ನವದೆಹಲಿ: ಶಿಕ್ಷಣ ಸಂಸ್ಥೆಗಳು ಧರ್ಮವನ್ನು ಪ್ರತಿಬಿಂಬಿಸಬಾರದು ಎಂಬ ಉದ್ದೇಶದಿಂದ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಹೆಸರಿನಲ್ಲಿರುವ ಮುಸ್ಲಿಂ ಪದವನ್ನು ಹಾಗೂ ಬನಾರ್ ಹಿಂದೂ ವಿಶ್ವವಿದ್ಯಾಲಯದ ಹೆಸರಿನಲ್ಲಿರುವ ಹಿಂದೂ ಪದವನ್ನು ಕೈಬಿಡಬೇಕೆಂದು ವಿಶ್ವವಿದ್ಯಾಲಯಗಳ ಅನುದಾನ ಆಯೋಗ (ಯುಜಿಸಿ) ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಕೇಂದ್ರ ವಿಶ್ವವಿದ್ಯಾಲಯಗಳಲ್ಲಿನ ಅಕ್ರಮಗಳ ಬಗೆಗಿನ ದೂರುಗಳನ್ನು ಅವಲೋಕಿಸಲು ಕಳೆದ ಏಪ್ರಿಲ್ 25ರಂದು ಯುಜಿಸಿಯಿಂದ ನೇಮಕಗೊಂಡಿದ್ದ 5 ಸಮಿತಿಗಳಲ್ಲಿ ಒಂದಾಗಿರುವ ಈ ಸಮಿಯು ಈ ಶಿಫಾರಸನ್ನು ಮಾಡಿದೆ.
ಕೇಂದ್ರ ವಿಶ್ವವಿದ್ಯಾಲಯಗಳಲ್ಲಿನ ಮೂಲ ಸೌಕರ್ಯ, ಶೈಕ್ಷಣಿಕ ಗುಣಮಟ್ಟ, ಸಂಶೋಧನೆ ಮತ್ತು ಹಣಕಾಸು ನಿರ್ವಹಣೆಗಳ ಕುರಿತಾಗಿ ಅಧ್ಯಯನ ನಡೆಸಿ ಅಲ್ಲಿನ ಲೋಪದೋಷಗಳ ಬಗ್ಗೆ ವರದಿ ಸಲ್ಲಿಸುವುದಕ್ಕಾಗಿ ನೇಮಿಸಲ್ಪಟ್ಟ ಈ ಸಮಿತಿಯು, ಶಿಕ್ಷಣ ಸಂಸ್ಥೆಗಳು ಧರ್ಮವನ್ನು ಪ್ರತಿಬಿಂಬಿಸಬಾರದು ಎಂದು ಹೇಳಿದ್ದು, ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಹೆಸರಿನಲ್ಲಿರುವ ಮುಸ್ಲಿಂ ಪದವನ್ನು ಮತ್ತು ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಹೆಸರಿನಲ್ಲಿರುವ ಹಿಂದು ಪದವನ್ನು ಕೈಬಿಡಬೇಕೆಂದು ಶಿಫಾರಸು ಮಾಡಿದೆ. ಅಲ್ಲದೆ, ಎಎಂಯು'ವನ್ನು ಅಲಿಘಡ ವಿಶ್ವವಿದ್ಯಾಲಯದವೆಂದು ಹಾಗೂ ಬಿಹೆಚ್'ಯುವನ್ನು ಬನಾರಸ್ ವಿಶ್ವವಿದ್ಯಾಲಯವೆಂದೂ ಪುನರ್ ನಾಮಕರಣ ಮಾಡಬಹುದು ಎಂಬ ಸಲಹೆಯನ್ನು ಸಮಿತಿ ನೀಡಿದೆ.
ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದವರು ಸರ್ ಸಯ್ಯದ್ ಅಹ್ಮದ್ ಖಾನ್, ಹಿಂದೂ ಬನಾರಸ್ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದವರು ಮದನ ಮೋಹನ್ ಮಾಳವೀಯ ಅವರು, ಈ ಎರಡೂ ವಿಶ್ವವಿದ್ಯಾಲಯಗಳು ಕೇಂದ್ರ ಸರ್ಕಾರದಿಂದ ಒದಗುವ ಹಣದಿಂದ ನಡೆಯುತ್ತಿರುವುದರಿಂದ ಅವುಗಳು ಧರ್ಮಗಳನ್ನು ಪ್ರತಿನಿಧಿಸುವ ಸಂಸ್ಥೆಗಳಾಗಿರಬಾರದು ಎಂದು ಸಮಿತಿ ಶಿಫಾರಸು ಮಾಡಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos