ದೇಶ

ಅರ್ಜಿ ಸಲ್ಲಿಕೆ ವಿಳಂಬದ ಕಾರಣ ವಿಮಾ ಪರಿಹಾರ ತಿರಸ್ಕರಿಸುವಂತಿಲ್ಲ: ಸುಪ್ರೀಂ ಕೋರ್ಟ್

Raghavendra Adiga
ನವದೆಹಲಿ: ವಿಮಾ ಪರಿಹಾರಕ್ಕಾಗಿ ಗ್ರಾಹಕರು ಅರ್ಜಿ ಸಲ್ಲಿಸುವುದು ವಿಳಂಬವಾಗಿದೆ ಎಂದ ಮಾತ್ರಕ್ಕೆ ಅವರಿಗೆ ಪರಿಹಾರ ನೀಡದೆ ತಿರಸ್ಕರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್​ ಆದೇಶಿಸಿದೆ.
ವಿಮಾ ಗ್ರಾಹಕರೊಬ್ಬರ ಮೊಕದ್ದಮೆ ಆಲಿಸಿದ ನ್ಯಾಯಾಲಯ  ವಿಮೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸುವಾಗ ವಿಳಂಬವಾದರೆ ಮತ್ತು ಹಾಗೆ ವಿಳಂಬವಾಗಲು ಸಮಾಧಾನಕರ ಕಾರಣಗಳಿದ್ದಲ್ಲಿ ಅಂತಹಾ ಗ್ರಾಹಕರಿಗೆ ಪರಿಹಾರ ಪರಿಹಾರ ನೀಡದೇ ಇರುವಂತಿಲ್ಲ ಎಂದು ಆದೇಶಿಸಿದೆ.
ನ್ಯಾಯಮುರ್ತಿಗಳಾದ ಆರ್​ ಕೆ ಅಗರ್ವಾಲ್​ ಮತ್ತು ಎಸ್​ ಅಬ್ದುಲ್​ ನಜೀರ ಅವರುಗಳಿದ್ದ ನ್ಯಾಯ ಪೀಠವು ಈ ಆದೇಶ ನೀಡಿದ್ದು, ತಾಂತ್ರಿಕ ಕಾರಣಗಳಿಗೆ ವಿಮಾ ಪರಿಹಾರ ನೀದದಿರುವಿಕೆಯು ಜನರಲ್ಲಿ ವಿಮೆಯ ಕುರಿತು ವಿಶ್ವಾಸ ಕಳೆದುಕೊಳ್ಳುವಂತೆ ಮಾಡುತ್ತದೆ ಎಂದಿದೆ.
ರಾಷ್ಟ್ರೀಯ ಗ್ರಾಹಕರ ವಿವಾದ ಪರಿಹಾರ ನಿಯೋಗ(ಎನ್ ಸಿಡಿಆರ್ ಸಿ)ಕ್ಕೆ ವಿಚಾರಣೆಗೆ ಬಂದಿದ್ದ ಪ್ರಕರಣವೊಂದರಲ್ಲಿ ಗ್ರಾಹಕರ ಪರವಾಗಿ ತೀರ್ಪು ಪ್ರಕಟಿಸಿದೆ. 
ಪ್ರಸಕ್ತ ಪ್ರಕರಣಕ್ಕೆ ಸಂಬಂಧಿಸಿ ರಿಲಾಯನ್ಸ್​ ಜನರಲ್ ಇನ್ಸುರೆನ್ಸ್​​ ಸಂಸ್ಥೆಗೆ ಟ್ರಕ್​ ಕಳ್ಳತನದ ಪ್ರಕರಣದಲ್ಲಿ ಗ್ರಾಹಕರಿಗೆ 8.35 ಲಕ್ಷ ರೂ. ಪರಿಹಾರ ನೀಡುವಂತೆ ನ್ಯಾಯಾಲಯ ಸೂಚಿಸಿದೆ. 
SCROLL FOR NEXT