆ ಅವರು ಕೊಲ್ಲಲ್ಪಡುತ್ತಾರೆ ಎಂಬ ಸಂದೇಶವನ್ನು ನೀಡಲು ಅವರು ಬಯಸಿದ್ದಾರೆಯೆ?, ಏಕೆಂದರೆ ಬಿಜೆಪಿಗೆ ಬೆಂಬಲ ನೀಡುವುದಕ್ಕೆ ಜನರು ಅಂಜುವಂತೆ ಮಾಡುವುದು ಅವರ ಉದ್ದೇಶ" ಷಾ ಹೇಳಿದರು.
ಕೇರಳ ಮುಖ್ಯಮಂತ್ರಿಯ ತವರು ಜಿಲ್ಲೆ ಕಣ್ನೂರಿನಲ್ಲಿ ಹೆಚ್ಚಿನ ಹತ್ಯೆಗಳು ನಡೆದಿವೆ ಎಂದು ಶಾ ಹೇಳಿದರು.
"ಕೇರಳದಲ್ಲಿ, ಬಿಜೆಪಿ ಕಾರ್ಯಕರ್ತರನ್ನು ಕೊಂದವರ ವಿರುದ್ಧ ಯಾವುದೇ ಪ್ರಕರಣ ದಾಖಲಾಗುವುದಿಲ್ಲ! ಎಲ್ಲ ಕೊಲೆಗಳನ್ನು ಮುಖ್ಯಮಂತ್ರಿಯ ಆದೇಶದ ಮೇರೆಗೆ ಮಾಡಲಾಗುತ್ತದೆ" ಎಂದು ಅವರು ಆರೋಪಿಸಿದರು.
ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ, ಉಪಾಧ್ಯಕ್ಷ ಮತ್ತು ಕಾರ್ಯನಿರ್ವಾಹಕ ಶ್ಯಾಮ್ ಜೀಜು, ಪಕ್ಷದ ರಾಷ್ಟ್ರೀಯ ಕಛೇರಿ ಸಿಬ್ಬಂದಿಗಳು, ಸಂಸದರು, ಶಾಸಕರು, ಎಂಸಿಡಿ ಮುಖಂಡರು ಮತ್ತು ರಾಜ್ಯ ಕಚೇರಿ ಅಧಿಕಾರಿಗಳು ಷಾ ಅವರೊದನೆ ಸೇರಿಕೊಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics